ಕಾಂಗ್ರೆಸ್ `C Six’ ರೋಗದಿಂದ ರಾಜ್ಯವನ್ನು ರಕ್ಷಿಸಿ: ಪ್ರಧಾನಿ ಮೋದಿ

Public TV
2 Min Read

ಬೆಳಗಾವಿ/ಕೋಲಾರ/ಚಿಕ್ಕಮಗಳೂರು: ರಾಜ್ಯದ ಮುಂದಿನ 5 ವರ್ಷಗಳ ಭವಿಷ್ಯ ನಿರ್ಧಾರವಾಗುವ ದಿನಕ್ಕೆ ಇರುವುದು ಕೇವಲ ಮೂರು ದಿನ ಮಾತ್ರ. ಬಹಿರಂಗ ಪ್ರಚಾರಕ್ಕೆ ತೆರೆ ಬೀಳುವ ಒಂದು ದಿನ ಮೊದಲು ರಾಜ್ಯದ ಎಲ್ಲೆಡೆ ಪ್ರಚಾರದ ಕಾವು ಹೆಚ್ಚಾಗಿತ್ತು.

ಇಂದು ಪ್ರಧಾನಿ ಮೋದಿ ನಾಲ್ಕು ಕಡೆ ಬಿರುಸಿನ ಪ್ರಚಾರ ನಡೆಸುವ ಮೂಲಕ ಕೇತ್ರಗಳಲ್ಲಿ ಮತದಾರರ ಮನ ಗೆಲ್ಲಲು ಯತ್ನಿಸಿದರು. ತಮ್ಮ ನಾಲ್ಕು ಪ್ರಚಾರ ಸಮಾವೇಶಗಳಲ್ಲಿ ಕಾಂಗ್ರೆಸ್ ಟಾರ್ಗೆಟ್ ಮಾಡಿದ್ದ ಮೋದಿ ಆರೋಪಗಳ ಸುರಿಮಳೆಗೈದರು.

ಚಿಕ್ಕಮಗಳೂರಿನ ಸಮಾವೇಶದಲ್ಲಿ ಬೆಂಗಳೂರಿನ ಜಾಲಹಳ್ಳಿ ಅಪಾರ್ಟ್‍ಮೆಂಟ್‍ನಲ್ಲಿ ದೊರೆತ ರಾಶಿ ರಾಶಿ ವೋಟರ್ ಐಡಿ ವಿಷಯವನ್ನು ಪ್ರಸ್ತಾಪಿಸಿ ಕಾಂಗ್ರೆಸ್ ಪಕ್ಷ ಆಕ್ರಮ ಮತದಾನ ಮಾಡಲು ಪ್ಲಾನ್ ಮಾಡಿದೆ ಎಂದು ಆರೋಪಿಸಿದರು. ಅಲ್ಲದೇ ರಾಜ್ಯದಲ್ಲಿ ನಡೆಯುತ್ತಿರುವ ಐಟಿ ದಾಳಿ ಬಗ್ಗೆಯೂ ಪ್ರಸ್ತಾಪಿಸಿದ ಮೋದಿ ಬದಾಮಿಯಲ್ಲಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಹಣ ಹೊಳೆ ಹರಿಸುತ್ತಿದೆ ಎಂದು ಆರೋಪಿಸಿದರು.

