ಕಾಂಗ್ರೆಸ್‌ನಿಂದ `ಸಿಎಂ ಅಂಕಲ್’ ಅಭಿಯಾನ – ಭುಗಿಲೆದ್ದ ಕೇಸರಿ ವಿವಾದ, ಸರ್ಕಾರಕ್ಕೆ ಹಲವು ಪ್ರಶ್ನೆ

Public TV
3 Min Read

ಬೆಂಗಳೂರು: ವಿವೇಕ ಶಾಲೆಗಳಿಗೆ ಕೇಸರಿ (Saffron) ಬಣ್ಣ ಹೊಡೆಸುವ ವಿಚಾರ ವಿವಾದಕ್ಕೆ ತಿರುಗುತ್ತಿದ್ದಂತೆ ಕಾಂಗ್ರೆಸ್ (Congress) `ಸಿಎಂ ಅಂಕಲ್’ (CM Uncle) ಅಭಿಯಾನ ಆರಂಭಿಸಿದ್ದು, ಬೊಮ್ಮಾಯಿ (Basavaraj Bommai) ಸರ್ಕಾರದ ಮುಂದೆ ಹಲವು ಪ್ರಶ್ನೆಗಳನ್ನಿಟ್ಟಿದೆ.

ತನ್ನ ಆಧಿಕೃತ ಟ್ವಿಟ್ಟರ್ (Twitter) ಖಾತೆಯಲ್ಲಿ ಸಿಎಂ ಅಂಕಲ್ ಹ್ಯಾಶ್‌ಟ್ಯಾಗ್‌ನೊಂದಿಗೆ ಅಭಿಯಾನ ಆರಂಭಿಸಿರುವ ಕರ್ನಾಟಕ ಕಾಂಗ್ರೆಸ್ ಹಲವು ಪ್ರಶ್ನೆಗಳನ್ನು ಎತ್ತಿದೆ. ಇದನ್ನೂ ಓದಿ: ದಲಿತರು, ಆದಿವಾಸಿ ಹಕ್ಕುಗಳ ಮೇಲೆ BJP, RSS ಆಕ್ರಮಣ – ರಾಹುಲ್ ಕಿಡಿ

ಟ್ವೀಟ್‌ನಲ್ಲಿ ಏನಿದೆ?
ಸಿಎಂ ಅಂಕಲ್ ಶಾಲೆಗೆ ಯಾವ ಬಣ್ಣನಾದ್ರೂ ಹೊಡಿರಿ, ನಮ್ಮ ಉಡುಪಿಯಲ್ಲಿ ಶಾಲೆಗೆ ಬರಲು ರಸ್ತೆಯೇ ಸರಿ ಇಲ್ಲ, ನಾವು ಶಾಲೆಗೆ ಬಂದರೆ ತಾನೆ ನಿಮ್ಮ ಬಣ್ಣ ನೋಡಲು ಸಾಧ್ಯವಾಗುವುದು? ನಾವೇ ನಮ್ ಕೈಲಾದಷ್ಟು ಸರಿಪಡಿಸಿದ್ದೇವೆ, ನೀವ್ ಯಾವಾಗ ನಿಮ್ಮ ಜವಾಬ್ದಾರಿ ನಿರ್ವಹಿಸುವುದು ಸಿಎಂ ಅಂಕಲ್? ಇದನ್ನೂ ಓದಿ: ದೊಡ್ಮನೆಯಲ್ಲಿ ರಂಪಾಟ: ಕೈ ಕೈ ಮಿಲಾಯಿಸಿದ ಸಂಬರ್ಗಿ-ಗೊಬ್ಬರಗಾಲ

