ಮಹಿಳೆಯರಿಗೆ ಉಚಿತ ಸರ್ಕಾರಿ ಬಸ್ ಪ್ರಯಾಣ – ಕಾಂಗ್ರೆಸ್‍ನಿಂದ 5ನೇ ಗ್ಯಾರಂಟಿ ಘೋಷಣೆ

Public TV
4 Min Read

ಮಂಗಳೂರು: ಕಾಂಗ್ರೆಸ್ (Congress) 5ನೇ ಗ್ಯಾರಂಟಿಯನ್ನು ಘೋಷಣೆ ಮಾಡಿದ್ದು, ಕರ್ನಾಟಕದಲ್ಲಿ (Karnataka) ಅಧಿಕಾರಕ್ಕೆ ಬಂದರೆ ರಾಜ್ಯದ ಮಹಿಳೆಯರಿಗೆ (Woman) ಸರ್ಕಾರಿ ಬಸ್ ಉಚಿತ ಪ್ರಯಾಣದ ವ್ಯವಸ್ಥೆ ಮಾಡುವುದಾಗಿ ಘೋಷಿಸಿದೆ.

ಕಾಂಗ್ರೆಸ್ 4 ಭರವಸೆಗಳ ಜೊತೆ ರಾಜ್ಯದ ಮಹಿಳೆಯರಿಗೆ ಮತ್ತೊಂದು ಭರವಸೆ ನೀಡಿದೆ. ಈ ಬಗ್ಗೆ ಮಂಗಳೂರಿನ ಕಾಂಗ್ರೆಸ್ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಮಾತನಾಡಿ, ಕೆಲವು ವರ್ಷಗಳಿಂದ ಇಲ್ಲಿ ಬಿಜೆಪಿ ಸರ್ಕಾರ ಇದೆ. ಆದರೆ ಇದನ್ನು ನೀವು ಆಯ್ಕೆ ಮಾಡಿರಲಿಲ್ಲ. ನಿಮ್ಮ ವೋಟ್‍ಗಳಿಂದ ಅದು ಬಂದಿರಲಿಲ್ಲ, ಬಿಜೆಪಿ ಅದನ್ನು ಕಳ್ಳತನದಿಂದ ಮಾಡಿತ್ತು. ಭ್ರಷ್ಟಾಚಾರ ಹಣದಿಂದ ಶಾಸಕರನ್ನು ಖರೀದಿಸಿದ್ದರು. ಸರ್ಕಾರವನ್ನು ನಮ್ಮಿಂದ ಕಳವು ಮಾಡಿದ್ದರು. ಕಳ್ಳತನ ಇವರಿಗೆ ಅಭ್ಯಾಸ ಆಗಿದೆ ಎಂದು ಕಿಡಿಕಾರಿದರು.

ಬಿಜೆಪಿಯವರು ಶಾಸಕ, ಗುತ್ತಿಗೆದಾರ, ಶುಗರ್ ಫ್ಯಾಕ್ಟರಿ ಎಲ್ಲವನ್ನೂ ಕಳವು ಮಾಡುತ್ತಾರೆ. ಈ ಚುನಾವಣೆ ರಾಜ್ಯವನ್ನು ಮೋದಿ ಕೈಯ್ಯಲ್ಲಿ ಕೊಡುವ ಚುನಾವಣೆ ಎಂದು ಬಿಜೆಪಿ ನಾಯಕರೊಬ್ಬರು ಹೇಳುತ್ತಾರೆ. ಈಗ ಯಾರ ಕೈಯ್ಯಲ್ಲಿದೆ? ಬಿಜೆಪಿ ಕೈಯ್ಯಲ್ಲೇ ಇದೆ ತಾನೆ ಎಂದ ಅವರು, ಎಲ್ಲದರಲ್ಲೂ 40% ಸರ್ಕಾರವಾಗಿದೆ ಎಂದು ಬಿಜೆಪಿ ವಿರುದ್ಧ ಗುಡುಗಿದರು.

