ಮಂಡ್ಯ ಬಸ್ ದುರಂತ – ಕಲಾವಿದರ ಸಂಘದಿಂದ ಅಗತ್ಯ ನೆರವು: ರಾಕ್‍ಲೈನ್ ವೆಂಕಟೇಶ್

Public TV
1 Min Read

ಬೆಂಗಳೂರು: ಮಂಡ್ಯ ದುರಂತದ ಹಿನ್ನೆಲೆಯಲ್ಲಿ ಮೃತರ ಕುಟುಂಬಕ್ಕೆ ಅಗತ್ಯ ನೆರವು ನೀಡಲಾಗುವುದು ಎಂದು ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಹೇಳಿದ್ದಾರೆ.

ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಅವರು, ಕಲಾವಿದರ ಸಂಘದಿಂದ ಆಯೋಜಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಮುಂದೂಡಲಾಗಿದೆ. ಅಲ್ಲದೇ ಕಲಾವಿರ ಸಂಘದ ವತಿಯಿಂದ ದುರಂತದಲ್ಲಿ ಸಾವನ್ನಪ್ಪಿದ್ದ ಕುಟುಂಬ ಸದಸ್ಯರಿಗೆ ಅಗತ್ಯ ನೆರವು ನೀಡಲಾವುದು ಎಂದು ತಿಳಿಸಿದರು.

ಕಲಾವಿದರ ಸಂತಾಪ: ಬಸ್ ದುರಂತದಲ್ಲಿ ಮೃತಪಟ್ಟವರಿಗೆ ಸ್ಯಾಂಡಲ್‍ವುಡ್ ಹಲವು ನಟ, ನಟಿಯರು ಸಂತಾಪ ಸೂಚಿಸಿದ್ದು, ನಟ ಯಶ್, ದರ್ಶನ್, ಗಣೇಶ್, ರಾಗಿಣಿ ದ್ವಿವೇದಿ, ಶ್ರೀ ಮುರುಳಿ, ಜಗ್ಗೇಶ್, ಸುಮಲತಾ ಅಂಬರೀಶ್, ಉಪೇಂದ್ರ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ. ಅಲ್ಲದೇ ಅವರ ಕುಟುಂಬದವರಿಗೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *