42 ಕಡೆ 5 ಸಾವಿರಕ್ಕೂ ಕಡಿಮೆ ಅಂತರದ ಗೆಲುವು – 2023, 2018ರಲ್ಲಿ ಯಾರಿಗೆ ಎಷ್ಟು ಮತ?

Public TV
1 Min Read

ಬೆಂಗಳೂರು: ಕರ್ನಾಟಕ ಚುನಾವಣೆಯಲ್ಲಿ (Karnataka Election) 42 ಕಡೆ ಅಭ್ಯರ್ಥಿಗಳು 5 ಸಾವಿರಕ್ಕಿಂತ ಕಡಿಮೆ ಅಂತರದಲ್ಲಿ ಜಯಗಳಿಸಿದ್ದಾರೆ.

 ಕೇವಲ 1 ಸಾವಿರ ಮತಕ್ಕಿಂತ ಕಡಿಮೆ ಅಂತರದಲ್ಲಿ ನಾಲ್ವರು ಕಾಂಗ್ರೆಸ್, ಬಿಜೆಪಿಯ ಒಬ್ಬರು  ಗೆಲುವು ಸಾಧಿಸಿದ್ದಾರೆ. 5 ಕಡೆ ಗೆಲುವಿನ ಅಂತರ 20 ಸಾವಿರವಿದೆ.

ಕಾಂಗ್ರೆಸ್‌ (Congress) 135 ಸ್ಥಾನ ಪಡೆದು ಜಯಗಳಿಸಿದ್ದರೆ 111 ಕ್ಷೇತ್ರಗಳಲ್ಲಿ ಬಿಜೆಪಿಗೆ (BJP) ಎರಡನೇ ಸ್ಥಾನ ಸಿಕ್ಕಿದೆ. 8 ಕಡೆ ಗೆಲುವಿನ ಅಂತರಕ್ಕಿಂತ ನೋಟಾಗೆ ಜಾಸ್ತಿ ಮತ ಬಿದ್ದಿದೆ. ಬಿಜೆಪಿಯ 31, ಜೆಡಿಎಸ್‍ನ 139, 210 ಕ್ಷೇತ್ರಗಳಲ್ಲಿ ಎಎಪಿ ಅಭ್ಯರ್ಥಿಗಳು ಠೇವಣಿ ನಷ್ಟ ಅನುಭವಿಸಿದ್ದಾರೆ.  ಇದನ್ನೂ ಓದಿ: ಸಿಎಂ ಕುರ್ಚಿ ಫೈಟ್‌; 50-50 ಪ್ಲಾನ್‌ ಡಿಕೆಶಿ ಮುಂದಿಡ್ತಾರಾ ಸಿದ್ದು?

ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್‌ (JDS) ಮತ ಪ್ರಮಾಣ 40% ನಿಂದ 31% ಇಳಿಕೆಯಾಗಿದೆ. ಕಾಂಗ್ರೆಸ್‌ 35% ಮತ

ದ 41% ಏರಿಕೆಯಾಗಿದ್ದರೆ ಬಿಜೆಪಿ ಮತ ಪ್ರಮಾಣ 18% ನಿಂದ 22% ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಬಿಜೆಪಿ ಮತ ಪ್ರಮಾಣ 6% ಏರಿದ್ದರೆ ಮುಂಬೈ ಕರ್ನಾಟಕದಲ್ಲಿ 4% ಇಳಿಕೆಯಾಗಿದೆ ಎಂದು ಬಿಜೆಪಿ ಐಟಿ ಸೆಲ್‌ ಮುಖ್ಯಸ್ಥ ಅಮಿತ್‌ ಮಾಳವಿಯಾ ತಿಳಿಸಿದ್ದಾರೆ.

 

ಯಾರಿಗೆ ಎಷ್ಟು ಮತ ಬಿದ್ದಿದೆ?
ಕಾಂಗ್ರೆಸ್‌ – 1,67,89,272 (42.9%)
ಬಿಜೆಪಿ – 1,40,96,529 (36%)
ಜೆಡಿಎಸ್‌ – 52,05,489 (13.3%)

2018ರಲ್ಲಿ ಯಾರಿಗೆ ಎಷ್ಟು ಬಿದ್ದಿತ್ತು?
ಕಾಂಗ್ರೆಸ್‌ – 1,39,86,526 (38.24%)
ಬಿಜೆಪಿ – 1,33,28,524 (36.35%)
ಜೆಡಿಎಸ್‌ – 67, 26,667 (18.3%)

Share This Article