Karnataka Budget Live Updates

1 month agoMarch 6, 2026 1:26 pm

ಬೆಂಗಳೂರಿನ ವಿಕ್ಟೋರಿಯಾ ಇನ್ನು ಮುಂದೆ ಶಾಂತವೇರಿ ಗೋಪಾಲಗೌಡ ಆಸ್ಪತ್ರೆ

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯನ್ನು ʻಶಾಂತವೇರಿ ಗೋಪಾಲಗೌಡ ಆಸ್ಪತ್ರೆʼ ಎಂದು ಮರುನಾಮಕರಣಗೊಳಿಸಲಾಗುವುದು. ಬೆಂಗಳೂರು ವೈದ್ಯಕೀಯ ಕಾಲೇಜಿನ MBBS ಮತ್ತು BDS ವಿದ್ಯಾರ್ಥಿಗಳ ಬಾಲಕರ ಹಾಸ್ಟೆಲ್‌ ನಿರ್ಮಾಣಕ್ಕಾಗಿ 10 ಕೋಟಿ ರೂ.ಗಳ ಅನುದಾನ ಘೋಷಣೆ

1 month agoMarch 6, 2026 1:21 pm

CBSE ಪಠ್ಯಕ್ರಮದ 4 ಕ್ರೈಸ್‌ ಶಾಲೆ

ಬಿ.ಆರ್.‌ ಅಂಬೇಡ್ಕರ್‌ ರವರು ಭೇಟಿ ನೀಡಿದ ಸ್ಥಳಗಳಾದ ಕಲಬುರಗಿ, ವಿಜಯಪುರ, ಬೆಳಗಾವಿ ಹಾಗೂ ಕೋಲಾರ ಜಿಲ್ಲೆಗಳಲ್ಲಿಅವರ ಹೆಸರಿನಲ್ಲಿ CBSE ಪಠ್ಯಕ್ರಮದ ನಾಲ್ಕು ಕ್ರೈಸ್‌ ವಸತಿ ಶಾಲೆಗಳನ್ನು ಪ್ರಾರಂಭ

1 month agoMarch 6, 2026 1:19 pm

2,500 ಹುದ್ದೆ ಭರ್ತಿ

ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳಲ್ಲಿ ಖಾಲಿ ಇರುವ 2,500 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು.

1 month agoMarch 6, 2026 1:14 pm

50 ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯ

ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕಾಗಿ ಬೇಡಿಕೆಯಿರುವ ಜಿಲ್ಲೆಗಳಾದ ಬೆಂಗಳೂರು, ಮೈಸೂರು, ಮಂಗಳೂರು, ಧಾರವಾಡ, ಬೆಳಗಾವಿ, ಕಲಬುರಗಿ, ದಾವಣಗೆರೆ, ಶಿವಮೊಗ್ಗ ಹಾಗೂ ಬಳ್ಳಾರಿಯಲ್ಲಿ 150 ಸಂಖ್ಯಾಬಲದ 50 ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳನ್ನು ಪ್ರಾರಂಭಿಸಲಾಗುವುದು.

1 month agoMarch 6, 2026 1:07 pm

ಬೆಂಗಳೂರಿನಲ್ಲಿ 450 ಕಿ.ಮೀ ವೈಟ್ ಟ್ಯಾಪಿಂಗ್

ರಸ್ತೆಗಳ ದೀರ್ಘ ಕಾಲದ ಬಾಳಿಕೆಗಾಗಿ ಮುಂದಿನ ಮೂರು ವರ್ಷಗಳಲ್ಲಿ 450 ಕಿ.ಮೀ ಗೂ ಹೆಚ್ಚು ಉದ್ದದ ರಸ್ತೆಗಳನ್ನು 3,000 ಕೋಟಿ ರೂ.ಗಳ ವೆಚ್ಚದಲ್ಲಿ ವೈಟ್ ಟಾಪಿಂಗ್ ಮಾಡಲಾಗುವುದು. ಬೆಂಗಳೂರು ನಗರ ಪಾಲಿಕೆಗಳ ಸ್ವಂತ ಸಂಪನ್ಮೂಲದಲ್ಲಿ ಮುಂದಿನ ಮೂರು ವರ್ಷಗಳಲ್ಲಿ 175 ಜಂಕ್ಷನ್‌ಗಳ ಸೌಂದರ್ಯೀಕರಣ.

