ಅರಕಲಗೂಡಿನಲ್ಲಿ ದಿಢೀರ್‌ ಬೆಳವಣಿಗೆ – ಕೈ ಟಿಕೆಟ್‌ ಆಕಾಂಕ್ಷಿ ಬಿಜೆಪಿ ಅಭ್ಯರ್ಥಿ?

Public TV
1 Min Read

ಹಾಸನ: ಅರಕಲಗೂಡು (Arakalagudu) ವಿಧಾನಸಭಾ ಕ್ಷೇತ್ರದಲ್ಲಿ ಅಚ್ಚರಿಯ ರಾಜಕೀಯ ಬೆಳವಣಿಗೆ ನಡೆದಿದೆ. ಪಕ್ಷೇತರ ಅಭ್ಯರ್ಥಿಗೆ ಬಿಜೆಪಿ (BJP) ಹೈಕಮಾಂಡ್ ಬಿ ಮತ್ತು ಸಿ ಫಾರಂಗಳನ್ನು ಇಮೇಲ್ ಮೂಲಕ ಕಳುಹಿಸಿದೆ.

ಕಾಂಗ್ರೆಸ್ (Congress) ಪಕ್ಷದ ಟಿಕೆಟ್ ವಂಚಿತ ಎಂ.ಟಿ.ಕೃಷ್ಣೇಗೌಡರಿಗೆ (MT Krishnegowda) ಬಿ ಮತ್ತು ಸಿ ಫಾರಂ ನೀಡಲಾಗಿದೆ. ಈಗಾಗಲೇ ಬಿಜೆಪಿಯಿಂದ ಎಚ್.ಯೋಗಾರಮೇಶ್ ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಸಿಗದ ಕಾರಣ ಪಕ್ಷೇತರರಾಗಿ ಉಮೇದುವಾರಿಕೆ ಸಲ್ಲಿಸಿದ್ದ ಎಂ.ಟಿ.ಕೃಷ್ಣೇಗೌಡಗೆ ಬಿಜೆಪಿ ಬಿ, ಸಿ ಫಾರಂ ನೀಡಿದ್ದು ಬಿಜೆಪಿ ಪಕ್ಷದ ಅಧಿಕೃತ ಅಭ್ಯರ್ಥಿ ಆಗಲಿದ್ದಾರಾ ಎಂಬ ಅನುಮಾನ ಮೂಡಿದೆ.

ಇಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು ಎಚ್. ಯೋಗಾರಮೇಶ್ ನಾಮಪತ್ರ ತಿರಸ್ಕೃತವಾದರೆ ಎಂ.ಟಿ ಕೃಷ್ಣೇಗೌಡ ಅಧಿಕೃತವಾಗಿ ಬಿಜೆಪಿ ಅಭ್ಯರ್ಥಿಯಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ಡಿಕೆಶಿಯ ನಾಮಪತ್ರ ತಿರಸ್ಕೃತವಾಗುತ್ತಾ? – ಯಾರು ಏನು ಹೇಳಿದ್ದಾರೆ?

ಈ ಹಿಂದೆ ಎ.ಟಿ.ರಾಮಸ್ವಾಮಿ (AT Ramaswamy) ಜೆಡಿಎಸ್‌ನಲ್ಲಿದ್ದಾಗ ಅವರ ಬಲಗೈ ಬಂಟರಂತಿದ್ದ ಕೃಷ್ಣೇಗೌಡ ಕೊನೇ ಕ್ಷಣದವರೆಗೂ ಕಾಂಗ್ರೆಸ್ ಟಿಕೆಟ್‌ಗಾಗಿ ಹೋರಾಟ ನಡೆಸಿದ್ದರು. ಆದರೆ ಕೊನೆ ಗಳಿಗೆಯಲ್ಲಿ ಸಿದ್ದರಾಮಯ್ಯ ಆಪ್ತನಿಗೆ ಟಿಕೆಟ್ ನೀಡದೇ ಡಿಕೆ ಸಹೋದರರ ಆಪ್ತ ಶ್ರೀಧರ್‌ಗೌಡಗೆ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್‌ ನೀಡಿತ್ತು.

 

ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದ ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಅವರಿಗೂ ಟಿಕೆಟ್ ಕೊಡದೇ ಯೋಗಾರಮೇಶ್‌ಗೆ ಬಿಜೆಪಿ ಟಿಕೆಟ್ ನೀಡಿತ್ತು. ಈಗ ತಮ್ಮ ನಾಲ್ಕು ದಶಕದ ಎದುರಾಳಿ ಎ.ಮಂಜು ಮಣಿಸಲು ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಹೊಸ ದಾಳ ಉರುಳಿಸಿದ್ರಾ ಎಂಬ ಪ್ರಶ್ನೆ ಎದ್ದಿದೆ.

Share This Article