ಪ್ರಮಾಣವಚನ ಕಾರ್ಯಕ್ರಮಕ್ಕೆ ಬರಲಿದ್ದಾರೆ ಬಿಜೆಪಿಯೇತರ ನಾಯಕರು

By
1 Min Read

ಬೆಂಗಳೂರು: ಕಂಠೀರವ ಸ್ಟೇಡಿಯಂನಲ್ಲಿ (Kanteerava Stadium) ನಡೆಯಲಿರುವ ಪ್ರಮಾಣವಚನ ಕಾರ್ಯಕ್ರಮಕ್ಕೆ ಬಿಜೆಪಿಯೇತರ (BJP) ರಾಜಕೀಯ ನೇತಾರರಿಗೆ ಆಹ್ವಾನ ನೀಡಲಾಗಿದೆ.

ಸಮಾನ ಮನಸ್ಕ ಪಕ್ಷಗಳ ಪ್ರಮುಖರನ್ನು ಸೇರಿಸುವ ಮೂಲಕ ಲೋಕಸಭೆ ಚುನಾವಣೆ ಸನಿಹದಲ್ಲಿ ಬಿಜೆಪಿಗೆ ಸಂದೇಶ ನೀಡಲು ಕಾಂಗ್ರೆಸ್‌ (Congress) ತಂತ್ರ ಹೆಣೆದಿದೆ. ಝಡ್ ಪ್ಲಸ್ ಭದ್ರತೆ ಹೊಂದಿರುವ 11 ಮಂದಿ ವಿವಿಐಪಿಗಳು ಭಾಗಿಯಾಗುವ ನಿರೀಕ್ಷೆಯಿದೆ. ಇದನ್ನೂ ಓದಿ: 2000 ರೂ.ಗೆ ಗುಡ್‌ಬೈ – ಗೊಂದಲ ಬೇಡ, ನಿಮ್ಮ ಹಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

ಕಾಂಗ್ರೆಸ್ ವಿವಿಐಪಿಗಳ ಪಟ್ಟಿ
* ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ
* ಸೋನಿಯಾ ಗಾಂಧಿ, ಎಐಸಿಸಿ ನಾಯಕಿ
* ರಾಹುಲ್ ಗಾಂಧಿ, ಎಐಸಿಸಿ ನಾಯಕ
* ಪ್ರಿಯಾಂಕಾ ವಾದ್ರಾ, ಎಐಸಿಸಿ ನಾಯಕ
* ಅಶೋಕ್ ಗೆಹ್ಲೋಟ್, ರಾಜಸ್ಥಾನ ಸಿಎಂ
* ಭೂಪೇಶ್ ಬಘೇಲ್, ಛತ್ತೀಸ್‍ಘಡ ಸಿಎಂ
* ಸುಖ್ವಿಂದರ್ ಸುಕ್ಕು, ಹಿಮಾಚಲ ಸಿಎಂ  ಇದನ್ನೂ ಓದಿ: ಕೊನೆಗೂ ಸಿಗ್ಲಿಲ್ಲ ಡಿಕೆಶಿ ಗಡ್ಡಕ್ಕೆ ಮುಕ್ತಿ


ಪದಗ್ರಹಣಕ್ಕೆ ಯಾರಾಗ್ತಾರೆ ಸಾಕ್ಷಿ?
ಕಾಂಗ್ರೆಸ್ಸೇತರ ನಾಯಕರ ಪಟ್ಟಿ
* ನಿತೀಶ್ ಕುಮಾರ್, ಬಿಹಾರ ಸಿಎಂ
* ಹೇಮಂತ್ ಸೊರೆನ್, ಜಾರ್ಖಂಡ್ ಸಿಎಂ
* ಎಂಕೆ ಸ್ಟಾಲಿನ್, ತಮಿಳುನಾಡು ಸಿಎಂ
* ಶರದ್ ಪವಾರ್, ಎನ್‍ಸಿಪಿ ಅಧ್ಯಕ್ಷ
* ತೇಜಸ್ವಿ ಯಾದವ್, ಬಿಹಾರ ಡಿಸಿಎಂ
* ಉದ್ಧವ್ ಠಾಕ್ರೆ, ಮಾಜಿ ಸಿಎಂ
* ಅಖಿಲೇಶ್ ಯಾದವ್, ಎಸ್‍ಪಿ ಅಧ್ಯಕ್ಷ
* ಓಮರ್ ಅಬ್ದುಲ್ಲಾ, ಮಾಜಿ ಸಿಎಂ
* ಸೀತಾರಾಮ್ ಯೆಚೂರಿ, ಸಿಪಿಎಂ ಮುಖಂಡ
* ಡಿ ರಾಜ, ಸಿಪಿಐ ಮುಖಂಡ
* ವೈಕೋ, ಎಂಡಿಎಂಕೆ ಮುಖಂಡ
* ಜಯಂತ್ ಚೌಧರಿ, ಆರ್‍ಎಲ್‍ಡಿ ಮುಖಂಡ
* ಮೆಹಬೂಬಾ ಮುಫ್ತಿ, ಪಿಡಿಪಿ ನಾಯಕಿ
* ಸಾದಿಕ್ ಆಲಿ ತಂಗಲ್, ಐಯುಎಂಎಲ್ ಮುಖಂಡ
* ದೀಪಂಕರ್ ಭಟ್ಟಾಚಾರ್ಯ, ಸಿಪಿಐ (ಎಂಎಲ್)
* ಜೋಸ್ ಕೆ ಮನಿ, ಕೇರಳ ಕಾಂಗ್ರೆಸ್

Share This Article