ಮಹಿಳಾ ನೌಕರರಿಗೆ ಋತುಚಕ್ರ ರಜೆ ನೀಡಲು ಶಿಕ್ಷಣ ಇಲಾಖೆ ಆದೇಶ

1 Min Read

ಬೆಂಗಳೂರು: ಸರ್ಕಾರದಿಂದ ಉದ್ಯೋಗಸ್ಥ ಮಹಿಯರಿಗೆ ಋತುಚಕ್ರ ರಜೆ (Menstrual Leave) ನೀಡಲು ಆದೇಶ ಹಿನ್ನೆಲೆಯಲ್ಲಿ ಶಿಕ್ಷಣ ‌ಇಲಾಖೆಯಲ್ಲಿ ಕಡ್ಡಾಯವಾಗಿ ಋತುಚಕ್ರ ರಜೆ ನೀಡುವಂತೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಶಾಲಾ ಶಿಕ್ಷಣ ‌ಇಲಾಖೆ ಆಯುಕ್ತರಿಂದ ರಜೆ ನೀಡಲು ಆದೇಶ ಹೊರಡಿಸಿದ್ದು, ಋತುಚಕ್ರ ರಜೆಗೆ ಷರತ್ತು ವಿಧಿಸಲಾಗಿದೆ.

ಷರತ್ತುಗಳೇನು?
1.ಮಹಿಳಾ ನೌಕರರು ಆಯಾ ತಿಂಗಳ ‘ಋತುಚಕ್ರ ರಜೆ’ಯನ್ನು ಆಯಾ ತಿಂಗಳಿನಲ್ಲಿಯೇ ಬಳಸಿಕೊಳ್ಳುವುದು. ಹಿಂದಿನ ತಿಂಗಳ ‘ಋತುಚಕ್ರ ರಜೆ’ಯನ್ನು ಮುಂದಿನ ತಿಂಗಳಿಗೆ ವಿಸ್ತರಿಸಲು (CARRY OVER) ಅವಕಾಶವಿರುವುದಿಲ್ಲ.

2.ಪ್ರತಿ ತಿಂಗಳು ಒಂದು ದಿನದ ‘ಋತುಚಕ್ರ ರಜೆ’ ಪಡೆಯಲು ಮಹಿಳಾ ನೌಕರರು ಯಾವುದೇ ವೈದ್ಯಕೀಯ ಪ್ರಮಾಣ ಪತ್ರವನ್ನು ಒದಗಿಸುವ ಅವಶ್ಯಕತೆ ಇರುವುದಿಲ್ಲ.

3.ಋತುಚಕ್ರ ಹೊಂದಿರುವ, 18 ರಿಂದ 52 ವಯಸ್ಸಿನ ಮಹಿಳಾ ಸರ್ಕಾರಿ ನೌಕರರು ಈ ರಜೆಯನ್ನು ಪಡೆಯಲು ಅರ್ಹರಿರುತ್ತಾರೆ.

4.ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಲು ಸಕ್ಷಮವಾದ ಪ್ರಾಧಿಕಾರಿಯು ಋತುಚಕ್ರ ರಜೆಯನ್ನು ಮಂಜೂರು ಮಾಡಬಹುದು.

5.ಈ ರಜೆಯನ್ನು ರಜೆ/ಹಾಜರಾತಿ ಪುಸ್ತಕದಲ್ಲಿ ಪ್ರತ್ಯೇಕವಾಗಿ ನಮೂದಿಸತಕ್ಕದ್ದು.

6.ಋತುಚಕ್ರ ರಜೆಯನ್ನು ಬೇರೆ ಯಾವುದೇ ರಜೆಯೊಂದಿಗೆ ಸಂಯೋಜಿಸತಕ್ಕದ್ದಲ್ಲ.

Share This Article