ಶಾಲೆಗಳಿಗೆ ಬಣ್ಣ ಬಳಿಯುವ ರಾಜಕೀಯಕ್ಕೆ (Politics) ಮುಂದಾದ ಬಿಜೆಪಿ (BJP) ನಾಯಕರು ಉತ್ತರಿಸಲಿ. ಏಕೆ ತಮ್ಮ ಕಾರುಗಳಿಗೆ ಕೇಸರಿ ಪೈಂಟ್ ಬಳಸಿಲ್ಲ? ಎಷ್ಟು ಬಿಜೆಪಿ ನಾಯಕರು ತಮ್ಮ ಮನೆಗೆ ಕೇಸರಿ ಬಣ್ಣ ಬಳಿದುಕೊಂಡಿದ್ದಾರೆ? ಮನೆ ಇರಲಿ ಕನಿಷ್ಠ ಕಂಪೌಂಡ್‌ಗೂ ಕೇಸರಿ ಬಣ್ಣ ಬಳಸಿಲ್ಲ ಏಕೆ? ಮೊದಲು ತಮ್ಮ ಮನೆಗೆ ಕೇಸರಿ ಬಳಿದುಕೊಳ್ಳಲಿ, ನಂತರ ಶಾಲೆಗಳತ್ತ ಬರಲಿ.

ಸರ್ಕಾರಿ ಶಾಲೆಗಳಷ್ಟೇ (Government School) ಅಲ್ಲ, ಖಾಸಗಿ ಶಾಲೆಗಳಿಗೂ ಸಂಪೂರ್ಣ ಪಠ್ಯಪುಸ್ತಕ ಕೊಡಲಿಲ್ಲ ಏಕೆ? ನಾವು ಶಾಲೆಗಳಿಗೆ ಬಣ್ಣ ನೋಡಲು ಬರಬೇಕಾ, ಪಾಠ ಕಲಿಯಲು ಬರಬೇಕಾ ಅಂಕಲ್? ಅರ್ಧ ವರ್ಷ ಕಳೆದರೂ ಪುಸ್ತಕವನ್ನೇ ಕೊಟ್ಟಿಲ್ಲ ಅಂದ್ರೆ ನಾವು ಓದಿ ಎಕ್ಸಾಮ್ ಬರೆಯೋದು ಹೇಗೆ ಸಿಎಂ ಅಂಕಲ್?

ಶಿಕ್ಷಣ ಕಾರ್ಯಕ್ಷಮತೆ ಸೂಚ್ಯಂಕದಲ್ಲಿ ಕರ್ನಾಟಕ 14ನೇ ಸ್ಥಾನಕ್ಕೆ ಕುಸಿದಿದೆಯಂತೆ, ಹಾಗಂತ ಪೇಪರ್‌ನಲ್ಲಿ ಬಂದಿತ್ತು..ನಮಗೆ ಸೂಚ್ಯಂಕದ ಬಗ್ಗೆ ಗೊತ್ತಿಲ್ಲ, ಆದ್ರೆ ನಮಗೆ ಶಾಲೆಯಲ್ಲಿ ಯಾವ ಸೌಕರ್ಯವೂ ಸಿಗ್ತಿಲ್ಲ, ಶಾಲೆಗೆ ಬಂದರೆ ಯಾವುದೋ ಬಸ್ ಸ್ಟ್ಯಾಂಡ್‌ಗೆ ಬಂದಂತೆ ಆಗುತ್ತಿದೆ. ಯಾಕೆ ಈ ಅನ್ಯಾಯ ಮಾಡ್ತಿದೀರಿ ಸಿಎಂ ಅಂಕಲ್?

ಕೋವಿಡ್ ಹೆಸರಲ್ಲಿ 2 ವರ್ಷ ನಮ್ಮ ವಿದ್ಯಾಭ್ಯಾಸ ಹಾಳು ಮಾಡಿದ್ರಿ, ಈಗ ಶೈಕ್ಷಣಿಕ ಸವಲತ್ತು, ಮೂಲಭೂತ ಸೌಕರ್ಯ ಕೊಡದೇ ನಮ್ಮ ವಿದ್ಯಾಭ್ಯಾಸ ಹಾಳು ಮಾಡ್ತಿದೀರಿ.. ನಿಮ್ ಮಕ್ಳು ಮಾತ್ರ ಓದಿ ದೊಡ್ಡ ದೊಡ್ಡ ಸಾಧನೆ ಮಾಡ್ಬೇಕು, ಉದ್ಯಮ ಕಟ್ಟಬೇಕು, ನಾವೂ ಆ ಸಾಧನೆ ಮಾಡೋದು ನಿಮಗೆ ಇಷ್ಟ ಇಲ್ವಾ ಸಿಎಂ ಅಂಕಲ್?

