ನಮ್ಮ ಕಂಪನಿ ಹೆಸರಲ್ಲಿ ಅಕ್ರಮ ಖಾತೆ ತೆರೆದು ಹಣ ವರ್ಗಾವಣೆ: ಹ್ಯಾಪಿಯೆಸ್ಟ್‌ ಮೈಂಡ್ಸ್‌ ಟೆಕ್ನಾಲಜಿ ಕಂಪನಿ ಸ್ಪಷ್ಟನೆ

Public TV
2 Min Read

– ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದ ಬಗ್ಗೆ ಕಂಪನಿ ಕಾರ್ಯದರ್ಶಿ ಪ್ರತಿಕ್ರಿಯೆ

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಾಗಿರುವ (Valmiki Development Corporation) ಬಹುಕೋಟಿ ಹಗರಣದ ವಿಚಾರವಾಗಿ ಹ್ಯಾಪಿಯೆಸ್ಟ್‌ ಮೈಂಡ್ಸ್‌ ಟೆಕ್ನಾಲಜಿ ಕಂಪನಿ (Happiest Minds Technologies) ಪ್ರತಿಕ್ರಿಯಿಸಿದೆ. ನಮ್ಮ ಕಂಪನಿ ಹೆಸರಿನಲ್ಲಿ ಅಕ್ರಮ ಖಾತೆ ತೆರೆದು ಹಣ ವರ್ಗಾವಣೆ ಮಾಡಲಾಗಿದೆ ಎಂದು ದೂರಿದೆ.

ಈ ಕುರಿತು ಮಾತನಾಡಿರುವ ಹ್ಯಾಪಿಯೆಸ್ಟ್ ಮೈಂಡ್ಸ್‌ ಟೆಕ್ನಾಲಜಿ ಕಂಪನಿ ಕಾರ್ಯದರ್ಶಿ ಪ್ರವೀಣ್‌ ದಾರ್ಶಂಕರ್‌ ಮಾತನಾಡಿ, ನಮ್ಮದು ಐಟಿ ಕಂಪನಿ. ಈ ಅಕ್ರಮ ಆಗಿರೋದು ನಿನ್ನೆ ನಮಗೆ ಮಾಹಿತಿ ಬಂದಿತ್ತು. ಕೂಡಲೇ ಬ್ಯಾಂಕ್‌ನವರ ಬಳಿ ವಿಚಾರಿಸಿದಾಗ ನಮ್ಮ ಕಂಪನಿ ಹೆಸರಲ್ಲಿ ಅಕ್ರಮ ಖಾತೆ ತೆರೆದು ಹಣ ವರ್ಗಾವಣೆ ಆಗಿರೋದು ತಿಳಿದು ಬಂತು. ಹೈದಾರಬಾದ್‌ನ ಬಂಜಾರ ಬ್ರಾಂಚ್‌ನಲ್ಲಿ ಖಾತೆ ತೆರೆಯಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ವಾಲ್ಮೀಕಿ ನಿಗಮದಿಂದ 17 ಖಾತೆಗಳಿಗೆ ನಗದು ವರ್ಗಾವಣೆ – ಬಿಜೆಪಿಯಿಂದ ದಾಖಲೆ ಬಿಡುಗಡೆ

