ಡಿಕೆಶಿ ಕುಟುಂಬಕ್ಕೂ ತಟ್ಟಿದ ಚುನಾವಣೆ ಬಿಸಿ – ಹೆಲಿಕಾಪ್ಟರ್ ತಪಾಸಣೆ ವೇಳೆ ಮಾತಿನ ಚಕಮಕಿ

Public TV
1 Min Read

ಮಂಗಳೂರು: ಚುನಾವಣೆ (Election) ಕಾವೇರಿರುವ ಹೊತ್ತಲ್ಲೇ ಡಿಕೆ ಶಿವಕುಮಾರ್ (D.K.Shivakumar) ಅವರ ಕುಟುಂಬಕ್ಕೂ ಚುನಾವಣಾ ಬಿಸಿ ತಟ್ಟಿದೆ. ಡಿಕೆಶಿ ಕುಟುಂಬ ಖಾಸಗಿ ಹೆಲಿಕಾಪ್ಟರ್‌ನಲ್ಲಿ (Helicopter) ಧರ್ಮಸ್ಥಳಕ್ಕೆ (Dharmasthala) ಬಂದಿಳಿದ ವೇಳೆ ಚುನಾವಣಾ ಅಧಿಕಾರಿಗಳು ಹೆಲಿಕಾಪ್ಟರ್ ತಪಾಸಣೆಗೆ ಮುಂದಾಗಿದ್ದಾರೆ.

ಶನಿವಾರ ಮತ್ತು ಭಾನುವಾರ ಡಿಕೆಶಿ ಕುಟುಂಬ ಟೆಂಪಲ್ ರನ್ ನಡೆಸುತ್ತಿದ್ದು, ಶನಿವಾರ ಧರ್ಮಸ್ಥಳ ಮಂಜುನಾಥನ ದರ್ಶನಕ್ಕೆಂದು ಡಿಕೆಶಿ ಪತ್ನಿ ಉಷಾ, ಮಗಳು ಮತ್ತು ಅಳಿಯ ಹಾಗೂ ಮಗ ಒಂದು ಹೆಲಿಕಾಪ್ಟರ್‌ನಲ್ಲಿ ಬಂದಿಳಿದರು. ಹೆಲಿಪ್ಯಾಡಿನಲ್ಲಿ ಹೆಲಿಕಾಪ್ಟರ್ ಲ್ಯಾಂಡಿಗ್ (Landing) ಆಗುತ್ತಿದ್ದಂತೆ ಚುನಾವಣೆ ಅಧಿಕಾರಿಗಳು ತಪಾಸಣೆಗೆ (Inspection) ಮುಂದಾಗಿದ್ದಾರೆ. ಇದನ್ನೂ ಓದಿ: ಹಳೇ ಮೈಸೂರು ಮೇಲೆ ಕಣ್ಣು – ಏ.30ಕ್ಕೆ ಕುಮಾರಸ್ವಾಮಿ ಅಡ್ಡದಲ್ಲಿ ಮೋದಿ ಸಮಾವೇಶ 

ಇದು ಖಾಸಗಿ ಹೆಲಿಕಾಪ್ಟರ್ ಆಗಿದ್ದು, ಇದನ್ನು ತಪಾಸಣೆ ಮಾಡಲು ಅವಕಾಶವಿಲ್ಲ ಎಂದು ಪೈಲೆಟ್ (Pilot) ರಾಮ್‌ದಾಸ್ ಹೇಳಿದ್ದಾರೆ. ಈ ವೇಳೆ ಚುನಾವಣಾ ಅಧಿಕಾರಿ (Election Officer) ಹಾಗೂ ಪೈಲೆಟ್ ನಡುವೆ ಮಾತಿನ ಚಕಮಕಿ ನಡೆದಿದೆ. ಕೊನೆಗೆ ಚುನಾವಣಾ ಅಧಿಕಾರಿಗಳು ಹೆಲಿಕಾಪ್ಟರ್ ಮತ್ತು ಅವರ ಕಾರನ್ನೂ ಕೂಡಾ ತಪಾಸಣೆ ಮಾಡಿದ್ದಾರೆ. ಇದನ್ನೂ ಓದಿ: ಭಯ, ಆ ಭಯ ಇರಬೇಕು ಸಿದ್ದರಾಮಯ್ಯನವರೇ: ಪ್ರತಾಪ್‌ ಸಿಂಹ

Share This Article