ಮತಯಾಚನೆ ವೇಳೆ ಪರಮೇಶ್ವರ್‌ ತಲೆಗೆ ಕಲ್ಲೇಟು, ರಕ್ತಸ್ರಾವ

Public TV
0 Min Read

ತುಮಕೂರು: ಮತಯಾಚನೆ ಪ್ರಚಾರದ (Election Campaign) ವೇಳೆ ಮಾಜಿ ಡಿಸಿಎಂ, ಕೊರಟಗೆರೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಡಾ. ಜಿ ಪರಮೇಶ್ವರ್ (Parameshwar) ತಲೆಗೆ ಕಲ್ಲೇಟು ಬಿದ್ದಿದೆ.

ಇಂದು ಪರಮೇಶ್ವರ್‌ ಕೊರಟಗೆರೆ ತಾಲೂಕಿನ ಬೈರನಹಳ್ಳಿ ಕ್ರಾಸ್ ಬಳಿ ಮತಯಾಚನೆ ಮಾಡುತ್ತಿದ್ದರು. ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಅಲ್ಲಿ ನೆರೆದಿದ್ದರು. ಬೃಹತ್‌ ಹೂವಿನ ಹಾರ ಹಾಕಿ ಪರಮೇಶ್ವರ್‌ ಅವರನ್ನು ಸ್ವಾಗತಿಸುತ್ತಿದ್ದಂತೆ ಅವರ ತಲೆಯ ಮೇಲೆ ಕಲ್ಲು ಬಿದ್ದಿದೆ. ಇದನ್ನೂ ಓದಿ: ಧಮ್ ಇದ್ದರೆ ಮೀಸಲಾತಿಯನ್ನು ಮುಟ್ಟಿ ನೋಡಿ: ಕಾಂಗ್ರೆಸ್‌ಗೆ ಬೊಮ್ಮಾಯಿ ಸವಾಲು

ತಲೆಗೆ ಭಾರೀ ಪೆಟ್ಟು ಬಿದ್ದಿದ್ದು ರಕ್ತಸ್ರಾವವಾಗಿದೆ. ಅಕಿರಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪರಮೇಶ್ವರ್‌ ಚಿಕಿತ್ಸೆ ಪಡೆಯುತ್ತಿದ್ದಾರೆ.

Share This Article