ಬಿಜೆಪಿ ಸಿಎಂ ಸೀಟ್ ಎರಡು ಸಾವಿರ ಕೋಟಿಗೆ ಖರೀದಿಯಾಗುತ್ತೆ ಅಂತ ಬಿಜೆಪಿ ಶಾಸಕ ಹೇಳ್ತಾರೆ. ಗುತ್ತಿಗೆದಾರರ ಸಂಘ ಮೋದಿಗೆ ಭ್ರಷ್ಟಾಚಾರದ ಬಗ್ಗೆ ಪತ್ರ ಬಡೆಯುತ್ತಾರೆ. ಆದರೆ ಮೋದಿ ಈವರೆಗೆ ಅದನ್ನು ಸ್ವೀಕರಿಸಿಲ್ಲ, ಉತ್ತರ ಕೂಡ ಕೊಟ್ಟಿಲ್ಲ ಎಂದು ವಾಗ್ದಾಳಿ ನಡೆಸಿದರು.

ದಿಂಗಾಲೇಶ್ವರ ಸ್ವಾಮೀಜಿ ಕೂಡ ಕಮಿಷನ್ ಬಗ್ಗೆ ಹೇಳಿದ್ದಾರೆ. ಸ್ವಾಮೀಜಿ ಬಳಿ 30% ತೆಗೆದುಕೊಂಡಿರುವುದು ಇವರ ಭ್ರಷ್ಟಾಚಾರದ ಧರ್ಮ. ಒಬ್ಬ ಶಾಸಕರ ಮಗನ ಮನೆಯಲ್ಲಿ 8 ಕೋಟಿ ಭ್ರಷ್ಟಾಚಾರ ಹಣ ಸಿಕ್ಕಿದೆ. ಪಿಎಸ್‍ಐ ಹಗರಣ, ಎಇಇ ಹಗರಣ, ಪೆÇ್ರಪೆಸರ್ ನೇಮಕಾತಿ ಹಗರಣ, ಒಂದು ಕಡೆ ಭ್ರಷ್ಟಾಚಾರ ಮತ್ತು ಇನ್ನೊಂದು ಕಡೆ ಬೆಲೆ ಏರಿಕೆಯಾಗಿದೆ ಎಂದು ಗುಡುಗಿದ ಅವರು, ಪೆಟ್ರೋಲ್ ಮೇಲೆ 60 ರಿಂದ 90 ರೂ. ಆಗಿದೆ. ಅಡಿಗೆ ಅನಿಲ 400 ರಿಂದ 1100 ರೂ. ಆಗಿದೆ. ನೋಟ್ ಬ್ಯಾನ್ ಬಡವರ ಹಣವನ್ನು ಕಡಿದುಕೊಂಡಿದೆ. ಯುವಕರಿಗೆ ಉದ್ಯೋಗ ಸಿಗ್ತಾ ಇಲ್ಲ, ಬಿಜೆಪಿ ಸರ್ಕಾರ ಉದ್ಯೋಗ ಕಲ್ಪಿಸಲ್ಲ. 40 ಕೋಟಿ ಜನ ಮತ್ತೆ ಬಡತನ ರೇಖೆಯ ಕೆಳಗೆ ಹೋಗಿದ್ದಾರೆ. 90 ಲಕ್ಷ ಸಣ್ಣ ಮತ್ತು ಮಾಧ್ಯಮ ಕೈಗಾರಿಕೆ ಮುಚ್ಚಿ ಹೋಗಿದೆ. ಇದು ಬಿಜೆಪಿಯ ವಿಕಾಸ ಮಂತ್ರವಾಗಿದೆ ಎಂದು ಕಿಡಿಕಾರಿದರು.

ಚುನಾವಣೆಗೆ ಮೊದಲು ಕಾಂಗ್ರೆಸ್‍ನ ಹಿರಿಯ ನಾಯಕರನ್ನು ಭೇಟಿ ಆದೆವು. ಅಲ್ಲಿ ನಾವು ರಾಜ್ಯದ ಜನರಿಗೆ ಏನು ಕೊಡಬಹುದು ಅಂತ ಕೇಳಿದೆ. ಮಹಿಳೆಯರು, ಕಾರ್ಮಿಕರು, ಕೃಷಿಕರಲ್ಲೂ ನಾವು ಅದನ್ನು ಕೇಳಿದೆವು. ನಮ್ಮ ಪ್ರಶ್ನೆಗೆ ನೀವು 4 ಉತ್ತರ ಕೊಟ್ರಿ. ಈ ಹಿನ್ನೆಲೆಯಲ್ಲಿ ರಾಜ್ಯದ ಮಹಿಳೆಯರು ಗೃಹ ಲಕ್ಷ್ಮಿ ಭರವಸೆ ಕಾಂಗ್ರೆಸ್ ಪಕ್ಷ ನೀಡಿದೆ ಎಂದರು.