1 month agoMarch 6, 2026 1:01 pm

ಮುಖ್ಯಮಂತ್ರಿ ಸೌರ ಕೃಷಿ ಯೋಜನೆ

ಇದರಡಿ ಕೆಪಿಟಿಸಿಎಲ್ ಉಪಕೇಂದ್ರಗಳಲ್ಲಿ ಸೌರ ವಿದ್ಯುತ್ ಸ್ಥಾವರಗಳ ನಿರ್ಮಾಣ. ಅಂದಾಜು 10,500 ಕೋಟಿ ರೂ. ವೆಚ್ಚದಲ್ಲಿ 300 ಮೆಗಾವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಸ್ಥಾವರಗಳ ಆರಂಭ

1 month agoMarch 6, 2026 1:00 pm

ಗೃಹಾಧಾರಿತ ಉಪಶಮನ ಆರೈಕೆ

ಕೇರಳ ಮಾದರಿಯ ಗಂಭೀರ ಕಾಯಿಲೆಗಳಿರುವ ರೋಗಿಗಳಿಗೆ ಗೃಹಾಧಾರಿತ ಉಪಶಮನ ಆರೈಕೆ. ಮನೆಗಳಲ್ಲೇ ಚಿಕಿತ್ಸಾ ಸೇವೆ, ಗಂಭೀರ ದೀರ್ಘಕಾಲೀನ, ಮಾರಣಾಂತಿಕ ಕಾಯಿಲೆಗಳಿರುವ ರೋಗಿಗಳಿಗೆ ಈ ಆರೈಕೆ ಸಿಗಲಿದೆ. Pallium India ಸಂಸ್ಥೆಯ ಸಹಯೋಗದೊಂದಿಗೆ ಜಾರಿ

1 month agoMarch 6, 2026 12:57 pm

ಕರ್ನಾಟಕ ಉನ್ನತ ಶಿಕ್ಷಣ ಪರಿವರ್ತನೆ ಯೋಜನೆ

2500 ಕೋಟಿ ರೂ.ವೆಚ್ಚದಲ್ಲಿ ಈ ಯೋಜನೆ ಜಾರಿ. 40 ಸರ್ಕಾರಿ ಪ್ರಥಮ ದರ್ಜೆ ಕಾಲೇಜು, 11 ಪಾಲಿಟೆಕ್ನಿಕ್ ಗಳನ್ನು ಮಾದರಿ ಸಂಸ್ಥೆಗಳಾಗಿ ಅಭಿವೃದ್ಧಿ ಮಾಡುವ ಉದ್ದೇಶ

1 month agoMarch 6, 2026 12:56 pm

ಫಲಧಾರೆ ಕಾರ್ಯಕ್ರಮ

ಜಾನುವಾರುಗಳ ಸಂತಾನೋತ್ಪತ್ತಿ ಸಮಸ್ಯೆ ನಿವಾರಣೆಗೆ ಈ ಕಾರ್ಯಕ್ರಮದಡಿ ಶಿಬಿರಗಳ‌ ಆಯೋಜನೆ. 1000 ಗ್ರಾಮ ಪಂಚಾಯತಿಗಳಲ್ಲಿ ಫಲಧಾರೆ ಹೆಸರಿನಲ್ಲಿ ಶಿಬಿರಗಳು. ಇದಕ್ಕೆ 5 ಕೋಟಿ ರೂ. ವೆಚ್ಚ.

1 month agoMarch 6, 2026 12:53 pm

ಸಸ್ಯ ಸಂಜೀವಿನಿ ಯೋಜನೆ

ಪರಿಸರ ಸ್ನೇಹಿ ಜೈವಿಕ ಪೀಡನಾಶಕ, ಜೈವಿಕ ಕೀಟನಾಶಕಗಳ ಜತೆ ಇತರೆ ಸುರಕ್ಷಿತ ನಿರ್ವಹಣಾ ಕ್ರಮಗಳಿಗಾಗಿ ಈ ಯೋಜನೆ. ಮುಂದಿನ ಮೂರು ವರ್ಷಗಳಲ್ಲಿ ಜಾರಿ ಉದ್ದೇಶ

1 month agoMarch 6, 2026 12:53 pm

ವಸುಧಾಮೃತ ಕಾರ್ಯಕ್ರಮ

ಪರಿಸರ ಸ್ನೇಹಿ ಮತ್ತು ಸುಸ್ಥಿರ ಕೃಷಿ ಪದ್ಧತಿಗಳನ್ನು ಉತ್ತೇಜಿಸಲು ಈ ಕಾರ್ಯಕ್ರಮ. ಮುಂದಿನ ಮೂರು ವರ್ಷಗಳಲ್ಲಿ ಜಾರಿ

