Karnataka Budget: ರಾಜ್ಯದ ಗ್ರಾಮೀಣ ರಸ್ತೆಗಳಿನ್ನು ಪ್ರಗತಿ ಪಥ, ಕಲ್ಯಾಣ ಪಥ.!

Public TV
1 Min Read

ಬೆಂಗಳೂರು: ರಾಜ್ಯದ ಗ್ರಾಮೀಣ ಭಾಗದ ರಸ್ತೆಗಳಿನ್ನು ಪ್ರಗತಿ ಪಥ ಹಾಗೂ ಕಲ್ಯಾಣ ಪಥ ಎಂಬ ಹೆಸರಿನಲ್ಲಿ ಕರೆಸಿಕೊಳ್ಳಲಿದೆ. ಸಿಎಂ ಸಿದ್ದರಾಮಯ್ಯ ಅವರು ಇಂದು ವಿಧಾನಸಭೆಯಲ್ಲಿ ಮಂಡಿಸಿದ ಬಜೆಟ್‌ನಲ್ಲಿ ಈ ಘೋಷಣೆಯನ್ನು ಮಾಡಿದ್ದಾರೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯಡಿ ಮಾಡಿದ ಬಜೆಟ್‌ ಭಾಷಣದಲ್ಲಿ, ಗ್ರಾಮೀಣ ಭಾಗದ ರಸ್ತೆ ಸಂಪರ್ಕ ಜಾಲವನ್ನು ವ್ಯವಸ್ಥಿತವಾಗಿ ಮತ್ತು ಗುಣಾತ್ಮಕವಾಗಿ ಅಭಿವೃದ್ಧಿಪಡಿಸಲು ʼಪ್ರಗತಿ ಪಥʼ ಯೋಜನೆಯನ್ನು ಬಾಹ್ಯ ನೆರವಿನಿಂದ ಪ್ರಾರಂಭಿಸುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ಬೆಂಗಳೂರು BIECಯಿಂದ ತುಮಕೂರಿಗೆ, ಏರ್‌ಪೋರ್ಟಿಂದ  ದೇವನಹಳ್ಳಿಗೆ ಮೆಟ್ರೋ ರೈಲು!

ಏನಿದು ಪ್ರಗತಿ ಪಥ?
ರಾಜ್ಯದ 189 ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 50 ಕಿಲೋಮೀಟರ್‌ ರಸ್ತೆಯಂತೆ ರಸ್ತೆಗಳ ಅಭಿವೃದ್ಧಿ. ಒಟ್ಟು 9,450 ಕಿಲೋ ಮೀಟರ್‌ ಉದ್ದದ ರಸ್ತೆ ಸಂಪರ್ಕವನ್ನು 5,200 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಮಾಡುವ ಯೋಜನೆಯೇ ಪ್ರಗತಿ ಪಥ. ಇದನ್ನೂ ಓದಿ: ಗ್ಯಾರಂಟಿ ಭಾರದ ನಡುವೆ ಅನುದಾನ ಹಂಚಿಕೆ – ಯಾವ ಇಲಾಖೆಗೆ ಎಷ್ಟು?

ಏನಿದು ಕಲ್ಯಾಣ ಪಥ?
ಹೆಸರೇ ಸೂಚಿಸುವಂತೆ ಕಲ್ಯಾಣ ಕರ್ನಾಟಕ ಭಾಗದ ಗ್ರಾಮೀಣ ರಸ್ತೆಗಳ ಅಭಿವೃದ್ಧಿ. ರಾಜ್ಯದ 38 ಗ್ರಾಮೀಣ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್‌ ಮಾದರಿಯಲ್ಲಿ ಒಟ್ಟು 1,150 ಕಿಲೋ ಮೀಟರ್‌ ರಸ್ತೆ ಅಭಿವೃದ್ಧಿ. ಒಟ್ಟು 1,000 ಕೋಟಿ ವೆಚ್ಚದಲ್ಲಿ ಕಲ್ಯಾಣಪಥ ನಿರ್ಮಾಣವಾಗಲಿದೆ. ಇದನ್ನೂ ಓದಿ: ಬೆಂಗಳೂರು BIECಯಿಂದ ತುಮಕೂರಿಗೆ, ಏರ್‌ಪೋರ್ಟಿಂದ  ದೇವನಹಳ್ಳಿಗೆ ಮೆಟ್ರೋ ರೈಲು!

Share This Article