ಕರ್ನಾಟಕ ಮತದಾರರನ್ನು ಸೆಳೆಯಲೆಂದೇ ಮೋದಿ ನೇಪಾಳ ದೇವಾಲಯಕ್ಕೆ ಭೇಟಿ: ಅಶೋಕ್ ಗೆಹ್ಲೋಟ್

Public TV
1 Min Read

ನವದೆಹಲಿ: ಕರ್ನಾಟಕ ಮತದಾರರನ್ನು ಸೆಳೆಯುವ ಉದ್ದೇಶದಿಂದಲೇ ಪ್ರಧಾನಿ ಮೋದಿ ನೇಪಾಳದಲ್ಲಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ ಎಂದು ರಾಜಸ್ಥಾನ ಕಾಂಗ್ರೆಸ್ ಹಿರಿಯ ನಾಯಕ ಅಶೋಕ್ ಗೆಹ್ಲೋಟ್ ಆರೋಪಿಸಿದ್ದಾರೆ.

ಕರ್ನಾಟಕದಲ್ಲಿ ಈಗ ನೀತಿ ಸಂಹಿತೆಯಿದೆ. ಈ ಕಾರಣಕ್ಕೆ ಮತದಾರರನ್ನು ಸೆಳೆಯಲು ಮೋದಿ ಚುನಾವಣೆಯ ದಿನದಂದೇ ನೇಪಾಳದಲ್ಲಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ.

ಮೋದಿ ದೇವಾಲಯಕ್ಕೆ ಭೇಟಿ ನೀಡಿರುವುದು ಪ್ರಜಾಪ್ರಭುತ್ವದ ಉದ್ದೇಶದಿಂದ ಒಳ್ಳೆಯದಲ್ಲ. ದೇವಾಲಯಕ್ಕೆ ಬೇರೆ ದಿನ ಭೇಟಿ ನೀಡಬಹುದಿತ್ತು. ಚುನಾವಣೆಯ ದಿನವೇ ಈ ಸ್ಥಳಕ್ಕೆ ಭೇಟಿ ನೀಡುವ ದಿನವನ್ನು ನಿಗದಿ ಪಡಿಸಿದ್ದು ಯಾಕೆ ಎಂದು ಅವರು ಪ್ರಶ್ನಿಸಿದ್ದಾರೆ.

ಎರಡು ದಿನದ ಪ್ರವಾಸಕ್ಕಾಗಿ ಪ್ರಧಾನಿ ಮೋದಿ ಶುಕ್ರವಾರ ನೇಪಾಳಕ್ಕೆ ತೆರಳಿದ್ದು, ಇಂದು ಮುಕ್ತಿಧಾಮ ಮತ್ತು ಪಶುಪತಿನಾಥ್ ದೇವಾಲಯಕ್ಕೆ ಭೇಟಿ ನೀಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *