ಚಿಕ್ಕಬಳ್ಳಾಪುರದಲ್ಲಿ ಬಿಜೆಪಿಗಿಲ್ಲ ಸ್ಥಾನ – 5 ಕ್ಷೇತ್ರದಲ್ಲಿ 3 ಕಡೆ ಕಾಂಗ್ರೆಸ್ ಗೆಲುವು

Public TV
1 Min Read

ಚಿಕ್ಕಬಳ್ಳಾಪುರ: ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು 5 ಕ್ಷೇತ್ರಗಳಲ್ಲಿ 3 ಸ್ಥಾನಗಳನ್ನು ಕಾಂಗ್ರೆಸ್ ಗಳಿಸಿದೆ. ಒಂದು ಕ್ಷೇತ್ರವನ್ನು ಜೆಡಿಎಸ್ ಗೆದ್ದುಕೊಂಡರೆ, ಉಳಿದೊಂದು ಕ್ಷೇತ್ರವನ್ನು ಪಕ್ಷೇತರ ಅಭ್ಯರ್ಥಿ ಗಿಟ್ಟಿಸಿಕೊಂಡಿದ್ದಾರೆ.

ಚಿಕ್ಕಬಳ್ಳಾಪುರ: ಕಾಂಗ್ರೆಸ್ ಅಭ್ಯರ್ಥಿ ಪ್ರದೀಪ್ ಈಶ್ವರ್ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಗೆದ್ದಿದ್ದು, ಬಿಜೆಪಿಯ ಕೆ ಸುಧಾಕರ್ ಸೋಲುಂಡಿದ್ದಾರೆ. ಜೆಡಿಎಸ್‌ನಿಂದ ಕೆಪಿ ಬಚ್ಚೇಗೌಡ ಸ್ಪರ್ಧಿಸಿ ಸೋತಿದ್ದಾರೆ.

ಗೌರಿಬಿದನೂರು: ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಕೆಹೆಚ್ ಪುಟ್ಟಸ್ವಾಮಿಗೌಡ ಅವರಿಗೆ ಭರ್ಜರಿ ಗೆಲುವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಎನ್‌ಹೆಚ್ ಶಿವಶಂಕರರೆಡ್ಡಿ, ಜೆಡಿಎಸ್‌ನ ಸಿಆರ್ ನರಸಿಂಹ ಮೂರ್ತಿ ಹಾಗೂ ಬಿಜೆಪಿಯ ಹೆಚ್‌ಎಸ್ ಶಶಿಧರ್ ಕುಮಾರ್ ಅವರಿಗೆ ಹೀನಾಯ ಸೋಲಾಗಿದೆ. ಇದನ್ನೂ ಓದಿ: ಖರ್ಗೆ ತವರಲ್ಲಿ ಮೋದಿ ಕಮಾಲ್ ವ್ಯರ್ಥ – 7 ಕ್ಷೇತ್ರದಲ್ಲಿ ಕಾಂಗ್ರೆಸ್‍ಗೆ ಜಯ

ಶಿಡ್ಲಘಟ್ಟ: ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮೇಲೂರು ರವಿಕುಮಾರ್‌ಗೆ ಗೆಲುವಾಗಿದೆ. ಕಾಂಗ್ರೆಸ್ ಬಂಡಾಯ, ಪಕ್ಷೇತರ ಅಭ್ಯರ್ಥಿ ಪುಟ್ಟು ಅಂಜನಪ್ಪ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಬಿವಿ ರಾಜೀವ್ ಗೌಡ ಸೋತಿದ್ದಾರೆ.

ಬಾಗೇಪಲ್ಲಿ: ಕಾಂಗ್ರೆಸ್‌ನ ಎಸ್‌ಎನ್ ಸುಬ್ಬಾರೆಡ್ಡಿಗೆ ಬಾಗೇಪಲ್ಲಿ ಕ್ಷೇತ್ರದಲ್ಲಿ ಗೆಲುವಾಗಿದೆ. ಇವರ ವಿರುದ್ಧ ಸ್ಪರ್ಧಿಸಿದ ಬಿಜೆಪಿ ಅಭ್ಯರ್ಥಿ ಸಿ ಮುನಿರಾಜು ಅವರಿಗೆ ಸೋಲಾಗಿದೆ.

ಚಿಂತಾಮಣಿ: ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಎಂಸಿ ಸುಧಾಕರ್ ಗೆದ್ದಿದ್ದಾರೆ. ಜೆಡಿಎಸ್ ಅಭ್ಯರ್ಥಿ ಜೆಕೆ ಕೃಷ್ಣಾರೆಡ್ಡಿ ಹಾಗೂ ಬಿಜೆಪಿ ಅಭ್ಯರ್ಥಿ ಜಿಎನ್ ವೇಣುಗೋಪಾಲ್ ಸೋತಿದ್ದಾರೆ. ಇದನ್ನೂ ಓದಿ: Karnataka Election 2023 Result – ಕಾಂಗ್ರೆಸ್‌ 136, ಬಿಜೆಪಿ 65, ಜೆಡಿಎಸ್‌ 19 ಮುನ್ನಡೆ LIVE Updates

Share This Article