ರಾಜ್ಯಾದ್ಯಂತ ಸರ್ಕಾರಿ ಶಾಲೆಗಳಲ್ಲಿ 2,200 ಕೊಠಡಿಗಳ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ

2 Min Read

ಬೆಂಗಳೂರು: 2025-26ನೇ ಸಾಲಿನಲ್ಲಿ ಹೊಸ ಶಾಲಾ ಕೊಠಡಿಗಳ (School Rooms) ನಿರ್ಮಾಣ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಿ ರಾಜ್ಯ ಸರ್ಕಾರ (Karnataka Government) ಆದೇಶ ಹೊರಡಿಸಿದೆ.

ರಾಜ್ಯಾದ್ಯಂತ ಸರ್ಕಾರಿ ಶಾಲೆಗಳಲ್ಲಿ 360.01 ಕೋಟಿ ರೂ. ಅಂದಾಜು ವೆಚ್ಚದಲ್ಲಿ 2,200 ಕೊಠಡಿಗಳ ನಿರ್ಮಾಣ ಕಾಮಗಾರಿಯನ್ನು ಸಮರ್ಪಕವಾಗಿ ಕೈಗೊಳ್ಳಲು ಶಾಲಾ ಶಿಕ್ಷಣ ಇಲಾಖೆಗೆ (Education Department) ಆದೇಶಿಸಿದೆ. ಅನುದಾನ ಬಳಕೆಗೆ 14 ಮಾನದಂಡಗಳನ್ನ ಬಿಡುಗಡೆ ಮಾಡಿದ್ದು, ಅದರ ಅನ್ವಯವೇ ಅನ್ವಯ ಅನುದಾನ ಬಳಕೆಗೆ ಸೂಚನೆ ನೀಡಿದೆ. ಇದನ್ನೂ ಓದಿ: ದಲಿತ ಅಭಿವೃದ್ಧಿ ಹಣ ಗ್ಯಾರಂಟಿ ಯೋಜನೆಗೆ ಬಳಕೆ – ಸಮಾಜ ಕಲ್ಯಾಣ ಇಲಾಖೆಯಿಂದ ಅಂಕಿಅಂಶ ಬಿಡುಗಡೆ

ಆದೇಶ ಪ್ರತಿಯಲ್ಲಿ ಏನಿದೆ?
ಶಾಲಾ ಶಿಕ್ಷಣ ಇಲಾಖೆ ಆಯುಕ್ತರು 2025-26ನೇ ಸಾಲಿನಲ್ಲಿ ರಾಜ್ಯ ಯೋಜನೆಯಡಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ 360 ಕೋಟಿ ರೂ. ಮಂಜೂರು ಮಾಡಲಾದ ಪ್ರಸ್ತಾವನೆ ಸಲ್ಲಿಸಿದ್ದಾರೆ. ಒಟ್ಟು 359.86 ಕೋಟಿ ರೂ.ಗಳಿಗೆ ಶಾಲಾವಾರು ಕ್ರಿಯಾಯೋಜನೆ ನೀಡಲಾಗಿದೆ. ಇದರಲ್ಲಿ ಸಂಭಾವ್ಯ ಪಟ್ಟಿಯಲ್ಲಿರುವ 912 ಶಾಲೆಗಳಲ್ಲಿ ಅಗತ್ಯವಿರುವ 1,911 ಶಾಲಾ ಕೊಠಡಿಗಳ ನಿರ್ಮಾಣಕ್ಕೆ 325.32 ಕೋಟಿ ರೂ. ಅಂದಾಜು ವೆಚ್ಚವನ್ನು ಲೆಕ್ಕ ಹಾಕಲಾಗಿದೆ.

ಸಾಂದರ್ಭಿಕ ಚಿತ್ರ

ಸರ್ಕಾರಿ ಪ್ರಾಥಮಿಕ ಶಾಲಾ ತರಗತಿ ಕೊಠಡಿ ನಿರ್ಮಾಣ ಕಾಮಗಾರಿ 14.50 ಲಕ್ಷ ರೂ. ಹಾಗೂ ಪ್ರೌಢಶಾಲಾ ತರಗತಿ ಕೊಠಡಿ ನಿರ್ಮಾಣ ಕಾಮಗಾರಿಗೆ 17.15 ಲಕ್ಷ ರೂ. ಘಟಕ ವೆಚ್ಚಗಳಂತೆ ಲೆಕ್ಕ ಹಾಕಲಾಗಿದೆ. ಇದನ್ನೂ ಓದಿ: ಸದನದಲ್ಲಿ ʻಗೃಹಲಕ್ಷ್ಮಿʼ ಕದನ – ಲಕ್ಷ್ಮಿ ಹೆಬ್ಬಾಳ್ಕರ್‌ ಸದನದ ಗೌರವ ಕಳೆದ್ರು: ಆರ್‌.ಅಶೋಕ್‌ ಕಿಡಿ

ಹೊಸ ಶೌಚಾಲಯ ನಿರ್ಮಾಣಕ್ಕೆ 63 ಕೋಟಿ
ಅಲ್ಲದೇ ಸರ್ಕಾರಿ ಶಾಲೆಗಳಲ್ಲಿ ಹೊಸ ಶೌಚಾಲಯಗಳ ನಿರ್ಮಾಣಕ್ಕಾಗಿ 63.29 ಕೋಟಿ ರೂ. ಅನುದಾನವನ್ನು ಮಂಜೂರು ಮಾಡಲಾಗಿದೆ. ಮತ್ತು NREGA (ನರೇಗಾ) ಯೋಜನೆ ಅಡಿಯಲ್ಲಿ ಒಗ್ಗೂಡಿಸುವಿಕೆ. ಉಪಕ್ರಮಕ್ಕೆ ಕೆಲಸಗಳನ್ನ ಕೈಗೊಳ್ಳಬಹುದಾಗಿದೆ. ದುರಸ್ತಿಗಾಗಿ 100 ಕೋಟಿ ರೂ. ಮಂಜೂರು ಮಾಡಲಾಗಿದೆ. ಜೊತೆಗೆ ಸ್ಥಳೀಯ ಅವಶ್ಯಕತೆಗಳು ಮತ್ತು ಆದ್ಯತೆಗಳ ಪ್ರಕಾರ ನಿಯಮಗಳ ಅನುಸಾರ ಜಿಲ್ಲೆಗಳಿಂದ ಪ್ರಸ್ತಾವನೆಗಳನ್ನು ಸ್ವೀಕರಿಸಿದ ಬಳಿಕ ಕಾಮಗಾರಿ ಕೈಗೊಳ್ಳಬಹುದು ಎಂದು ಆದಶದಲ್ಲಿ ತಿಳಿಸಿದೆ.

14 ಮಾನದಂಡಗಳನ್ನ ನಿಗದಿಪಡಿಸಿರುವ ಸರ್ಕಾರ 2025-26 ಆರ್ಥಿಕ‌ ವರ್ಷದ ಅಂತ್ಯದೊಳಗೆ ಕಾರ್ಯಕ್ರಮವನ್ನ ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಕ್ರಮವಹಿಸುವಂತೆ ನಿರ್ದೇಶನ ನೀಡಿದೆ. ಇದನ್ನೂ ಓದಿ: ಕೊಬ್ಬರಿ ಬೆಳೆಗಾರರಿಗೆ ಗುಡ್‌ನ್ಯೂಸ್‌ – ಬೆಂಬಲ ಬೆಲೆ ಹೆಚ್ಚಿಸಿದ ಕೇಂದ್ರ ಸರ್ಕಾರ

Share This Article