ಇದಕ್ಕೂ ಮುನ್ನ ಕೋಲಾರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ `ಸಿ ಸಿಕ್ಸ್’ ವೈರಸ್ ದಾಳಿ ಮಾಡಿದೆ. ಸಿ ಸಿಕ್ಸ್ ಅಂದರೆ ಕಾಂಗ್ರೆಸ್, ಕಮ್ಯುನಲ್, ಕ್ಯಾಸ್ಟಿಸಮ್, ಕರಪ್ಶನ್, ಕ್ರೈಂ, ಕಂಟ್ರಾಕ್ಟ್ ರೋಗಗಳಿಂದ ರಾಜ್ಯದ ವ್ಯವಸ್ಥೆ ಹಾಳಾಗಿದೆ. ಕಾಂಗ್ರೆಸ್ ಸಂವಿಧಾನದ ರೀತಿ ನೀತಿಗಳನ್ನೇ ಹಾಳುಮಾಡಿದೆ, ಇವೆಲ್ಲವೂ ಕರ್ನಾಟಕದ ಭವಿಷ್ಯವನ್ನೇ ಹಾಳು ಮಾಡುತ್ತಿದೆ. ಮೈತ್ರಿ ಪಕ್ಷಗಳನ್ನು ಗಣನೆಗೆ ತೆಗೆದುಕೊಳ್ಳದೇ ನಾನೇ ಮುಂದಿನ ಪ್ರಧಾನಿ ಎಂದು ಹೇಳುವ ಮೂಲಕ ರಾಹುಲ್ ಅಹಂಕಾರ ತೋರಿದ್ದಾರೆ. ಕಾಂಗ್ರೆಸ್ ಡೀಲ್ ಪಾರ್ಟಿ. ಇದನ್ನು ಚುನಾವಣೆಯ ಅಭ್ಯರ್ಥಿಗಳ ಆಯ್ಕೆ ವೇಳೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರದ ಮೊಯ್ಲಿ ಅವರು ಹೇಳಿದ್ದಾರೆ ಎಂದರು.

ಬೆಳಗಾವಿಯ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕಿ ಭಾವಚಿತ್ರವೊಂದಿರುವ ಕುಕ್ಕರ್ ವಶಕ್ಕೆ ಪಡೆದ ವಿಚಾರವನ್ನು ಪ್ರಸ್ತಾಪಿಸಿದ ಅವರು, ಇದು ಪವಿತ್ರ ಚುನಾವಣೆಯೇ, ಇದು ಶೇ.10 ರಷ್ಟು ಪಡೆದ ಹಣವೇ ಎಂದು ಪ್ರಶ್ನಿಸಿದರು. ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಆಯ್ಕೆ ಮಾಡಲಾಗಿದೆ. ಮೊದಲ ಹಂತದಲ್ಲಿಯೇ ಬೆಳಗಾವಿ ನಗರ ಆಯ್ಕೆ ಆಗಿತ್ತು. ಆದರೇ ಕರ್ನಾಟಕದಲ್ಲಿ ನಿದ್ರೆ ಮಾಡುವ ಸರ್ಕಾರವಿದೆ. ಸ್ಮಾಟ್ ಸಿಟಿ ನಿರ್ಮಾಣ ಮಾಡಲು ನೀಡಲಾಗಿದ್ದ 836 ಕೋಟಿ ರೂ. ಗಳಲ್ಲಿ ಕೇವಲ 12 ಕೋಟಿ ರೂಪಾಯಿ ಖರ್ಚು ಮಾಡಿದೆ ಎಂದು ಆರೋಪಿಸಿದರು.

ಇದಕ್ಕೂ ಮುನ್ನ ತಮ್ಮ ಭಾಷಣದಲ್ಲಿ ಜಿಲ್ಲೆಯಲ್ಲಿ ಹರಿಯುವ ಐದು ನದಿಗಳನ್ನು ಪ್ರಸ್ತಾಪಿಸಿದ ಅವರು, ಬೆಳಗಾವಿಯಲ್ಲಿ ಕೃಷ್ಣಾ, ಘಟಪ್ರಭಾ, ಮಲಪ್ರಭಾ, ಹಿರಣ್ಯ ಕೇಶಿ, ಮಾರ್ಖಂಡೇಯ ಪ್ರಮುಖ ಐದು 5 ನದಿ ಹರಿಯುತ್ತಿವೆ. ಆದ್ರು ಈ ಭಾಗದಲ್ಲಿ ನೀರಿನ ಸಮಸ್ಯೆ ಇದೇ. ಇದು ಸರ್ಕಾರದ ವೈಫಲ್ಯವನ್ನು ತೋರಿಸುತ್ತದೆ ಎಂದು ಆರೋಪಿಸಿದರು.

https://www.youtube.com/watch?v=xNBtimUAH3s

https://www.youtube.com/watch?v=VWX-Sv-6dpo

 

Share This Article
Leave a Comment

Leave a Reply

Your email address will not be published. Required fields are marked *