ಶೆಟ್ಟರ್ ನಮ್ಮ ಸ್ಟಾರ್ ಪ್ರಚಾರಕರು: ಡಿಕೆಶಿ

Public TV
1 Min Read

ಬೆಂಗಳೂರು: ಜಗದೀಶ್ ಶೆಟ್ಟರ್ (Jagadish Shettar) ನಮ್ಮ ನಾಯಕರು ಹಾಗೂ ಸ್ಟಾರ್ ಪ್ರಚಾರಕರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ನಮ್ಮ ನಾಯಕರು. ಅವರನ್ನು ಬಿಜೆಪಿ (BJP) ಷಡ್ಯಂತರದಿಂದ ಏನು ಮಾಡುವುದಕ್ಕೂ ಆಗುವುದಿಲ್ಲ. ಶೋಭಾ ಕರಂದ್ಲಾಜೆ (Shobha Karandlaje) ಸೇರಿದಂತೆ ಬಿಎಸ್‌ವೈ ಮುಗಿಸಲಿಕ್ಕೆ ಯಾರೆಲ್ಲ ಪ್ರಯತ್ನ ಮಾಡ್ತಾ ಇದ್ದಾರೆ ಅನ್ನೋದು ರಾಜ್ಯಕ್ಕೆ ಗೊತ್ತು. ಇದಕ್ಕೆ ಸವದಿ, ಶೆಟ್ಟರ್ ಎಲ್ಲರೂ ಸಾಕ್ಷ್ಯ ನೀಡಿದ್ದಾರೆ ಎಂದ ಅವರು 20 ದಿನ ಮಾತ್ರ ಈ ಸರ್ಕಾರ ಇರುತ್ತದೆ. ಅದಕ್ಕೂ ಮುಂಚೆ ಸಿಎಂ ರಾಜೀನಾಮೆ ಕೊಟ್ಟರೇ ಒಳ್ಳೆದು, ಈಗಾಗಲೇ ಬಿಜೆಪಿ ಡ್ಯಾಂ ಒಡೆದು ಹೋಗಿದೆ ಎಂದು ಟೀಕಿಸಿದರು.

ಬಿಜೆಪಿ ಅವರು ಸಿಎಂ ಕಚೇರಿ, ಲೀಗಲ್ ತಂಡದಿಂದ ಕಾಂಗ್ರೆಸ್ (Congress) ಅಭ್ಯರ್ಥಿಗಳ ಅಫಿಡೇವಿಟ್ ತಿರಸ್ಕಾರ ಮಾಡುವ ಹುನ್ನಾರ ನಡೆಯುತ್ತಿದೆ. ಮುಖ್ಯಮಂತ್ರಿ ಆದೇಶದ ಮೇರೆಗೆ ಒತ್ತಡ ಹಾಕಲಾಗುತ್ತಿದೆ. ಲೀಗಲ್ ಟೀಂ ಕುತ್ಕೊಂಡು ಷಡ್ಯಂತರ ಮಾಡಿದ್ದಾರೆ. ರಾಜ್ಯದಲ್ಲಿ ನನ್ನ ಒಬ್ಬನ ಮಾಹಿತಿ ಡೌನ್ಲೋಡ್ ಮಾಡಿದ್ದಾರೆ. ಜೊತೆಗೆ ಅದೇ ರೀತಿ ಸವದತ್ತಿ ಯಲ್ಲಮ್ಮ ಕ್ಷೇತ್ರದಲ್ಲಿ ದೊಡ್ಡ ಯಡವಟ್ಟಾಗಿದೆ. ಅದರ ಬಗ್ಗೆ ಮುಖ್ಯಮಂತ್ರಿ ಕಚೇರಿಯಿಂದ ಚುನಾವಣಾಧಿಕಾರಿಗಳಿಗೆ ಒತ್ತಡ ಹಾಕುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸವದಿಯಿಂದ ಹಣ ಪಡೆದು ಬಿಜೆಪಿಗೆ ವೋಟ್‌ ಹಾಕಿ : ರಮೇಶ್ ಜಾರಕಿಹೊಳಿ

ಶೋಭಾ ಕರಂದ್ಲಾಜೆ ಆರೋಪಕ್ಕೆ ಪ್ರತಿಕ್ರಿಯಿಸಿ, ನಾನು 40% ಕಮಿಷನ್ ಪಡೆದಿಲ್ಲ. ಬಿಜೆಪಿ ಶಾಸಕರೇ ನಿಮ್ಮ ಪಕ್ಷ 40% ಕಮಿಷನ್ ಪಡೆದಿರುವ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ನಾವು ಬಿಲ್ಡಿಂಗ್ ಫಂಡ್ ತಗೆದುಕೊಳ್ಳಲಾಗಿದೆ. ಅಧಿಕೃತವಾಗಿ ಹಣ ಪಡೆಯಲಾಗಿದೆ. ನಿಮ್ಮ ಪಕ್ಷಕ್ಕೆ ಯಾರು ಯಾವ ರೀತಿ ಆರೋಪ ಕೊಟ್ಟಿದ್ದಾರೆ ಎನ್ನುವುದು ಗೊತ್ತಿದೆ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ನಾಮಪತ್ರ ತಿರಸ್ಕೃತ ಭೀತಿಯಲ್ಲಿದ್ದಾರೆ ಸವದತ್ತಿ ಬಿಜೆಪಿ ಅಭ್ಯರ್ಥಿ

Share This Article