ಮೋದಿಗೆ ಎಷ್ಟು ಬೈತಿರೋ ಅಷ್ಟು ಕಮಲ ಅರಳುತ್ತೆ: ಕಾಂಗ್ರೆಸ್‍ಗೆ ಅಮಿತ್ ಶಾ ತಿರುಗೇಟು

Public TV
1 Min Read

ಚಾಮರಾಜನಗರ: ಕಾಂಗ್ರೆಸ್‍ನವರು (Congress) ಮೋದಿಗೆ (Narendra Modi) ಎಷ್ಟು ಬೈತಿರೋ ಅಷ್ಟು ಕಮಲ ಅರಳುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ತಿಳಿಸಿದರು.

ಸಮಾವೇಶದಲ್ಲಿ ಮಾತನಾಡಿದ ಅವರು, ಖರ್ಗೆ, ಮೋದಿಯನ್ನು ವಿಷ ಸರ್ಪಕ್ಕೆ ಹೋಲಿಸುತ್ತಾರೆ. ದೇಶದ ಜನರಿಗೆ ಮೋದಿ ಮನೆ, ಅಕ್ಕಿ ಕೊಟ್ಟಿದ್ದಾರೆ. ಕಾಂಗ್ರೆಸ್‍ನವರಿಗೆ ಹೇಳ್ತೀನಿ ನೀವೂ ಮೋದಿ ಎಷ್ಟು ಬೈತಿರೋ ಅಷ್ಟು ಕಮಲ ಅರಳುತ್ತದೆ. ಜನರಿಗೆ ವಿಶ್ವಾಸವಿಲ್ಲದ ಗ್ಯಾರಂಟಿ ಕಾರ್ಡ್ ಹಂಚುತ್ತಿದ್ದಾರೆ. ಎಲ್ಲದಕ್ಕೂ ಜಾಸ್ತಿ ಕುಟುಂಬ ರಾಜಕಾರಣ. ಗಲಾಟೆ ಮಾಡೋ ಗ್ಯಾರಂಟಿ ಎಂದು ಕಿಡಿಕಾರಿದರು.

ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಬಗ್ಗೆ ಲೇವಡಿ ಮಾಡಿದ ಅವರು, ಜನರ ವಿಶ್ವಾಸವಿಲ್ಲದ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಹಂಚುತ್ತಿದೆ. ಭ್ರಷ್ಟಾಚಾರದ ಗ್ಯಾರಂಟಿ, ತುಷ್ಟೀಕರಣದ ಗ್ಯಾರಂಟಿ, ಕುಟುಂಬ ರಾಜಕಾರಣದ ಗ್ಯಾರಂಟಿ, ಗಲಾಟೆಯ ಗ್ಯಾರಂಟಿ ಕೊಡುತ್ತಿದೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಮಾನನಷ್ಟ ಮೊಕದ್ದಮೆ ಕೇಸ್‌ – ರಾಹುಲ್‌ ಗಾಂಧಿಗಿಲ್ಲ ರಿಲೀಫ್‌

ಬಿಜೆಪಿಗೆ ಮತ ಚಲಾಯಿಸಿದರೆ ರೈತರ ಉದ್ದಾರವಾಗುತ್ತದೆ. ಅದೇ ರೀತಿ ಕಾಂಗ್ರೆಸ್‍ಗೆ ವೋಟ್ ಮಾಡಿದ್ರೆ ದೆಹಲಿ ಎಟಿಎಂ ಮಾಡಿದ ಹಾಗೇ ಆಗುತ್ತದೆ. ಮುಸ್ಲಿಂ 4% ಮೀಸಲಾತಿ ತೆಗೆದು ಒಕ್ಕಲಿಗ, ಲಿಂಗಾಯತ, ದಲಿತರಿಗೆ ಕೊಟ್ಟಿದ್ದೇವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಮುಸ್ಲಿಂ ಮೀಸಲಾತಿ ವಾಪಸ್ ತರುತ್ತೇವೆ ಎಂದು ಹೇಳುತ್ತಾರೆ. ಲಿಂಗಾಯತ, ಒಕ್ಕಲಿಗ, ಎಸ್ಸಿ, ಎಸ್ಟಿ ಮೀಸಲಾತಿಯನ್ನು ಕಾಂಗ್ರೆಸ್ ವಾಪಸ್ ತೆಗೆಯುತ್ತದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಬಿಹಾರ್‌ನಂತಹ ರಾಜಕಾರಣ ನಾವು ಮಾಡುವುದಿಲ್ಲ: ಭವಾನಿ ರೇವಣ್ಣ

Share This Article