ಉತ್ತರ ಕರ್ನಾಟಕ ಭಾಗದಲ್ಲಿ 30ರಿಂದ 40 ಸ್ಥಾನ ನಿಶ್ಚಿತ – ಹೆಚ್‌ಡಿಕೆ

Public TV
2 Min Read

ಕಲಬುರಗಿ: ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಉತ್ತರ ಕರ್ನಾಟಕ (North  Karnataka) ಭಾಗದಲ್ಲಿ ಜೆಡಿಎಸ್ (JDS) ಪಕ್ಷ ಸುಮಾರು 30 ರಿಂದ 40 ಸ್ಥಾನಗಳನ್ನು ಪಡೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಗರದ ಖಾಸಗಿ ಹೊಟೇಲ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿದ ಅವರು, ಬಹಳಷ್ಟು ಜನ ಜನತಾ ಪರಿವಾರದಿಂದ ಬೇರೆ ಬೇರೆ ಪಕ್ಷಕ್ಕೆ ಹೋಗಿದ್ದು, ಇಂದು ಅವರೆಲ್ಲರೂ ಮರಳಿ ವಾಪಸ್ ಬರಲು ಚರ್ಚೆ ನಡೆಸಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಪಕ್ಷ ಇಲ್ಲವೆಂದು ಲೇವಡಿ ಮಾಡುತ್ತಿದ್ದರು. ಆದರೆ ಈಗ ಉತ್ತರ ಕರ್ನಾಟಕದ ಭಾಗದಲ್ಲಿ ಜೆಡಿಎಸ್ ಪರವಾದ ವಾತಾವರಣ ನಿರ್ಮಾಣವಾಗಿದೆ ಎಂದರು. ಇದನ್ನೂ ಓದಿ: ರಾಹುಕಾಲ ಮುಗಿದ ಬಳಿಕ ಬಿ ಫಾರಂ ವಿತರಿಸಿದ ಡಿಕೆಶಿ 

ವೈ.ಎಸ್.ವಿ ದತ್ತಾ (Y.S.V.Datta) ಅವರು ನನ್ನ ಜೊತೆಗೆ ಸಂಪರ್ಕದಲ್ಲಿಲ್ಲ. ಅವರು ಶಾಸಕರಿದ್ದಾಗಲೂ ನನ್ನ ಜೊತೆ ಸಂಪರ್ಕದಲ್ಲಿ ಇರಲಿಲ್ಲ. ನಾಳೆ ಬೆಳಗ್ಗೆ ಎರಡನೇ ಪಟ್ಟಿ ಬಿಡುಗಡೆ ಮಾಡುತ್ತೇನೆ. ಪಟ್ಟಿ ಬಿಡುಗಡೆ ಮಾಡಲು ಮಾನಸಿಕವಾಗಿ ಸಂಪೂರ್ಣ ಸಿದ್ಧನಾಗಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ಟಿಕೆಟ್ ಕೊಟ್ಟಿಲ್ಲವೆಂದ್ರೆ ಅವರಿಗೆ ಬೇರೆ ಜವಾಬ್ದಾರಿ ನೀಡಲಿದೆ ಎಂದರ್ಥ: ಅಣ್ಣಾಮಲೈ

ಹಾಸನದಲ್ಲಿ (Hassan) ಟಿಕೆಟ್ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಹಾಸನದ ಟಿಕೆಟ್ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಹಾಸನದ ಗೊಂದಲವನ್ನು ನಾವು ಬಗೆಹರಿಸುತ್ತೇವೆ. ನನ್ನ ಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಪಂಚರತ್ನ ಯಾತ್ರೆಯಲ್ಲಿ ಏಳೆಂಟು ಕ್ಷೇತ್ರಗಳ ಬಗ್ಗೆ ಅಭ್ಯರ್ಥಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಈ ಬಾರಿ ನಾವು 120 ಸ್ಥಾನ ದಾಟಲೇಬೇಕು ಎಂದು ಪಣತೊಟ್ಟಿದ್ದೇವೆ ಎಂದರು. ಇದನ್ನೂ ಓದಿ: ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಸುಧಾಕರ್ ನಾಮಪತ್ರ ಸಲ್ಲಿಕೆ 

ಕಾಂಗ್ರೆಸ್ (Congress) ಅಧಿಕಾರಕ್ಕೆ ಬಂದರೆ ಮಲ್ಲಿಕಾರ್ಜುನ ಖರ್ಗೆಯವರನ್ನು (Mallikarjun Kharge) ಸಿಎಂ ಮಾಡುವುದಾಗಿ ಡಿಕೆಶಿ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಖರ್ಗೆಯವರಿಗೆ ಅವಕಾಶ ಸಿಕ್ಕಾಗಲೇ ಸಿಎಂ ಮಾಡಲಿಲ್ಲ. ಈಗ ಏನು ಮಾಡುತ್ತಾರೆ? ದೇವೇಗೌಡರು (H.D.Deve Gowda) ಆವಾಗಲೇ ಖರ್ಗೆಯವರನ್ನು ಸಿಎಂ ಮಾಡಿ ಎಂದು ಹೇಳಿದ್ದರು ಎಂದರು. ಇದನ್ನೂ ಓದಿ: ಹೆಲಿಪ್ಯಾಡ್ ಬಳಿ ಬೆಂಕಿ – ಸಿಎಂ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ತಪ್ಪಿದ ಅನಾಹುತ 

ಜೆಡಿಎಸ್ ಪಕ್ಷಕ್ಕೆ ಶಾಕ್ ಎಂದವರಿಗೆ ಈಗ ಶಾಕ್ ಆಗುತ್ತಿದೆ. ನಾಳೆಯಿಂದ ಬಹಳಷ್ಟು ಜನ ಜೆಡಿಎಸ್ ಸೇರ್ಪಡೆಯಾಗಲಿದ್ದು, ನಮಗೆ ಯಾವುದೇ ರೀತಿಯ ಶಾಕ್ ಇಲ್ಲ. ಬಿಜೆಪಿಯಿಂದ (BJP) ಟಿಕೆಟ್ ವಂಚಿತರಾದ ದೊಡ್ಡಪ್ಪಗೌಡ ಪಾಟೀಲ್ (Doddappagouda Patil) ಅವರಿಗೆ ಜೇವರ್ಗಿ ಮತಕ್ಷೇತ್ರದಲ್ಲಿ ಜೆಡಿಎಸ್ ಟಿಕೆಟ್ ಫೈನಲ್ ಆಗಿದೆ ಎಂದು ಹೇಳಿದರು. ಇದನ್ನೂ ಓದಿ: ಚುನಾವಣೆ ವೇಳೆ ಶಾಂತಿ ಕದಡಲು VHP ಅಧ್ಯಕ್ಷನ ಮೇಲೆ ಫೈರಿಂಗ್: ಬೋಪಯ್ಯ

Share This Article