ಸ್ವಾಭಿಮಾನಿಗಳು ಜೆಡಿಎಸ್‌ನಲ್ಲಿ ಇರಲ್ಲ ಎಂಬುದು ಮತ್ತೆ ಪ್ರೂವ್ ಆಗಿದೆ: ಸುಮಲತಾ

Public TV
1 Min Read

– ಕಲ್ಪನ ಸಿದ್ದರಾಜು ಬಿಜೆಪಿಗೆ ಸಪೋರ್ಟ್ ಕೊಡೋ ವಿಶ್ವಾಸವಿದೆ

ಮಂಡ್ಯ: ಎಂ ಶ್ರೀನಿವಾಸ್ ಅವರಂತಹ ಹಿರಿಯ ನಾಯಕರನ್ನು ಜೆಡಿಎಸ್ (JDS) ಸರಿಯಾಗಿ ನಡೆಸಿಕೊಂಡಿಲ್ಲ. 3 ಬಾರಿ ಎಂಎಲ್‌ಎ ಆಗಿದ್ದವರಿಗೆ ಜೆಡಿಎಸ್ ಅವಮಾನ ಮಾಡಿದೆ. ಸ್ವಾಭಿಮಾನ ಇರುವವರು ಯಾರು ಕೂಡಾ ಜೆಡಿಎಸ್‌ನಲ್ಲಿ ಇರಲ್ಲ ಎಂಬುದು ಮತ್ತೆ ಪ್ರೂವ್ ಆಗಿದೆ ಎಂದು ಸಂಸದೆ ಸುಮಲತಾ ಅಂಬರೀಶ್ (Sumalatha) ಹೇಳಿಕೆ ನೀಡಿದ್ದಾರೆ.

ಮಂಡ್ಯ (Mandya) ಜಿಲ್ಲೆಯ ಮದ್ದೂರಿನಲ್ಲಿ ಮಾತನಾಡಿದ ಸುಮಲತಾ, ಮಂಡ್ಯ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿಗೆ (BJP) ಉತ್ತಮ ವಾತಾವರಣ ಇದೆ. ಕೆಆರ್ ಪೇಟೆ ಕ್ಷೇತ್ರದಲ್ಲಿ 100% ಬಿಜೆಪಿಗೆ ಇದೆ. ಈ ಬಾರಿ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿಯೇ ಎಂಬುದು ಕಾಣಿಸುತ್ತಿದೆ. ಮಂಡ್ಯದಲ್ಲಿ ಬಿಜೆಪಿ ಇಲ್ಲ ಎನ್ನುವ ಕಾಂಗ್ರೆಸ್ (Congress), ಜೆಡಿಎಸ್‌ನವರು ಫಲಿತಾಂಶ ಬಂದ ಮೇಲೆ ಈ ಮಾತನ್ನು ವಾಪಸ್ ತೆಗೆದುಕೊಳ್ಳಬೇಕು ಎಂದು ಟಾಂಗ್ ನೀಡಿದ್ದಾರೆ.

ಮಂಡ್ಯ ಜಿಲ್ಲೆಯ ಜನರಿಗೆ ಬದಲಾವಣೆ ಬೇಕಾಗಿದೆ. ಎರಡು ಪಕ್ಷಗಳ ಮೇಲೆ ಜನರು ಬೇಸತ್ತು ಹೋಗಿದ್ದಾರೆ. ದ್ವೇಷ, ಮೋಸದ ಮಾತು, ಸುಳ್ಳು, ದಬ್ಬಾಳಿಕೆಯಿಂದ ಜನರು ತಿರುಗಿಬಿದ್ದಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್, ಜೆಡಿಎಸ್‌ಗಿಂತ ಹೆಚ್ಚು ಸೀಟ್‌ಗಳನ್ನು ಬಿಜೆಪಿ ಗೆಲ್ಲುತ್ತದೆ ಎಂದು ಸುಮಲತಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸಂಘ ಪರಿವಾರದ ಸರ್ಕಾರವನ್ನು ಗುಜರಿಗೆ ಹಾಕಿ: ಬಿಜೆಪಿ ವಿರುದ್ಧ ದೇಮ ಕಿಡಿ

ಮಾಜಿ ಶಾಸಕಿ ಕಲ್ಪನ ಸಿದ್ದರಾಜು ಭೇಟಿ ವಿಚಾರವಾಗಿ ಮಾತನಾಡಿದ ಸುಮಲತಾ, ಅಂಬರೀಶ್ ಅವರು ಇದ್ದಾಗಿನಿಂದ ಕಲ್ಪನ ಸಿದ್ದರಾಜು ಅವರು ಸ್ನೇಹಿತರು. ಅವರು ಇಷ್ಟು ದಿನ ಬೇರೆ ಬೇರೆ ಪಕ್ಷದಲ್ಲಿ ಇದ್ದರು. ಈಗ ಬಿಜೆಪಿಗೆ ಸಪೋರ್ಟ್ ಮಾಡಿ ಎಂದು ಕೇಳಿದ್ದೇನೆ. ಖಂಡಿತವಾಗಿಯೂ ಅವರು ಬಿಜೆಪಿಗೆ ಸಪೋರ್ಟ್ ಮಾಡುತ್ತಾರೆ ಎಂಬ ನಂಬಿಕೆ ನನಗೆ ಇದೆ ಎಂದು ಹೇಳಿದರು. ಇದನ್ನೂ ಓದಿ: ಸಿದ್ದರಾಮಯ್ಯ ಪರ ಪ್ರಚಾರಕ್ಕೆ ರಮ್ಯಾ, ದುನಿಯಾ ವಿಜಯ್‌ ಬರ್ತಾರೆ – ಯತೀಂದ್ರ ಸಿದ್ದರಾಮಯ್ಯ

Share This Article