ಮೋದಿ ಬಂದ ಬೆನ್ನಲ್ಲೇ ಅಖಾಡಕ್ಕಿಳಿದ ಎಚ್‌ಡಿಡಿ – ಮಂಡ್ಯ ನಾಯಕರಿಗೆ ಖಡಕ್‌ ಸೂಚನೆ

Public TV
1 Min Read

ಮಂಡ್ಯ: ಸಕ್ಕರೆ ನಾಡಿಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಬಂದು ಹೋದ ಮೇಲೆ ಮಂಡ್ಯದಲ್ಲಿ (Mandya) ರಾಜಕೀಯ ಕಾವು ಹೆಚ್ಚಾಗಿದೆ.  ದೊಡ್ಡಗೌಡರು ಮಂಡ್ಯದ ದಳಪತಿಗಳನ್ನು (JDS Leaders) ಕರೆದು ಸಂಸದೆ ಸುಮಲತಾ (MP Sumalatha) ಅವರ ಬಗ್ಗೆ ಯಾರು ಮಾತಾಡಬೇಡಿ ಎಂದು ಖಡಕ್ ಸೂಚನೆಯನ್ನು ನೀಡಿದ್ದಾರೆ.

ಭಾನುವಾರ ಮಂಡ್ಯಗೆ ಪ್ರಧಾನಿ ಮೋದಿ ಬಂದು ಹೋದ ಮೇಲೆ ಮಾಜಿ ಪ್ರಧಾನಿ ದೇವೇಗೌಡರು (HD Devegowda) ಅಖಾಡಕ್ಕಿಳಿದಿದ್ದಾರೆ. ಜೆಡಿಎಸ್‌ ಭದ್ರಕೋಟೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ದೇವೇಗೌಡರು ಬೆಂಗಳೂರಿನ ತಮ್ಮ ನಿವಾಸದಲ್ಲಿ ಜಿಲ್ಲೆಯ 7 ಕ್ಷೇತ್ರದ ಪೈಕಿ ಆರು ಮಂದಿ ಶಾಸಕರು ಹಾಗೂ ಅಭ್ಯರ್ಥಿಗಳನ್ನು ಕರೆದು ಸಭೆ ನಡೆಸಿ ಚರ್ಚೆ ನಡೆಸಿದ್ದಾರೆ.

ಎಲ್ಲಾ 7 ಕ್ಷೇತ್ರಗಳಲ್ಲೂ ಕಳೆದ ಬಾರಿ ಗೆಲುವು ಪಡೆದಂತೆ ಈ ಬಾರಿಯೂ ಕ್ಲೀನ್ ಸ್ವೀಪ್ ಮಾಡಬೇಕೆಂದು ದೇವೇಗೌಡರು ಎಲ್ಲರಿಗೂ ಖಡಕ್ ಸೂಚನೆ ನೀಡಿದ್ದಾರೆ. ಪ್ರಮುಖವಾಗಿ ಸಂಸದೆ ಸುಮಲತಾ ಅಂಬರೀಶ್ ವಿರುದ್ಧ ಯಾರು ಮಾತಾಡದಂತೆ ಸೂಚನೆ ನೀಡಿದ್ದಾರೆ.

ಸುಮಲತಾ ಯಾವ ಪಕ್ಷಕ್ಕೆ ಆದರೂ ಸೇರಲಿ, ಅವರು ಏನೇ ಆರೋಪ ಮಾಡಲಿ. ಯಾರೂ ಸಹ ಸುಮಲತಾ ವಿರುದ್ಧ ಮಾತನಾಡಬೇಡಿ. ಲೋಕಸಭಾ ಚುನಾವಣೆಯಲ್ಲಿ ಆದ ತಪ್ಪು ಈ ಬಾರಿಯ ಚುನಾವಣೆಯಲ್ಲಿ ಆಗಬಾರದು ಎಂದು ಸೂಚಿಸಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಗಗನಸಖಿ ಗೆಳತಿಯನ್ನು ಅಪಾರ್ಟ್‌ಮೆಂಟ್‌ನಿಂದ ತಳ್ಳಿ ಆತ್ಮಹತ್ಮೆ ನಾಟಕವಾಡಿದ್ದ ಟೆಕ್ಕಿ ಅರೆಸ್ಟ್‌

ನೀವು ನಿಮ್ಮ ಅಭಿವೃದ್ಧಿ ಕೆಲಸ, ಜನಸೇವೆ ಹಾಗೂ ಪಕ್ಷದ ಸಾಧನೆಯ ಬಗ್ಗೆ ಮಾತ್ರ ಮಾತನಾಡಿ. ನಾವು ಯಾರಿಗೂ ಆಹಾರ ಆಗುವುದು ಬೇಡ. ನಾನು ಸಹ ಎಲ್ಲಾ ಕ್ಷೇತ್ರಗಳಿಗೆ ಪ್ರಚಾರ ಮಾಡಲು ಬರುತ್ತೇನೆ. ಆಗಿರುವ ವ್ಯತ್ಯಾಸಗಳನ್ನು ಸರಿಪಡಿಸಿಕೊಳ್ಳಿ ಎಂದು ದೇವೇಗೌಡರು ಮಂಡ್ಯ ಜಿಲ್ಲೆಯ ಜೆಡಿಎಸ್ ಶಾಸಕರು ಹಾಗೂ ಅಭ್ಯರ್ಥಿಗಳಿಗೆ  ಸೂಚನೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *