ಸಿದ್ದರಾಮಯ್ಯರನ್ನ ಹರಕೆ ಕುರಿ ಮಾಡ್ಬೇಡಿ: ನಿಖಿಲ್ ಸಲಹೆ

Public TV
2 Min Read

ಕೋಲಾರ: ಮಾಜಿ ಮುಖ್ಯಮಂತ್ರಿಗೆ ಕೋಲಾರ (Kolar Constituency) ಅಷ್ಟೊಂದು ಸುರಕ್ಷಿತವಲ್ಲ, ವರುಣಾದಿಂದಲೇ ಸ್ಪರ್ಧೆ ಮಾಡಿ ಎಂದು ಹೈ ಕಮಾಂಡ್ ಸೂಚನೆ ಬೆನ್ನಲ್ಲೇ ಕೋಲಾರ ಕ್ಷೇತ್ರದ ಕನಸ್ಸನ್ನ ಸಿದ್ದರಾಮಯ್ಯ (Siddaramaiah) ಕೈ ಬಿಟ್ಟಿದ್ದಾರೆ. ಆದರೆ ಸಿದ್ದರಾಮಯ್ಯ ಕ್ಷೇತ್ರ ಯಾವುದು ಯಾವ ಕ್ಷೇತ್ರವನ್ನ ಆಯ್ಕೆ ಮಾಡಿಕೊಳ್ಳುತ್ತಾರೆ ಅನ್ನೋ ಕುತೂಹಲ ಸ್ವಪಕ್ಷ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳಲ್ಲೂ ಮನೆ ಮಾಡಿದೆ.

ಈ ಬೆನ್ನಲ್ಲೇ ಸಾಕಷ್ಟು ಜನ ನಾಯಕರು ಬೇರೆ ಬೇರೆ ರೀತಿಯಲ್ಲಿ ಬಣ್ಣಿಸಿದ್ದಾರೆ. ಅದರಂತೆ ಕೋಲಾರ ಜಿಲ್ಲೆಯ ಬಂಗಾರಪೇಟೆ ಜೆಡಿಎಸ್ ಸಮಾವೇಶದಲ್ಲಿ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಮಾತನಾಡಿ, ನಾನು ಮಾಧ್ಯಮಗಳ ಮೂಲಕ ತಿಳಿದುಕೊಂಡಿದ್ದೇನೆ. ಕೋಲಾರ ಕಾಂಗ್ರೆಸ್ ನಾಯಕರಿಗೆ ಮನವಿ ಮಾಡಿದ ನಿಖಿಲ್ ಕುಮಾರಸ್ವಾಮಿ, ದಯವಿಟ್ಟು ವಿರೋಧ ಪಕ್ಷದ ನಾಯಕರನ್ನ ಹರಕೆ ಕುರಿ ಮಾಡಬೇಡಿ ಎಂದಿದ್ದಾರೆ.

ಒಬ್ಬ ಯುವ ನಾಯಕನಾಗಿ ನಿಮಗೆ ಸಲಹೆ ನೀಡುತ್ತೇನೆ. ಸಿದ್ದರಾಮಯ್ಯ ಅವರನ್ನ ಕೋಲಾರಕ್ಕೆ ಕರೆತಂದು ಬಲಿ ಕೊಡಬೇಡಿ ಎಂದು ಹೇಳಿದ್ರು. ಅಲ್ಲದೆ ಇದೆ ವೇಳೆ ರಾಜ್ಯ ಸರ್ಕಾರ ಹಾಗೂ ರಾಜ್ಯ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದ ನಿಖಿಲ್, ತರಾತುರಿಯಲ್ಲಿ ಕರೆಸಿ ಬೆಂಗಳೂರು-ಮೈಸೂರು ರಸ್ತೆ ಉದ್ಘಾಟನೆ ಮಾಡ್ತಾರೆ. ಮಳೆ ಬಂದಿದ್ದರಿಂದ ರಸ್ತೆ ಸಮುದ್ರವಾಗಿದೆ, ಇದು ಕೆರೆ ಸಮುದ್ರ ಎಂದು ಅರ್ಥವಾಗುತ್ತಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಮಾಜಿ ಸಿಎಂ ಸಿದ್ದರಾಮಯ್ಯಗೆ ಇಂತಹ ಪರಿಸ್ಥಿತಿ ಬರಬಾರದಿತ್ತು: ವಿಜಯೇಂದ್ರ ವ್ಯಂಗ್ಯ

ಮನೆ ಕಟ್ಟಿದಾಗಲೇ ಗೋಡೆಯಲ್ಲಿ ಲೀಕೇಜ್ ಬರುತ್ತೆ ಎಂದು ಪ್ರತಾಪ್ ಸಿಂಹ (Pratap Simha) ಹೇಳ್ತಾರೆ. ಇದು ಅವರಿಗೆ ನಾಚಿಕೆ ಆಗಬೇಕು, ನಿಮ್ಮ ಮನೆ ಕಟ್ಟೋದು ನಿಮ್ಮ ದುಡ್ಡಿನಲ್ಲಿ, ಆದರೆ ರಸ್ತೆ ಮಾಡಿರುವುದು ಜನರ ತೆರಿಗೆ ಹಣದಲ್ಲಿ ಎಂದ್ರು. ಶ್ರೀಮಂತರಿಗಾಗಿ ರಸ್ತೆ ಮಾಡಿದ್ದೀರ ಅಥವಾ ಬಡವರಿಗಾಗಿ ಮಾಡಿದ್ದೀರಾ ಎಂದು ಪ್ರಶ್ನೆ ಮಾಡಿದ ನಿಖಿಲ್, ವಿಜಯ ಸಂಕಲ್ಪ ಯಾತ್ರೆ ವಿರುದ್ಧ ಲೇವಡಿ ಮಾಡಿದ್ರು.

40% ಕಮಿಷನ್ ಮಾಡಿದ್ದೀರಿ ಭ್ರಷ್ಟಾಚಾರ ಮಾಡಿದ್ದೀರಿ. ಹೀಗಿರುವಾಗ ವಿಜಯ ಸಂಕಲ್ಪ ಯಾವುದು ಜೆಡಿಎಸ್‍ನಲ್ಲಿ ಈಗಾಗಲೇ ಅಭ್ಯರ್ಥಿಗಳ ಘೋಷಣೆ ಆಗಿದೆ. ಆದೆ ಇದುವರೆಗೂ ಬಿಜೆಪಿ ಹಾಗೂ ಕಾಂಗ್ರೆಸ್ ನಲ್ಲಿ ಅಭ್ಯರ್ಥಿಗಳ ಘೋಷಣೆ ಆಗಿಲ್ಲ. ಒಳ ಜಗಳಗಳನ್ನ ಇಟ್ಟುಕೊಂಡು, ರಾಜ್ಯ ಹೇಗೆ ಕಟ್ಟುತ್ತೀರಿ ಎಂದು ಪ್ರಶ್ನೆ ಮಾಡಿದ್ರು.

Share This Article
Leave a Comment

Leave a Reply

Your email address will not be published. Required fields are marked *