ರಾಜ್ಯ ಸರ್ಕಾರದಿಂದ ವಿದ್ಯಾವಂತರಿಗೆ ವಂಚನೆ – ಛಲವಾದಿ

1 Min Read

ಬೆಂಗಳೂರು: ವಿದ್ಯಾವಂತರನ್ನ ವಂಚಿಸುವ ಕೆಲಸ ಸರ್ಕಾರ ಮಾಡ್ತಿದೆ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಆರೋಪಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, 2.84 ಲಕ್ಷ ಹುದ್ದೆ ತುಂಬಬೇಕು. ಈ ಬಗ್ಗೆ ಬಿಜೆಪಿ ದೊಡ್ಡಮಟ್ಟದ ಹೋರಾಟ ಮಾಡ್ತಿದೆ. ಕಳೆದ ತಿಂಗಳು 26ರಂದು ಧಾರವಾಡದಲ್ಲಿ ಹೋರಾಟ ಮಾಡಿದ್ವಿ. ತರಾತುರಿಯಲ್ಲಿ ಸಿಎಂ ಅವರು 56 ಸಾವಿರ ಹುದ್ದೆ ತುಂಬುತ್ತೇವೆ ಎಂದರು. ಬೆಳಗಾವಿ ಅಧಿವೇಶನದಲ್ಲಿ ಇದೇ ಪ್ರಶ್ನೆ ಮಾಡಿದ್ವಿ. 30 ರಿಂದ 36 ಸಾವಿರ ಹುದ್ದೆ ತುಂಬಿದ್ದೇವೆ ಅಂತ ತಪ್ಪು ಮಾಹಿತಿ ನೀಡಿದ್ರು. ನಿಲುವಳಿ ಸೂಚನೆ ಮಂಡಿಸಿದ್ದೇನೆ ಎಂದಿದ್ದಾರೆ.ಇದನ್ನೂ ಓದಿ: ವಿಧಾನಸಭೆಯಲ್ಲಿ ಗ್ಯಾಸ್ ಸಮರ; ಬಿಜೆಪಿ, ಕಾಂಗ್ರೆಸ್ ಗದ್ದಲ – ಕೇಂದ್ರ ಕಾರಣ ಎಂದು ಸಿಎಂ ಕಿಡಿ

2023ರಲ್ಲಿ 2022, 2021ರಲ್ಲಿ ನಮ್ಮ ಸರ್ಕಾರ ಇತ್ತು. ಕೆಪಿಎಸ್‌ಸಿ 7, ಕೆಇಇ 11 ನೋಟಿಫಿಕೇಷನ್ ಆಗಿದೆ. ಹಿಂದೆ ಇಂಟರ್ವ್ಯೂವ್ ಆಗಿರೋ 8,157 ಹುದ್ದೆ ಮಾಡಿದೆ, ನಮ್ಮ ಕಾಲದ ಸಾಧನೆಯನ್ನು ಅವರ ಸಾಧನೆ ಅಂತ ಹೇಳಿದ್ದಾರೆ. ಒಂದು ಹುದ್ದೆಯನ್ನು ಕೂಡ ಸರ್ಕಾರ ತುಂಬಿಲ್ಲ. 2023ರಲ್ಲಿ 824, 24ರಲ್ಲಿ 1251, 25ರಲ್ಲಿ 1006 ಹುದ್ದೆಗಳ ಆಯ್ಕೆ ಪ್ರಕ್ರಿಯೆ ನಡೆದಿದೆ. ಒಟ್ಟು 3081 ಹುದ್ದೆಗಳ ಪ್ರಕ್ರಿಯೆ ನಡೆದಿರೋ ಬಗ್ಗೆ ಅವರೇ ಉತ್ತರ ನೀಡಿದ್ದಾರೆ. ನಮ್ಮ ಕಾಲದಲ್ಲಿ ಆಗಿರೋದನ್ನ ತೋರಿಸಿ ರಾಜ್ಯದ ಜನರಿಗೆ ಅನ್ಯಾಯ ಮಾಡ್ತಿದೆ. ರಾಜ್ಯದ ಯುವಕರ ಪರವಾಗಿ ಬಿಜೆಪಿ ನಿಲ್ಲುತ್ತದೆ. ಸರ್ಕಾರದ ಕಿವಿ ಹಿಂಡುವ ಕೆಲಸ ಮಾಡುತ್ತೇವೆ. ಸಿಎಂ ಅವರೇ ಸದನಕ್ಕೆ ತಪ್ಪು ಮಾಹಿತಿ ನೀಡ್ತಿದ್ದಾರೆ. ಇದರಿಂದ ದಲಿತರಿಗೆ, ಯುವಕರಿಗೆ, ವಿದ್ಯಾವಂತರಿಗೆ ದೋಖಾ ಮಾಡ್ತಿದೆ ಎಂದು ಕಿಡಿಕಾರಿದ್ದಾರೆ.

Share This Article