ಪ್ರತೀ ಕುಟುಂಬದ ಮಹಿಳೆಗೆ ತಿಂಗಳಿಗೆ ಎರಡು ಸಾವಿರ ರೂ., ಗೃಹಜ್ಯೋತಿ ಮೂಲಕ 200 ಯುನಿಟ್ ವಿದ್ಯುತ್ ಉಚಿತ, 10 ಕೆ.ಜಿ ಉಚಿತ ಪಡಿತರ ಅಕ್ಕಿ, ಪದವೀಧರರಿಗೆ 1500 ರೂ. ನೀಡುವ ಭರವಸೆ ನೀಡಿದೆ. ರಾಜ್ಯದಲ್ಲಿ ಹಣಕ್ಕೆ ಏನೂ ಕೊರತೆ ಇಲ್ಲ, ಈ ಕೆಲಸವನ್ನು ಪ್ರಾಮಾಣಿಕ ಸರ್ಕಾರ ಮಾಡಲಿದೆ. ಮೊದಲ ಕ್ಯಾಬಿನೆಟ್‍ನಲ್ಲೇ ಇದು ಜಾರಿ ಮಾಡಲು ಕಾಂಗ್ರೆಸ್ ಪಕ್ಷ ನಿರ್ಧಾರ ಮಾಡಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಸೋಮಣ್ಣ ಪ್ರಚಾರದ ವೇಳೆ ಕಾಂಗ್ರೆಸ್ ಕಾರ್ಯಕರ್ತರಿಂದ ಕಲ್ಲು ತೂರಾಟ – ಓರ್ವನಿಗೆ ಗಾಯ

ಮೋದಿ 15 ಲಕ್ಷ ನಿಮ್ಮ ಖಾತೆಗೆ ಹಾಕ್ತೀನಿ ಅಂತ ಹೇಳಿದರು. ಯಾವುದೇ ಒಂದು ಭರವಸೆ ಮೋದಿ ಈಡೇರಿಸಿಲ್ಲ. ಕಪ್ಪು ಹಣ ಜಾಸ್ತಿ ಆಯ್ತು, ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಕ್ಕೆ ನನ್ನನ್ನ ಅನರ್ಹ ಮಾಡಿದರು. ಮೋದಿ ರಾಜ್ಯದಲ್ಲಿ ಭಾಷಣ ಮಾಡಲು ಹೋದಾಗ ಅವರ ಪಕ್ಕದಲ್ಲಿ ಕೂತವರು ಎಲ್ಲರೂ ಭ್ರಷ್ಟರೇ ಆಗಿದ್ದರು. ಅದಾನಿಗೂ ಮೋದಿಗೂ ಸಂಬಂಧ ಏನು? ವಿದೇಶದಲ್ಲಿರುವ ನಕಲಿ ಕಂಪೆನಿಗಳ ಬಗ್ಗೆ ಉತ್ತರ ಕೊಡಲಿಲ್ಲ. ಪಾರ್ಲಿಮೆಂಟ್‍ನಲ್ಲಿ ಮೈಕ್ ಆಫ್ ಮಾಡಿ ನನ್ನನ್ನ ಹೊರಗೆ ಹಾಕಿದರು ಎಂದು ಆರೋಪಿಸಿದರು.

ನಾವು ನಮ್ಮ ಭರವಸೆ ಈಡೇರಿಸುತ್ತೇವೆ, ಮೋದಿ ಈಡೇರಿಸಲ್ಲ. ನಾವು ಬಹಳ ನಿಶ್ಚಿತವಾಗಿ ಈ 5 ಭರವಸೆಗಳ ಅನುಷ್ಠಾನದ ಬಗ್ಗೆ ಹೇಳುತ್ತೇವೆ. ನಾವು ಈ 5 ಭರವಸೆಗಳನ್ನು ಕರ್ನಾಟಕದಲ್ಲಿ ಅನುಷ್ಠಾನಕ್ಕೆ ತರುತ್ತೇವೆ. ಪ್ರಧಾನಿ ಮೋದಿ ಈ ಭರವಸೆಗಳನ್ನು ಇಡೀ ಭಾರತದಲ್ಲಿ ಜಾರಿಗೆ ತರಲಿ ಎಂದು ಹೇಳಿದರು. ಇದನ್ನೂ ಓದಿ: ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿಯಿಲ್ಲ – ಯಾರ ಪಾಲಾಗಲಿದೆ ಅರಕಲಗೂಡು ಕ್ಷೇತ್ರ?

Share This Article