ಚೆನ್ನೈ: ತಮಿಳುನಾಡು ಓಂ ಶಕ್ತಿ ದೇವಸ್ಥಾನಕ್ಕೆ ತೆರಳಿದ್ದ ಕರ್ನಾಟಕದ ಭಕ್ತರು ಇದೀಗ ಪರದಾಡುವಂತಾಗಿದೆ. ಕರ್ನಾಟಕದ 15ಕ್ಕೂ ಹೆಚ್ಚು ಬಸ್‌ಗಳು ಪಾರ್ಕಿಂಗ್‌ನಲ್ಲೇ ಲಾಕ್ ಆಗಿರುವ ಪರಿಣಾಮ ರಾಜ್ಯದ ವಿವಿಧೆಡೆಯಿಂದ ತೆರಳಿದ್ದ ಭಕ್ತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹೌದು. ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆಯಿಂದ ಭಕ್ತರು ಮೆಲ್ಮರವತ್ತುರ್‌ನ ಓಂ ಶಕ್ತಿ ದೇವಾಲಯಕ್ಕೆ ತೆರಳಿದ್ದರು. ಇದೇ ಪ್ರದೇಶದಲ್ಲಿ ತಮಿಳುನಾಡು ಸಿಎಂ ಕಾರ್ಯಕ್ರಮ ಕೂಡ ಇತ್ತು. ಕಾರ್ಯಕ್ರಮ ಹಿನ್ನೆಲೆ ಆ ಭಾಗದಲ್ಲಿ ಖಾಸಗಿ ವಾಹನಗಳ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಪರಿಣಾಮ ಕರ್ನಾಟಕದಿಂದ ತೆರಳಿದ್ದ ಭಕ್ತರು ಪಾರ್ಕಿಂಗ್‌ನಲ್ಲೇ ಸಿಲಿಕಿದ್ದಾರೆ. ಬೆಳಗ್ಗೆ 9 ಗಂಟೆಯಿಂದಲೂ ಪಾರ್ಕಿಂಗ್‌ನಲ್ಲೇ ಸಿಲುಕಿ ಸಂಕಷ್ಟಕ್ಕೀಡಾಗಿದ್ದಾರೆ ಎಂದು ತಿಳಿದುಬಂದಿದೆ.

