ಜಾತಿ ಗಣತಿಗೆ ನೂರೆಂಟು ವಿಘ್ನ – ಡೆಡ್‌ಲೈನಲ್ಲಿ ಸಮೀಕ್ಷೆ ಮುಗಿಯೋದು ಡೌಟ್

Public TV
1 Min Read

ಬೆಂಗಳೂರು: ರಾಜ್ಯದಲ್ಲಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯು (Socio-Economic Survey) ಆಮೆಗತಿಯಲ್ಲಿ ಸಾಗುತ್ತಿದ್ದು ಮತ್ತಷ್ಟು ಜಟಿಲಗೊಂಡಿದೆ. ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7ರ ಒಳಗೆ ಸರ್ವೆ ಕಾರ್ಯ ಪೂರ್ಣಗೊಳ್ಳಬೇಕೆಂದು ಸರ್ಕಾರ ಏನೋ ಡೆಡ್‌ಲೈನ್ ಕೊಟ್ಟಿದೆ. ಆದರೆ ಸಮೀಕ್ಷೆ ಶುರುವಾಗಿ ಇವತ್ತಿಗೆ 5 ದಿನ ಕಳೆದಿದ್ದು, 4 ದಿನಗಳಲ್ಲಿ ಶೇ.10ರಷ್ಟು ಸಹ ಪೂರ್ಣಗೊಂಡಿಲ್ಲ. ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಇನ್ನೂ ಆರಂಭವೇ ಆಗಿಲ್ಲ.

ರಾಜ್ಯಾದ್ಯಂತ 4 ದಿನಗಳಲ್ಲಿ ಸರ್ವೇ ವಿಳಂಬ ಆಗಿದೆ ಅಂತ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ (CM Siddaramaiah) ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಬೇಸರವನ್ನೂ ವ್ಯಕ್ತಪಡಿಸಿದ್ದಾರೆ. ಶಿಕ್ಷಕರು ನೂರೆಂಟು ಸಮಸ್ಯೆಗಳನ್ನು ಎದುರಿಸ್ತಿದ್ದಾರೆ.  ಇದನ್ನೂ ಓದಿ:  ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ದಿನಾಂಕ ವಿಸ್ತರಣೆ ಮಾಡಲ್ಲ, ದಿನಕ್ಕೆ 10% ಸಮೀಕ್ಷೆ ಟಾರ್ಗೆಟ್: ಸಿಎಂ

ಜಾತಿಗಣತಿ ಆಮೆಗತಿ
* ಸಮೀಕ್ಷೆ ಗುರಿ – 1,43,81,702 ಕುಟುಂಬ
* 1 ದಿನದ ಸಮೀಕ್ಷೆ ಟಾರ್ಗೆಟ್ – 11.87 ಲಕ್ಷ
* 4 ದಿನದಲ್ಲಿ 2,62,626 ಮನೆಗಳ ಸಮೀಕ್ಷೆ ಪೂರ್ಣ
* ಇವತ್ತು 2,27,464 ಮನೆಗಳ ಸಮೀಕ್ಷೆ (ನಿನ್ನೆ 1,82,820 ಮನೆಗಳ ಸಮೀಕ್ಷೆ)
* 5 ದಿನಕ್ಕೆ ಒಟ್ಟು 4.10 ಲಕ್ಷ ಮನೆಗಳ ಸರ್ವೇ ಆಗಿದೆ.  ಇದನ್ನೂ ಓದಿ:  ಆಮೆಗತಿಯಲ್ಲಿ ಸಾಗಿದ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ – ಚುರುಕು ಮುಟ್ಟಿಸಲು ಅಖಾಡಕ್ಕಿಳಿದ ಸಿಎಂ ಸಿದ್ದರಾಮಯ್ಯ

ಶಿಕ್ಷಕರ ಸಮಸ್ಯೆಗಳೇನು?
* ಕೆಎಸ್‌ಸಿಬಿಸಿ ಆ್ಯಪ್ ಸರಿಯಾಗಿ ಓಪನ್ ಆಗುತ್ತಿಲ್ಲ
* ಯುನಿಕ್ ಹೌಸ್‌ಹೋಲ್ಡ್ ಐಡಿ (UHID) ಏಕಾಏಕಿ ಲಾಕ್ ಆಗುತ್ತಿರುವುದು
* ಯುಹೆಚ್‌ಐಡಿ ನಂಬರ್ ಸರಿಯಾಗಿ ವಿಳಾಸ ತೋರಿಸ್ತಿಲ್ಲ
* ಹಿರಿಯ ಶಿಕ್ಷಕರಿಗೆ ಆ್ಯಪ್ ಬಳಕೆ ಅರ್ಥವಾಗ್ತಿಲ್ಲ
* ಸರ್ವರ್, ನೆಟ್‌ವರ್ಕ್, ಒಟಿಪಿ, ಲೋಕೇಷನ್ ಸಮಸ್ಯೆ
* ಕೆಲವು ಕಡೆ ಡೇಟಾ ಅಪ್‌ಲೋಡ್ ಸಮಸ್ಯೆ
* 19 ಜಿಲ್ಲೆಗಳ 526 ಬ್ಲಾಕ್‌ಗಳಲ್ಲಿ ಸಿಬ್ಬಂದಿ ನಿಯೋಜನೆ ಆಗಿಲ್ಲ

Share This Article