ಮತ್ತೆ ಜೆಡಿಎಸ್‌ ಬಾಗಿಲು ತಟ್ಟಿದ ದತ್ತಾ

Public TV
1 Min Read

ಬೆಂಗಳೂರು: ಕಾಂಗ್ರೆಸ್‌ನಿಂದ (Congress) ಟಿಕೆಟ್‌ ತಪ್ಪಿದ ಹಿನ್ನೆಲೆಯಲ್ಲಿ ವೈಎಸ್‌ವಿ ದತ್ತಾ (YSV Datta) ಮರಳಿ ಜೆಡಿಎಸ್‌ (JDS) ಮನೆಯ ಬಾಗಿಲನ್ನು ತಟ್ಟಿದ್ದಾರೆ.

ಇಂದು ಪದ್ಮನಾಭನಗರದಲ್ಲಿ ಮಾಜಿ ಪ್ರಧಾನಿ ದೇವೇಗೌಡರನ್ನು (HD Devegowda) ಭೇಟಿಯಾಗಿ ದತ್ತಾ ಮಾತುಕತೆ ನಡೆಸಿದ್ದಾರೆ. ಯಾವುದೇ ಅಪೇಕ್ಷೆ ಇಲ್ಲದೆ ಪಕ್ಷವನ್ನು ಸೇರ್ಪಡೆಯಾಗುತ್ತೇನೆ ಎಂದ ದತ್ತಾ ತಿಳಿಸಿದ್ದಾರೆ ಎನ್ನಲಾಗಿದೆ.

ದತ್ತಾ ಮನವಿಗೆ ದೇವೇಗೌಡರು, ಯಾವುದೇ ಭರವಸೆ ನೀಡದೇ ಕುಮಾರಸ್ವಾಮಿ (Kumaraswamy) ಜೊತೆ ಚರ್ಚಿಸುತ್ತೇನೆ. ಕುಮಾರಸ್ವಾಮಿ ನಿರ್ಧಾರವೇ ಅಂತಿಮ ಎಂದು ಹೇಳಿದ್ದಾರೆ. ಇದನ್ನೂ ಓದಿ: ದೇಶಕ್ಕೆ ದೇವೇಗೌಡರು, ರಾಜ್ಯಕ್ಕೆ ಕುಮಾರಣ್ಣ, ಹಾಸನಕ್ಕೆ ರೇವಣ್ಣ : ಎ.ಮಂಜು – ಭವಾನಿ ಜುಗಲ್ ಬಂದಿ

ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದ ದತ್ತಾ ಕಡೂರು (Kaduru) ಕ್ಷೇತ್ರದ ಟಿಕೆಟ್‌ಗೆ ಬೇಡಿಕೆ ಇಟ್ಟಿದ್ದರು. ಆದರೆ ಕಾಂಗ್ರೆಸ್‌ ಕಡೂರು ಕ್ಷೇತ್ರದ ಟಿಕೆಟ್‌ ಅನ್ನು ಆನಂದ್‌ ಅವರಿಗೆ ನೀಡಿದೆ. ಈ ನಿರ್ಧಾರದಿಂದ ಬೇಸತ್ತ ದತ್ತಾ ಅಭಿಮಾನಿಗಳ ಜೊತೆ ಸಭೆ ನಡೆಸಿ ಸ್ವಾಭಿಮಾನಿಯಾಗಿ ಚುನಾವಣೆ ಎದುರಿಸುತ್ತೇನೆ ಎಂದು ಹೇಳಿದ್ದರು.


ದತ್ತಾ ಕಾಂಗ್ರೆಸ್‌ ಸೇರ್ಪಡೆ ಬಗ್ಗೆ ಪ್ರತಿಕ್ರಿಯಿಸಿದ್ದ ಕುಮಾರಸ್ವಾಮಿ, ಪಕ್ಷ ಬಿಟ್ಟು ಹೋದವರನ್ನು ಮತ್ತೆ ಸೇರಿಸುವ ಪ್ರಶ್ನೆಯೇ ಇಲ್ಲ. ಅವರು ಇಂಟರ್‌ನ್ಯಾಷನಲ್‌ ಪಕ್ಷವನ್ನು ಸೇರಿದ್ದಾರೆ. ನಮ್ಮದು ಪ್ರಾದೇಶಿಕ ಪಕ್ಷ ಎಂದು ಹೇಳಿ ವ್ಯಂಗ್ಯವಾಡಿದ್ದರು.

Share This Article