RSS ಹಿನ್ನೆಲೆಯ ಶೆಟ್ಟರ್ ಪರ ಸೋನಿಯಾ ಗಾಂಧಿ ಪ್ರಚಾರ: ಓವೈಸಿ ಕಿಡಿ

Public TV
1 Min Read

ಬೆಂಗಳೂರು: ಆರ್‌ಎಸ್‍ಎಸ್ ಹಿನ್ನೆಲೆಯಿರುವ ವ್ಯಕ್ತಿಯ ಪರ ಸೋನಿಯಾ ಗಾಂಧಿ (Sonia Gandhi) ಪ್ರಚಾರ ಮಾಡುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ (Asaduddin Owaisi) ವಾಗ್ದಾಳಿ ನಡೆಸಿದರು.

ಇತ್ತೀಚೆಗಷ್ಟೇ ಬಿಜೆಪಿ ಜೊತೆಗಿನ ಸಂಬಂಧವನ್ನು ಮುರಿದುಕೊಂಡು ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದ ಜಗದೀಶ್ ಶೆಟ್ಟರ್ ಪರ ಹುಬ್ಬಳ್ಳಿಯಲ್ಲಿ ಪ್ರಚಾರ ನಡೆಸಿದ್ದ ಸೋನಿಯಾ ಗಾಂಧಿ ವಿರುದ್ಧ ಓವೈಸಿ ಕಿಡಿಕಾರಿದರು.

ಸೋನಿಯಾ ಗಾಂಧಿಯವರು ಆರ್‌ಎಸ್‍ಎಸ್ ಪರ ಪ್ರಚಾರ ಮಾಡುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ. ಜಗದೀಶ್ ಶೆಟ್ಟರ್ (Jagadish Shettar) ಆರ್‌ಎಸ್‍ಎಸ್‍ನವರು. ಈ ರೀತಿ ಪ್ರಚಾರದಿಂದಾಗಿ ಕಾಂಗ್ರೆಸ್ ಸೈದ್ಧಾಂತಿಕವಾಗಿ ಸೋತಿದೆ. ಇದು ಜಾತ್ಯತೀತತೆಗಾಗಿ ನಿಮ್ಮ ಹೋರಾಟವೇ? ನೀವು ಮೋದಿ ವಿರುದ್ಧ ಹೀಗೆಯೇ ಹೋರಾಡುತ್ತೀರಾ ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ ಪಕ್ಷದ ಜೋಕರ್‌ಗಳು, ಗುಲಾಮರು ಮತ್ತು ಸೇವಕರು ನಮ್ಮನ್ನು ಆರೋಪಿಗಳಾಗಿ ಮಾಡುತ್ತಿದೆ.  ಅಷ್ಟೇ ಅಲ್ಲದೇ ನಮ್ಮ ಪಕ್ಷವನ್ನು ಬಿಜೆಪಿಯ ಬಿ- ಟೀಮ್ ಎಂದು ಪರಿಗಣಿಸುತ್ತಾರೆ ಎಂದು ಗುಡುಗಿದರು. ಇದನ್ನೂ ಓದಿ: ವರುಣಾ, ಚಾಮರಾಜನಗರದಲ್ಲಿ ಸ್ಪರ್ಧೆ ವಿಧಿ ನಿಯಮ : ಸೋಮಣ್ಣ

ಮೇ 10ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನಿರಾಕರಿಸಿದ ನಂತರ ಜಗದೀಶ್ ಶೆಟ್ಟರ್ ಕಳೆದ ತಿಂಗಳು ಬಿಜೆಪಿಗೆ ರಾಜೀನಾಮೆ ನೀಡಿದ್ದರು. ಅದಾದ ಬಳಿಕ ಕಾಂಗ್ರೆಸ್ ಸೇರ್ಪಡೆಗೊಂಡು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಇದನ್ನೂ ಓದಿ: ಅವನು ಯಾರೋ ಕೆಲಸಕ್ಕೆ ಬಾರದೇ ಇರೋ ಐಪಿಎಸ್ – ಅಣ್ಣಾಮಲೈ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿ

Share This Article