ನಕಲಿ ಹೆಸರಲ್ಲಿ ನಾವೇ ಡೈರಕ್ಟರ್ ಅಂತಾ ಖಾತೆ ಓಪನ್ ಮಾಡಿದ್ದಾರೆ. ಕೆವೈಸಿ ನಿಯಮ ಉಲ್ಲಂಘನೆ ಆಗಿದೆ. ಆ ಬ್ಯಾಂಕಿನಲ್ಲಿ ನಮ್ಮದು 6 ಅಕೌಂಟ್ ಇದೆ. ಬ್ಯಾಂಕ್‌ನವರು ಹೊಸ ಅಕೌಂಟ್ ಆಗಬೇಕಿದ್ರೂ, ನಮ್ಮನ್ನ ಸಂಪರ್ಕಿಸಿಲ್ಲ. ಫೇಕ್ ಡಾಕ್ಯುಮೆಂಟ್ ಸಿದ್ಧಮಾಡಿ ಹೀಗೆ ಮಾಡಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಬ್ಯಾಂಕ್‌ನವರಿಗೆ ನಾವು ದೊಡ್ಡ ಗ್ರಾಹಕರು. ತನಿಖೆ ಮಾಡೋದಾಗಿ ಬ್ಯಾಂಕ್‌ನವರು ಕೂಡ ಹೇಳೋದಾಗಿ ಹೇಳಿದ್ದಾರೆ. ಬ್ಯಾಂಕ್‌ನ್ನು ಯಾರಾದರು ಉದ್ಯೋಗಿ ಒಪ್ಪಂದ ಮಾಡುಕೊಂಡು ಈ ಕೆಲಸ ಮಾಡಿರಬಹುದು. 4.5 ಕೋಟಿ ಅಕೌಂಟ್‌ಗೆ ಬಂದಿದೆ. ಆದರೆ ಅದು ನಮ್ಮ ಅಕೌಂಟ್ ಅಲ್ಲ. ನಾವು ಇಂದು ಪೊಲೀಸರಿಗೆ ದೂರು ಕೊಡಲಿದ್ದೇವೆ. ಭ್ರಷ್ಟ ಕೆಲಸ ಮಾಡಿ ನಮ್ಮ ಮಾನಹಾನಿ ಮಾಡಿದವರ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ ಎಂದು ‘ಪಬ್ಲಿಕ್ ಟಿವಿ’ಗೆ ಸಂಸ್ಥೆ ಕಾರ್ಯದರ್ಶಿ ಪ್ರವೀಣ್ ದಾರ್ಶಂಕರ್ ತಿಳಿಸಿದ್ದಾರೆ. ಇದನ್ನೂ ಓದಿ: ವಾಲ್ಮೀಕಿ ನಿಗಮದ ಬಹುಕೋಟಿ ಭ್ರಷ್ಟಾಚಾರ ಕೇಸ್‌ – ಆರೋಪಿಗಳು 6 ದಿನ ಪೊಲೀಸ್‌ ಕಸ್ಟಡಿಗೆ

ನಿಗಮದಿಂದ ಯಾವ್ಯಾವ ಕಂಪನಿಗೆ ಎಷ್ಟೆಷ್ಟು ಹಣ?
ಟಾಲೆನ್ ಕ್ಯೂ ಸಾಫ್ಟ್ವೇರ್ ಇಂಡಿಯಾ ಪ್ರೈ. ಲಿ. – 5,10,00,000 ರೂ
ಸಿಸ್ಟಮ್ ಅಂಡ್ ಸರ್ವೀಸ್ ಕಂಪೆನಿ – 4,55,00,000 ರೂ
ರಾಮ್ ಎಂಟರ್‌ಪ್ರೈಸಸ್ – 5,07,00,000 ರೂ.
ಸ್ಕಿಲ್ ಮ್ಯಾಪ್ ಟ್ರೈನಿಂಗ್ ಅಂಡ್ ಸರ್ವಿಸಸ್ ಪ್ರೈ. ಲಿ. – 4,84,00,000 ರೂ.
ಸ್ವಾಪ್ ಡಿಸೈನ್ ಪ್ರೈ. ಲಿ – 5,15,00,000 ರೂ.
ಜಿ.ಎನ್ ಇಂಡಸ್ಟ್ರೀಸ್ – 4,42,00,000 ರೂ.
ನಾವೆಲ್ ಸೆಕ್ಯುರಿಟಿ ಸರ್ವಿಸಸ್ ಪ್ರೈ. ಲಿ. – 4,56,00,000 ರೂ.
ಸುಜಲ್ ಎಂಟರ್‌ಪ್ರೈಸಸ್ – 5,63,00000 ರೂ.
ಗ್ರಾಬ್ ಎ ಗ್ರಬ್ ಸರ್ವಿಸಸ್ ಪ್ರೈ. ಲಿ. – 5,88,00,000 ರೂ.
ಗಿ6 ಬ್ಯುಸಿನೆಸ್ ಸರ್ವಿಸಸ್ – 4,50,01,500 ರೂ.
ನಿತ್ಯಾ ಸೆಕ್ಯುರಿಟಿ ಸರ್ವಿಸಸ್ – 4,47,50,000 ರೂ.
ವೋಲ್ಟಾ ಟೆಕ್ನಾಲಜಿ ಸರ್ವಿಸಸ್ – 5,12,50,000 ರೂ.
ಅಕಾರ್ಡ್ ಬ್ಯುಸಿನೆಸ್ ಸರ್ವಿಸಸ್ – 5,46,85,000 ರೂ.
ಹ್ಯಾಪಿಯಸ್ಟ್ ಮೈಂಡ್ಸ್ ಟೆಕ್ನಾಲಜಿ ಲಿಮಿಟೆಡ್ – 4,53,15,000 ರೂ.
ಮ್ಯಾನ್ಹು ಎಂಟರ್‌ಪ್ರೈಸಸ್ – 5,01,50,000 ರೂ.
ವೈ.ಎಂ ಎಂಟರ್‌ಪ್ರೈಸಸ್ – 4,98,50,000 ರೂ.

Share This Article