ಕಾಂಗ್ರೆಸ್ ಗೆದ್ದರೆ ತಾಲಿಬಾನ್‌ಗಳಿಗೆ ಬಿರಿಯಾನಿ ಕೊಟ್ಟು ಸಾಕುತ್ತಾರೆ: ಸಿ.ಟಿ.ರವಿ ವಾಗ್ದಾಳಿ

Public TV
1 Min Read

ಮಡಿಕೇರಿ: ಕಾಂಗ್ರೆಸ್ (Congress) ಗೆದ್ದರೆ ಮತ್ತೆ ಹಿಂದೂ ವಿರೋಧಿ ನೀತಿಗಳನ್ನು ಅನುಸರಿಸಿ ತಾಲಿಬಾನ್‌ಗಳಿಗೆ ಬಿರಿಯಾನಿ ಕೊಟ್ಟು ಸಾಕುತ್ತಾರೆ ಎಂದು ಬಿಜೆಪಿ (BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (C.T.Ravi) ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕೊಡಗು (Kodagu) ಜಿಲ್ಲೆಯ ಸೋಮವಾರಪೇಟೆ (Somwarpet) ತಾಲೂಕಿನ ಶನಿವಾರಸಂತೆಯಲ್ಲಿ (Shanivarasanthe) ಶಾಸಕ, ಬಿಜೆಪಿ ಅಭ್ಯರ್ಥಿ ಅಪ್ಪಚ್ಚು ರಂಜನ್ (Appachu Ranjan) ಪರವಾಗಿ ಮತಯಾಚನೆ ಮಾಡಿ ಮಾತನಾಡಿದ ಅವರು, ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತ. ಕಾಂಗ್ರೆಸ್ ತನ್ನ ಹಿಂದೂ ವಿರೋಧಿ ನೀತಿಯನ್ನು ಮತ್ತೆ ಪ್ರಕಟಿಸಿದೆ. ಹನುಮನ ನಾಡಿನಲ್ಲಿ ಹನುಮನ ಸೈನಿಕನನ್ನೇ ನಿಷೇಧಿಸುವ ದುಸ್ಸಾಹಸ ಮಾಡುತ್ತಿದೆ. ಕಾಂಗ್ರೆಸ್ ಇದಕ್ಕೆ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ಹರಿಹಾಯ್ದರು. ಇದನ್ನೂ ಓದಿ: ಹನುಮನಿಗೆ ನಮಸ್ಕರಿಸಿದ ಮೋದಿ

ಬಜರಂಗದಳ (Bajarang Dal) ಎಂದರೆ ಹನುಮನ ಆರಾಧಕರು, ರಾಷ್ಟ್ರಭಕ್ತರು. ಅವರನ್ನು ನಿಷೇಧಿಸುತ್ತೇವೆ ಎನ್ನುವುದು ದರ್ಪದ ಮಾತು. ಆ ಮಾತಿಗೆ ಕಾಂಗ್ರೆಸ್ ದೊಡ್ಡ ಬೆಲೆ ತೆರಬೇಕು. ಕಾಂಗ್ರೆಸ್‌ನದ್ದು ನಾಯಿ ಬಾಲ ಇದ್ದಂತೆ. ಯಾವತ್ತೂ ನೆಟ್ಟಗಾಗುವುದಿಲ್ಲ. ಅವರು ಸೋತಾಗ ಸರಿ ಇರುತ್ತಾರೆ. ಗೆದ್ದರೆ ಮತ್ತೆ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಾರೆ. ಅವರು ತಾಲಿಬಾನ್‌ಗಳಿಗೆ ಬಿರಿಯಾನಿ ಕೊಟ್ಟು ಸಾಕುತ್ತಾರೆ. ಇಂತಹ ಬೌದ್ಧಿಕ ದಿವಾಳಿತನ ಅವರಿಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ದಾಖಲೆ ಬರೆದ ಮೋದಿ ಬೆಂಗಳೂರು ರೋಡ್ ಶೋ

Share This Article