ಕರ್ನಾಟಕದಲ್ಲೂ ಜಾತಿಗಣತಿ ಅಂಗೀಕಾರವಾಗುತ್ತಾ?- ಶುಕ್ರವಾರ ಕ್ಯಾಬಿನೆಟ್ ಅಜೆಂಡಾಕ್ಕೆ ಸೇರ್ಪಡೆ

Public TV
1 Min Read

– ಕಾಂಗ್ರೆಸ್ ನಿಲುವು ಸಮರ್ಥಿಸಿಕೊಂಡ ರಾಹುಲ್

ಬೆಂಗಳೂರು: ರಾಹುಲ್ ಗಾಂಧಿ ಆಶಯ ಜಾತಿಜನಗಣತಿ ಬಗ್ಗೆ ಕೊನೆಗೂ ಕರ್ನಾಟಕದಲ್ಲಿ ಸ್ಪಷ್ಟ ನಿರ್ಣಯ ತೆಗೆದುಕೊಳ್ಳಲು ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ. ಇದೇ ಶುಕ್ರವಾರ ನಡೆಯಲಿರುವ ಕ್ಯಾಬಿನೆಟ್ ಸಭೆಯಲ್ಲಿ ಜಾತಿಗಣತಿ ವರದಿಯನ್ನು ಮಂಡನೆ ಮಾಡುವ ಎಲ್ಲಾ ಸಾಧ್ಯತೆ ಇದೆ.

ಹಿಂದುಳಿದ ವರ್ಗಗಳ ಇಲಾಖೆ ಅಡಿ ಕ್ಯಾಬಿನೆಟ್ ಅಜೆಂಡಾದಲ್ಲಿ ಪ್ರಸ್ತಾಪಕ್ಕೆ ಈಗಾಗಲೇ ವಿಚಾರ ನಿಗದಿಯಾಗಿದೆ. ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ವರದಿ ಸಲ್ಲಿಸಿದ್ದು, ಲೋಕಸಭೆ ಚುನಾವಣೆ ಇದ್ದ ಕಾರಣ 1 ವರ್ಷದಿಂದಲೂ ವರದಿಯನ್ನ ಮುಟ್ಟದೇ ಸರ್ಕಾರ ಸುಮ್ಮನಿತ್ತು. ಆದರೀಗ, ಕ್ಯಾಬಿನೆಟ್‌ನಲ್ಲಿ ವರದಿ ಮಂಡಿಸಿ ಚರ್ಚೆಗೆ ಸಿಎಂ ಸಿದ್ಧತೆ ನಡೆಸಿದ್ದಾರೆ.

ಹಾಗಾದರೆ, ಜಾತಿಗಣತಿ ವರದಿ ಅಂಗೀಕಾರವೋ? ಸಂಪುಟ ಉಪಸಮಿತಿ ರಚನೆಯೋ? ಅನ್ನೋದು ಶುಕ್ರವಾರ ಗೊತ್ತಾಗಲಿದೆ. ಎಐಸಿಸಿ ಸಭೆಯಲ್ಲೂ ಜಾತಿ ಗಣತಿ ಬಗ್ಗೆ ರಾಹುಲ್ ಗಾಂಧಿ ಪ್ರಸ್ತಾಪಿಸಿದ್ದು, ದೇಶದಲ್ಲಿ ಮೋದಿ ಜಾತಿಜನಗಣತಿ ನಡೆಸಬೇಕು ಅಂತ ಆಗ್ರಹಿಸಿದ್ದಾರೆ. ತೆಲಂಗಾಣದಲ್ಲಿ ಜಾತಿಗಣತಿ ಮುನ್ನವೇ ಕ್ರಾಂತಿಕಾರಿ ನಿರ್ಧಾರ ಕೈಗೊಂಡಿದ್ದೇವೆ ಎಂದಿದ್ದಾರೆ. ಆದರೆ, ಸರ್ಕಾರ ಜಾತಿ ಜನಗಣತಿಯನ್ನ ಬೆದರುಗೊಂಬೆ ರೀತಿ ಬಳಕೆ ಮಾಡ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಟೀಕಿಸಿದ್ದಾರೆ.

Share This Article