130 ರಿಂದ 135 ಸೀಟ್ ಗೆದ್ದು ಸರ್ಕಾರ ರಚನೆ ಮಾಡೋದು ಸೂರ್ಯ ಚಂದ್ರ ಇರುವಷ್ಟೇ ಸತ್ಯ: ಬಿಎಸ್‌ವೈ

Public TV
1 Min Read

ಬೆಳಗಾವಿ: ರಾಜ್ಯದಲ್ಲಿ 130ರಿಂದ 135 ಸೀಟ್ ಗೆದ್ದು ಸರ್ಕಾರ ರಚನೆ ಮಾಡೋದು ಸೂರ್ಯ ಚಂದ್ರ ಎಷ್ಟು ಸತ್ಯವೋ ಅಷ್ಟೇ ಸತ್ಯ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (B.S.Yediyurappa) ವಿಶ್ವಾಸ ವ್ಯಕ್ತಪಡಿಸಿದರು.

ಬೆಳಗಾವಿ (Belagavi) ಉತ್ತರ ಕ್ಷೇತ್ರದಲ್ಲಿ ಬಿಜೆಪಿ (BJP) ಚುನಾವಣಾ (Election) ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಒಂದು ಕಾಲದಲ್ಲಿ ಹಣಬಲ, ತೋಳ್ಬಲ ಹಾಗೂ ಜಾತಿ ವಿಷಬೀಜ ಬಿತ್ತಿ ಚುನಾವಣೆ ಗೆಲ್ಲುತ್ತಿದ್ದರು. ಇಂದು ಜನರು ಜಾಗೃತರಾಗಿದ್ದಾರೆ. ಯುವಕ ಯುವತಿಯರು ಬಿಜೆಪಿಯತ್ತ ನೋಡುತ್ತಿದ್ದಾರೆ. ಯುವಕರ ಭವಿಷ್ಯಕ್ಕಾಗಿ ಬಿಜೆಪಿ ಸರ್ಕಾರ ಬರಬೇಕು ಎಂದರು. ಇದನ್ನೂ ಓದಿ: ಗ್ಯಾರಂಟಿ ಯೋಜನೆ ಮನೆ ಮನೆ ತಲುಪುತ್ತಿದೆ: ಡಿಕೆ ಶಿವಕುಮಾರ್

ಡಾ.ರವಿ ಪಾಟೀಲ್ (Dr.Ravi Patil) ಗೆಲ್ಲುವ ಜವಾಬ್ದಾರಿ ಅನಿಲ್ ಬೆನಕೆ (Anil Benake) ಮೇಲಿದೆ. ಅವರು ಇನ್ನೂ ಸ್ವಲ್ಪ ಶ್ರಮ ಹಾಕಿದರೆ ನಮ್ಮ ಅಭ್ಯರ್ಥಿಯ ಗೆಲುವು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಪ್ರಧಾನಿ ಮೋದಿ ದೇಶ-ವಿದೇಶ ಹೋಗಿ ಬಂದರೂ ಒಂದು ದಿನ ವಿಶ್ರಾಂತಿ ಪಡೆದಿಲ್ಲ. ತಾವೆಲ್ಲರೂ ಇಂದು ಪ್ರಧಾನಿ ನರೇಂದ್ರ ಮೋದಿ ಮನ್ ಕೀ ಬಾತ್ ಕೇಳಿದ್ದೀರಿ. ಅದರಲ್ಲಿ ಮೋದಿ ದೇಶದ ಪ್ರಚಲಿತ ರಾಜಕೀಯದ ಬಗ್ಗೆ ಮಾತನಾಡಿದ್ದಾರೆ. ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ಮಾಡಲು ಏನೇನು ಮಾಡಬೇಕು ಎಂದು ಸಲಹೆ ನೀಡಿದ್ದಾರೆ. ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಸಲುವಾಗಿ ಸಂಕಲ್ಪ ತೊಟ್ಟು ಪ್ರವಾಸ ಮಾಡುತ್ತಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಮೋದಿ ವಿಷದ ಹಾವು ಇದ್ದಂತೆ: ಖರ್ಗೆ

ಕಾಂಗ್ರೆಸ್ (Congress) ಪಕ್ಷ ಮುಳುಗುತ್ತಿರುವ ಹಡಗು. ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯವಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಉತ್ತರ ಪ್ರದೇಶದ (Uttar Pradesh) ಚುನಾವಣೆಯಲ್ಲಿ 400 ಸೀಟ್‌ಗಳಲ್ಲಿ ಕೇವಲ 4 ಸೀಟ್ ಗೆದ್ದರು. ದೆಹಲಿಯಲ್ಲಿ (Delhi) ಸೋಲು ಅನುಭವಿಸಿ ಬೀದಿ ಪಾಲಾಗಿದ್ದಾರೆ. ಪ್ರಧಾನಿ ಮೋದಿ ಹಾಗೂ ರಾಹುಲ್ ಗಾಂಧಿಯನ್ನು ಹೋಲಿಕೆ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ರಾಮನಗರದಲ್ಲಿ ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡಿದೆ: ನಿಖಿಲ್ ಕುಮಾರಸ್ವಾಮಿ

Share This Article