ಮದುವೆ ಸಮಾರಂಭದಲ್ಲಿ ಪಿಸ್ತೂಲ್, ಹಣದ ಜೊತೆ ಕಾಂಗ್ರೆಸ್ ಮುಖಂಡ ಡ್ಯಾನ್ಸ್ – ವಿಡಿಯೋ ವೈರಲ್

1 Min Read

ಕಲಬುರಗಿ: ಗನ್ ಹಿಡಿದು ಅಫ್ಜಲ್‌ಪುರ ಕಾಂಗ್ರೆಸ್ ಮುಖಂಡ ಮತಿನ್ ಅಹ್ಮದ್ ಪಟೇಲ್ ಡ್ಯಾನ್ಸ್ ಮಾಡಿರುವ ವಿಡಿಯೋ ಸಖತ್ ವೈರಲ್ ಆಗಿದೆ.

ಮದುವೆ ಸಮಾರಂಭವೊಂದರಲ್ಲಿ ಅಫಜಲ್‌ಪುರ ಕಾಂಗ್ರೆಸ್ ಮುಖಂಡ ಮತಿನ್ ಅಹ್ಮದ್ ಪಟೇಲ್ ಕಾರ್‌ನಲ್ಲಿ ಆಗಮಿಸಿ ಬಳಿಕ ಕೈಯಲ್ಲಿ ಗನ್ ಹಿಡಿದು, ಧುರಂಧರ್ ಸಿನಿಮಾ ಹಾಡಿಗೆ ಹೆಜ್ಜೆ ಹಾಕಿದ್ದಾನೆ. ಜೊತೆಗೆ ಶಾಸಕ ಎಂ.ವೈ.ಪಾಟೀಲ್ ಪುತ್ರ ಹಾಗೂ ಕೆಕೆಆರ್‌ಟಿಸಿ ಅಧ್ಯಕ್ಷ ಅರುಣಕುಮಾರ್ ಪಾಟೀಲ್ ಮೇಲೆ ಡ್ಯಾನ್ಸ್ ಮಾಡುವಾಗ ಕಂತೆ ಕಂತೆ ನೋಟುಗಳ ಸುರಿಮಳೆ ಮಾಡುವ ವೀಡಿಯೋ ಸಹ ವೈರಲ್ ಆಗಿದೆ.

ಸದ್ಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಅದು ಕಳೆದ ಒಂದು ತಿಂಗಳಿನ ವಿಡಿಯೋ. ಅದು ಒರಿಜಿನಲ್ ಗನ್ ಅಲ್ಲ. ಈಗಾಗಲೇ ಪೊಲೀಸರ ನೋಟಿಸ್‌ಗೆ ವಿವರಣೆ ಕೊಟ್ಟಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾನೆ.

ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ ಕ್ರಮ ಜರುಗಿಸುವುದಾಗಿ ಸ್ಪಷ್ಟನೆ ನೀಡಿದೆ.

Share This Article