ವರುಣಾ, ಚಾಮರಾಜನಗರ ಎರಡೂ ಕ್ಷೇತ್ರದಲ್ಲಿ ಗೆಲ್ಲುತ್ತೇವೆ: ಪುಟ್ಟರಂಗಶೆಟ್ಟಿ

By
1 Min Read

ಚಾಮರಾಜನಗರ: ವರುಣಾ (Varuna) ಹಾಗೂ ಚಾಮರಾಜನಗರ (Chamarajanagar) ಎರಡೂ ಕಡೆ ನಾವೇ ಗೆಲ್ಲುತ್ತೇವೆ. ಅವರು ಏನೇ ತಂತ್ರಗಾರಿಕೆ ಮಾಡಿದರೂ ನಾವು ತಕ್ಕ ಉತ್ತರ ಕೊಡುತ್ತೇವೆ ಎಂದು ಚಾಮರಾಜನಗರ ಕಾಂಗ್ರೆಸ್ (Congress) ಅಭ್ಯರ್ಥಿ, ಶಾಸಕ ಪುಟ್ಟರಂಗಶೆಟ್ಟಿ (C.Puttarangashetty) ಹೇಳಿದ್ದಾರೆ.

ನಾಮಪತ್ರ ಸಲ್ಲಿಕೆಗೂ ಮುನ್ನವೇ ಪುಟ್ಟರಂಗಶೆಟ್ಟಿ ಬಿರುಸಿನ ಪ್ರಚಾರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅಲ್ಲದೇ ಸೋಮಣ್ಣನವರಿಗೆ (V.Somanna) ಬಿಜೆಪಿ (BJP) ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಕ್ಷೇತ್ರದಲ್ಲಿ ಪುಲ್ ಆ್ಯಕ್ಟಿವ್ ಆಗಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮದು ಅಭಿವೃದ್ಧಿ, ಸೋಮಣ್ಣನವರದ್ದು ಬರೀ ಮಾತು. ಅವರು ಸುಳ್ಳು ಹೇಳಿಕೊಂಡು ರಾಜಕಾರಣ (Politics) ಮಾಡುತ್ತಾರೆ. ಸೋಮಣ್ಣ ಯಾವ ಅಭಿವೃದ್ಧಿ ಕೆಲಸ ಮಾಡಿದ್ದಾರೆ? ಯಾವ ಮುಖ ಇಟ್ಟುಕೊಂಡು ವೋಟ್ ಕೇಳುತ್ತಾರೆ? ಎಂದು ಟೀಕಿಸಿದರು. ಇದನ್ನೂ ಓದಿ: ಬೆಳಗಾವಿಯಲ್ಲಿ ಮತ್ತೊಂದು ಬಿಜೆಪಿ ವಿಕೆಟ್ ಪತನ 

ಚಾಮರಾಜನಗರ ಜಿಲ್ಲೆಯಲ್ಲಿ ಅತಿವೃಷ್ಟಿಯಾಯಿತು. ಉಸ್ತುವಾರಿ ಸಚಿವರಾಗಿ ಎಷ್ಟು ಅನುದಾನ ತಂದಿದ್ದಾರೆ ಎಂದು ಸೋಮಣ್ಣ ಹೇಳಲಿ ಎಂದು ಸವಾಲು ಹಾಕಿದರು. ಅಷ್ಟೇ ಅಲ್ಲದೇ ನಾಲ್ಕನೇ ಬಾರಿಯೂ ನಾನೇ ಆಯ್ಕೆಯಾಗುತ್ತೇನೆ. ಸರ್ಕಾರವೂ ನಮ್ಮದೇ ಬರುತ್ತದೆ. ಅದರಲ್ಲಿ ಎರಡನೇ ಮಾತಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಡಿಕೆಶಿ ಆಥಿತ್ಯ ಸ್ವೀಕರಿಸ್ತೀವಿ, ಮಿಲ್ಟ್ರಿ ಹೋಟೆಲ್ ಊಟಾನೂ ಮಾಡ್ತೀವಿ – ಅಶ್ವಥ್‌ ನಾರಾಯಣ್‌

Share This Article