ಹೆಣ್ಮಕ್ಕಳು ಶಾಲೆಗೆ ಬರೋದಾದ್ರೂ ಹೇಗೆ? ರಾಜ್ಯದ ಹಲವು ಶಾಲೆಗಳಲ್ಲಿ ಹೆಣ್ಮಕ್ಳಿಗೆ ಶೌಚಾಲಯ ಇಲ್ಲದೆ ತುಂಬಾ ಕಷ್ಟ ಆಗ್ತಿದೆ. ಬೇಟಿ ಬಚಾವೋ, ಬೇಟಿ ಪಡಾವೋ ಅಂತ ಪಿಎಂ ಅಂಕಲ್ ಹೇಳ್ತಿದ್ರು, ಆದರೆ ಇಲ್ಲಿ `ಬಚಾವೋ’ ಆಗ್ತಿಲ್ಲ, `ಪಡಾವೋ’ನೂ ಆಗ್ತಿಲ್ಲ ಏಕೆ ಸಿಎಂ ಅಂಕಲ್? ಕೇಸರಿ ಬಣ್ಣದ್ದದರೂ ಸರಿ ನಮಗೊಂದು ಶೌಚಾಲಯ ಕಟ್ಟಿಸಿಕೊಡಿ.

ಕರ್ನಾಟಕದಲ್ಲಿ ದೊಡ್ಡವರಲ್ಲಿ ಇದ್ದ ತಾರತಮ್ಯ ಶಾಲೆಗಳಲ್ಲಿ ಮಕ್ಕಳ ವಿಚಾರದಲ್ಲೂ ಹೆಚ್ಚಾಗಿದೆ ಅಂತ ಪಿಎಂ ಅಂಕಲ್ ಅವರೇ ಹೇಳ್ತಿದಾರಲ್ಲ ಏಕೆ? ಅಂಬೇಡ್ಕರ್ ಅವರ ಪಾಠದಲ್ಲಿ ಸಮಾನತೆ ಅನ್ನೋ ಪದವನ್ನ ತುಂಬಾ ಓದಿದ್ದೇವೆ, ನಾವೆಲ್ಲ ಒಂದೇ ಆದರೂ ಪರಿಶಿಷ್ಟ ಜಾತಿ ಮಕ್ಕಳು ಇತರ ಸಮುದಾಯದ ಮಕ್ಕಳೊಂದಿಗೆ ಸಮವಾಗಿರಲು ಸಾಧ್ಯವಾಗ್ತಿಲ್ಲ ಏಕೆ ಅಂಕಲ್?

ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೂ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೂ ಅಸಮಾನತೆ ಹೆಚ್ಚಿದೆ ಏಕೆ? ಸಬ್ ಕ ಸಾತ್ ಸಬ್ ಕ ವಿಕಾಸ್ ಅಂತ ಹೇಳ್ತಿದ್ರು ಪಿಎಂಅಂಕಲ್, ಆದರೆ ಪರಿಶಿಷ್ಟ ಜಾತಿ, ಪಂಗಡಗಳ ವಿದ್ಯಾರ್ಥಿವೇತನ ನೀಡದೆ ನಮ್ಮನ್ನು ಶೈಕ್ಷಣಿಕವಾಗಿ ಹಿಂದೆಯೇ ಉಳಿಸುತ್ತಿರುವುದೇಕೆ? ನಾವೂ ಎಲ್ಲರಂತೆ ಶಿಕ್ಷಿತರಾಗುವುದು ಬೇಡವೇ? ಸಿಎಂ ಅಂಕಲ್ ಎಂದು ಸರಣಿ ಪ್ರಶ್ನೆಗಳನ್ನ ಸರ್ಕಾರದ ಮುಂದಿಟ್ಟಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *