ಕರ್ನಾಟಕದಲ್ಲಿ ಎಲೆಕ್ಷನ್ ʼಉಪಯೋಗಿʼ ಕ್ಯಾಬಿನೆಟ್ ಪುನಾರಚನೆಗೆ ಬಿಜೆಪಿ ಕಸರತ್ತು

Public TV
2 Min Read

ಬೆಂಗಳೂರು: ಕಮಲ ಮನೆಯಲ್ಲಿ ಕೆಲವರಿಗೆ ಏಪ್ರಿಲ್ ಕಡೇ ವಾರ ಕಡೇ ಆಟನಾ? ಎಂಬ ಚರ್ಚೆ ರಾಜ್ಯ ರಾಜಕೀಯ ಪಡಸಾಲೆಯಲ್ಲಿ ಸದ್ದು ಮಾಡುತ್ತಿದೆ.

ಸರ್ಕಾರ, ಪಕ್ಷ ಎರಡರಲ್ಲೂ ಬದಲಾವಣೆ ಖಚಿತ ಎಂಬ ಸಂದೇಶ ಸಿಕ್ಕಿದೆ ಎನ್ನಲಾಗಿದ್ದು, ಜೆ.ಪಿ.ನಡ್ಡಾ ರಾಜ್ಯ ಪ್ರವಾಸದ ಬಳಿಕವಷ್ಟೇ ಬದಲಾವಣೆಗೆ ಮುಹೂರ್ತ ಇಡಲಾಗುತ್ತೆ ಎಂಬ ಸುದ್ದಿ ಚರ್ಚೆಗೆ ಗ್ರಾಸವಾಗಿದೆ. ಹಾಗಾಗಿ ಸಿಎಂ ಬಸವರಾಜ ಬೊಮ್ಮಾಯಿ ಟೀಂ ಮತ್ತು ಕಟೀಲ್ ಟೀಂಗೆ ಲಬ್‍ಡಬ್, ಲಬ್‍ಡಬ್ ಶುರುವಾಗಿದ್ದು ಎಲೆಕ್ಷನ್ ಪ್ಲಸ್ ಆಗುವಂತಹ ಟೀಂ ಕಟ್ಟಲು ಬಿಜೆಪಿ ಹೈಕಮಾಂಡ್‍ನಿಂದ ಮೆಗಾ ತಂತ್ರ ರೂಪಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕ ಪ್ರಗತಿ ನಿಲ್ಲಿಸಲು ಸಾಧ್ಯವಿಲ್ಲ, ತಮಿಳುನಾಡು, ತೆಲಂಗಾಣ ರಾಜ್ಯಗಳಿಗೆ ಹತಾಶೆ ಕಾಡುತ್ತಿದೆ: ಬೊಮ್ಮಾಯಿ

ಏಪ್ರಿಲ್ 16, 17ರಂದು ನಡೆಯಲಿರುವ ಬಿಜೆಪಿ ಕಾರ್ಯಕಾರಿಣಿಯ ಬಳಿಕ ರಾಜ್ಯ ಬಿಜೆಪಿಯಲ್ಲಿ ‘ಉಪಯೋಗಿ’ ಬದಲಾವಣೆ ಮಾಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಬೊಮ್ಮಾಯಿ ಕ್ಯಾಬಿನೆಟ್‍ನಲ್ಲಿನ ಅರ್ಧ ಡಜನ್‍ಗೂ ಹೆಚ್ಚು ಸಚಿವರು ಔಟ್ ಆಗ್ತಾರೆ ಎನ್ನಲಾಗಿದ್ದು, ಪುನಾರಚನೆ ಮಾಡಲು ಬಿಜೆಪಿ ಹೈಕಮಾಂಡ್‍ನಿಂದ ಸದ್ದಿಲ್ಲದೆ ಸರ್ವೇ ನಡೆಯುತ್ತಿದೆ. ಆ ಸರ್ವೇಯನ್ನ ಆಧರಿಸಿ, ಎಲೆಕ್ಷನ್‍ಗೆ ಉಪಯೋಗಿ ಆಗುವವರಿಗೆ ಛಾನ್ಸ್ ಸಿಗಲಿದ್ಯಾ ಎಂಬ ಕುತೂಹಲವಿದ್ದು, ಜಾತಿ ಆಧಾರಿತ, ಹಿಂದುತ್ವ ಆಧಾರಿತ, ಜನಪ್ರಿಯ ಆಧಾರಿತ ಉಪಯೋಗಿಗಳ ಹುಡುಕಾಟದಲ್ಲಿ ಬಿಜೆಪಿ ಹೈಕಮಾಂಡ್ ಕಸರತ್ತು ನಡೆಸ್ತಿದೆ ಎಂದು ದೆಹಲಿ ಮೂಲಗಳು ತಿಳಿಸಿವೆ.

ಇನ್ನೊಂದೆಡೆ ಬಿಜೆಪಿ ಸಂಘಟನೆಯಲ್ಲೂ ಉಪಯೋಗಿ ತಂತ್ರದ ಮೊರೆ ಹೋಗಲು ಪ್ಲಾನ್ ಮಾಡಿದ್ದು, ರಾಜಾಧ್ಯಕ್ಷರ ಸಹಿತ ಪದಾಧಿಕಾರಿಗಳನ್ನು ಬದಲಾಯಿಸಿದ್ರೆ ಹೇಗೆ ಎಂದು ಅಭಿಪ್ರಾಯ ಸಂಗ್ರಹ ಮಾಡುತ್ತಿದ್ದಾರೆ ಎನ್ನಲಾಗಿದೆ. ಸಂಘದ ಪ್ರಮುಖರು, ಪಕ್ಷದ ಕೆಲ ಹಿರಿಯ ನಾಯಕರ ಸಲಹೆ ಕೇಳಿರುವ ಬಿಜೆಪಿ ಹೈಕಮಾಂಡ್ ಸರ್ಕಾರದ ಬದಲಾವಣೆ ಜೊತೆಯಲ್ಲೇ ಸಂಘಟನೆಯ ಬದಲಾವಣೆ ಮಾಡಲು ತಂತ್ರಗಾರಿಕೆ ರೂಪಿಸಿದ್ದಾರೆ. ಒಂದು ವೇಳೆ ಸಂಘ, ಹಿರಿಯರ ಅಭಿಪ್ರಾಯದಲ್ಲಿ ಒಮ್ಮತ ಮೂಡಿದ್ರೆ ಬದಲಾವಣೆ ಬಹುತೇಕ ಖಚಿತ ಎಂಬ ಚರ್ಚೆಗಳು ನಡೆಯುತ್ತಿದೆ. ಒಟ್ನಲ್ಲಿ ಎಲೆಕ್ಷನ್ ಉಪಯೋಗಿ ಸಂಘಟನೆಯ ಅಸ್ತ್ರ ಬಳಸಲು ಮುಂದಾಗಿರುವ ಹೈಕಮಾಂಡ್ ಎಲ್ಲವೂ ಅಂದುಕೊಂಡಂತಾದ್ರೆ ಏಪ್ರಿಲ್ ಕಡೇ ವಾರದಲ್ಲಿ ಬದಲಾವಣೆಯ ಕಡೇ ಆಟ ಖಚಿತ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಇದನ್ನೂ ಓದಿ: ಬಿಜೆಪಿ, ಕಾಂಗ್ರೆಸ್ ಕಿತ್ತೊಗೆಯಲು ಕನ್ನಡಿಗರು ನನಗೆ ಸುಪಾರಿ ಕೊಟ್ಟಿದ್ದಾರೆ: ಹೆಚ್‌ಡಿಕೆ

Share This Article
Leave a Comment

Leave a Reply

Your email address will not be published. Required fields are marked *