ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಲು ವಿದೇಶ ಪ್ರವಾಸದ ಆಫರ್ ಅನ್ನು ಶಿಕ್ಷಣ ಇಲಾಖೆ ನೀಡಿದೆ.
DDPI, BEO, ಮುಖ್ಯ ಶಿಕ್ಷಕರು, ಪ್ರಾಂಶುಪಾಲರಿಗೆ ಫಾರಿನ್ ಟ್ರಿಪ್ ಆಫರ್ ಕೊಡಲಾಗಿದೆ. ಕರ್ನಾಟಕ ಪಬ್ಲಿಕ್ ಶಾಲೆ ಮತ್ತು ಸರ್ಕಾರಿ ಶಾಲೆಯಲ್ಲಿ ದಾಖಲಾತಿ ಹೆಚ್ಚಳ ಮಾಡಿದರೆ ಈ ಸೌಲಭ್ಯ ಸಿಗಲಿದೆ ಎಂದು ತಿಳಿಸಲಾಗಿದೆ.
2026-27 ನೇ ಸಾಲಿಗೆ ಈಗಾಗಲೇ ದಾಖಲಾತಿ ಅಭಿಯಾನ ಶುರು ಮಾಡಲಾಗಿದೆ. ಈ ದಾಖಲಾತಿಯನ್ನ ಹೆಚ್ಚು ಮಾಡುವವರಿಗೆ ವಿದೇಶ ಪ್ರವಾಸ ಸೌಲಭ್ಯ ಇರಲಿದೆ. ಅಧ್ಯಯನ ಹೆಸರಿನಲ್ಲಿ ವಿದೇಶಕ್ಕೆ ಹೋಗುವ ಅವಕಾಶ ಸಿಗಲಿದೆ.
2026-27ನೇ ಸಾಲಿಗೆ ಕೆಪಿಎಸ್ಗಳಲ್ಲಿ ಶೇ.25, ಉಳಿದ ಶಾಲೆ, ಕಾಲೇಜುಗಳಲ್ಲಿ ಶೇ.15 ದಾಖಲಾತಿ ಹೆಚ್ಚಿಸಲು ಗುರಿ ನೀಡಲಾಗಿದೆ. ಗುರಿ ಮೀರಿ ದಾಖಲಾತಿ ಮಾಡುವ ತಲಾ ಐವರು ಡಿಡಿಪಿಐ, ಬಿಇಒ, ಮುಖ್ಯಶಿಕ್ಷಕರು, ಪ್ರಾಂಶುಪಾಲರಿಗೆ ವಿದೇಶಿ ಅಧ್ಯಯನ ಪ್ರವಾಸ ಇರಲಿದೆ. ಸರ್ಕಾರಿ ಶಾಲೆಗಳ ಬಗ್ಗೆ ಜಾಗೃತಿಗೆ ಪ್ರತಿ ಜಿಲ್ಲೆಯಲ್ಲೂ ರಾಯಭಾರಿಗಳ ಆಯ್ಕೆಗೆ ಇಲಾಖೆ ಸೂಚಿಸಿದೆ.
