– ಬೃಹತ್ ಕ್ರೀಡಾ ಸಂಕೀರ್ಣ ನಿರ್ಮಾಣಕ್ಕೆ ರಾಜ್ಯ ಸರ್ಕಾರದ ಅನುಮೋದನೆ
ಬೆಂಗಳೂರು: ಕ್ರಿಕೆಟ್ ಪ್ರೀಯರಿಗೊಂದು ಗುಡ್‌ನ್ಯೂಸ್. ಕ್ರೀಡೆಗೆ ಹೆಚ್ಚಿನ ಒತ್ತು ನೀಡಲು ಉದ್ಯಾನನಗರಿ ಬೆಂಗಳೂರಿನಲ್ಲಿ ಇನ್ನೊಂದು ಬೃಹತ್ ಕ್ರಿಕೆಟ್ ಸ್ಟೇಡಿಯಂ (Cricket Stadium) ತಲೆ ಎತ್ತಲಿದೆ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಅವಘಡ ಸಂಭವಿಸಿದ ಬೆನ್ನಲ್ಲೇ ಕರ್ನಾಟಕ ಸರ್ಕಾರ (Karnataka Government) ಈ ಮಹತ್ವದ ಹೆಜ್ಜೆ ಇಟ್ಟಿದೆ.
ಬೆಂಗಳೂರು ಜನರಿಗೆ ಸಿಹಿ ಸುದ್ದಿ!
ರಾಜಧಾನಿಯಲ್ಲಿ ಬೃಹತ್ ಕ್ರೀಡಾ ಸಂಕೀರ್ಣ ನಿರ್ಮಾಣಕ್ಕೆ ರಾಜ್ಯ ಸರ್ಕಾರದ ಅನುಮೋದನೆ:
– ಬೊಮ್ಮಸಂದ್ರದ ಸೂರ್ಯಸಿಟಿಯಲ್ಲಿ
– 75 ಎಕರೆ ಪ್ರದೇಶದಲ್ಲಿ
– ₹1,650 ಕೋಟಿ ವೆಚ್ಚ
– 60,000 ಆಸನ ಸಾಮರ್ಥ್ಯದ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣBengaluru’s Sporting Leap: Great news for… pic.twitter.com/WtP8Ydsn31
— DK Shivakumar (@DKShivakumar) August 12, 2025
ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ತಮ್ಮ ಎಕ್ಸ್ ಅಕೌಂಟ್‌ನಲ್ಲಿ ಪೋಸ್ಟ್ ಮಾಡಿ ಈ ಬಗ್ಗೆ ಅಧಿಕೃತಗೊಳಿಸಿದ್ದಾರೆ. ಬೊಮ್ಮಸಂದ್ರದ ಸೂರ್ಯಸಿಟಿಯಲ್ಲಿ ಬೃಹತ್ ಕ್ರೀಡಾ ಸಂಕೀರ್ಣ (Mega Sports Complex) ನಿರ್ಮಾಣಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಇದನ್ನೂ ಓದಿ: ಈ ವರ್ಷವೇ ಏಕದಿನ ಕ್ರಿಕೆಟ್‌ಗೆ ಗುಡ್‌ಬೈ ಹೇಳ್ತಾರಾ ರೋ-ಕೊ?
1,650 ಕೋಟಿ ರೂಪಾಯಿ ವೆಚ್ಚದಲ್ಲಿ 75 ಎಕರೆಯಲ್ಲಿ 60,000 ಆಸನಗಳ ಸಾಮರ್ಥ್ಯವುಳ್ಳ ಬೃಹತ್ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ ಆಗಲಿದ್ದು, ಇದು ರಾಜ್ಯದ ಅತಿ ದೊಡ್ಡ ಸ್ಟೇಡಿಯಂ ಅಂತಾ ಕರೆಸಿಕೊಳ್ಳಲಿದೆ. ಈ ಬೃಹತ್ ಕ್ರೀಡಾ ಸಂಕೀರ್ಣದಲ್ಲಿ ಒಳಾಂಗಣ, ಹೊರಾಂಗಣ ಕ್ರೀಡಾಂಗಣಗಳು, ಅತ್ಯಾಧುನಿಕ ಜಿಮ್, ತರಬೇತಿ ಕೌಶಲ್ಯಗಳು, ಒಲಿಂಪಿಕ್ ಗಾತ್ರದ ಈಜು ಕೊಳಗಳು, ಅತಿಥಿ ಗೃಹಗಳು, ಹಾಸ್ಟೆಲ್‌ಗಳು, ಹೋಟೆಲ್‌ಗಳು, ಕನ್ವೆನ್ಷನ್ ಹಾಲ್ ಅನ್ನು ಒಳಂಗೊಂಡಿರುತ್ತದೆ. ಇದನ್ನೂ ಓದಿ: 1 ತಿಂಗಳ ಬಳಿಕ ಬಿಳಿ ಗಡ್ಡದಲ್ಲಿ ಕೊಹ್ಲಿ ಪ್ರತ್ಯಕ್ಷ – ಏಕದಿನ ನಿವೃತ್ತಿ ಲೋಡಿಂಗ್ ಅಂತ ಪರ-ವಿರೋಧ ಚರ್ಚೆ
ಇತ್ತೀಚೆಗಷ್ಟೇ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ಸಂಭವಿಸಿತ್ತು. 2025ರ ಐಪಿಎಲ್ ಟೂರ್ನಿ ಗೆದ್ದ ರಾಯಲ್ ಚಾಲೆಂಜರ್ಸ್ ತಂಡ ಸಂಭ್ರಮಿಸಲು ಸ್ಟೇಡಿಯಂಗೆ ಬರಲು ಸೂಚಿಸಿತ್ತು. ಈ ಸಂಬಂಧ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಭ್ರಮಾಚರಣೆ ಮಾಡುವಾಗ ಕಾಲ್ತುಳಿತ ಸಂಭವಿಸಿತ್ತು. ಈ ಘಟನೆಯಲ್ಲಿ 11 ಜನರು ಜೀವ ಕಳೆದುಕೊಂಡಿದ್ದರು. ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಅಷ್ಟೊಂದು ಸ್ಥಳ ಇಲ್ಲದ ಕಾರಣ ಜನರು ಹೆಚ್ಚು ಸೇರಿದ್ದರಿಂದ ನೂಕುನುಗ್ಗಲಿನಿಂದ ಕಾಲ್ತುಳಿತ ಸಂಭವಿಸಿತ್ತು. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ದೊಡ್ಡ ಮೈದಾನ ನಿರ್ಮಾಣಕ್ಕೆ ಕೈ ಹಾಕಿದೆ. ಇದನ್ನೂ ಓದಿ: CSKಗೆ ಗುಡ್‌ಬೈ ಹೇಳಲು ಅಶ್ವಿನ್ ನಿರ್ಧಾರ – ಚೆನ್ನೈ ಸೂಪರ್ ಕಿಂಗ್ಸ್ ಸೇರಲು ಸಂಜು ಕಾತರ?