1 month agoMarch 6, 2026 12:51 pm

ಮುಖ್ಯಮಂತ್ರಿ ಕೃಷಿ ವಿಸ್ತಾರ ಯೋಜನೆ

ಕೃಷಿ ಸಂಸ್ಕರಣೆ, ಕೃಷಿ ತ್ಯಾಜ್ಯಗಳ ಮರುಬಳಕೆ, ಮಾರುಕಟ್ಟೆ ಸಂಪರ್ಕ ಬಲಪಡಿಸಲು ಹೊಸ ಕಾರ್ಯಕ್ರಮ. ರೈತರ ಸ್ಥಿರ ಮತ್ತು ಹೆಚ್ಚುವರಿ ಆದಾಯ ಮೂಲ ಸೃಜಿಸಲು ಈ ಯೋಜನೆ ಪೂರಕ. ಮುಂದಿನ ಮೂರು ವರ್ಷಗಳಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಜಾರಿ

1 month agoMarch 6, 2026 12:50 pm

41 ಕಿ.ಮೀ. ಮೆಟ್ರೋ ಮಾರ್ಗ

2026-27ರ ಹಣಕಾಸು ವರ್ಷದಲ್ಲಿ ಒಟ್ಟು 41 ಕಿ.ಮೀ. ಹೆಚ್ಚುವರಿ ಮೆಟ್ರೋ ಮಾರ್ಗಗಳನ್ನು ಪೂರ್ಣಗೊಳಿಸಲು ಯೋಜಿಸಲಾಗಿದೆ. ಇದರಿಂದ ದಿನಕ್ಕೆ 15 ಲಕ್ಷ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

1 month agoMarch 6, 2026 12:42 pm

ವಿದ್ಯಾರ್ಥಿಗಳಿಗೆ ಇಂದಿರಾ ಕ್ಯಾಂಟೀನ್‌

ಉನ್ನತ ವ್ಯಾಸಂಗ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗಾಗಿ ಬರುವ ವಿದ್ಯಾರ್ಥಿಗಳಿಗಾಗಿ ಧಾರವಾಡದಲ್ಲಿ ನಾಲ್ಕು ಹಾಗೂ ಬೆಂಗಳೂರಿನಲ್ಲಿ ಎರಡು ವಿದ್ಯಾರ್ಥಿ ಇಂದಿರಾ ಕ್ಯಾಂಟೀನ್ ಆರಂಭ

1 month agoMarch 6, 2026 12:31 pm

ವಿದ್ಯಾರ್ಥಿ ಚುನಾವಣೆ ನಡೆಸಲು ಘೋಷಣೆ

ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಚುನಾವಣೆ ನಡೆಸಲು ಘೋಷಣೆ. ಕಾಲೇಜು, ವಿವಿಯಲ್ಲಿ ದೌರ್ಜನ್ಯ ತಡೆಯಲು ರೋಹಿತ್ ವೇಮುಲ ಕಾಯ್ದೆ ಜಾರಿ.

1 month agoMarch 6, 2026 12:23 pm

ಅನಂತಮೂರ್ತಿಯವರ ಹೆಸರಿನಲ್ಲಿ ಅಧ್ಯಯನ ಪೀಠ

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಯು.ಆರ್. ಅನಂತಮೂರ್ತಿಯವರ ಹೆಸರಿನಲ್ಲಿ ಕುವೆಂಪು ವಿಶ್ವವಿದ್ಯಾಲಯದಲ್ಲಿ ಒಂದು ಅಧ್ಯಯನ ಪೀಠವನ್ನು ಸ್ಥಾಪಿಸಲಾಗುವುದು.

1 month agoMarch 6, 2026 12:17 pm

ಹವ್ಯಕ ಭಾಷಾ ಅಕಾಡೆಮಿ ಸ್ಥಾಪನೆ

ಕರ್ನಾಟಕ ರಾಜ್ಯದ ಸಂಸ್ಕೃತಿಯ ಅಂಗವಾಗಿರುವ ಹವ್ಯಕ ಭಾಷೆಯ ಬೆಳವಣಿಗೆಗೆ ಹವ್ಯಕ ಭಾಷಾ ಅಕಾಡೆಮಿ ಸ್ಥಾಪನೆ

1 month agoMarch 6, 2026 12:07 pm

ಮಾತಾ ವೈಷ್ಣೋದೇವಿ ಯಾತ್ರಿಕರಿಗೆ 5 ಸಾವಿರ ರೂ.

ಕರ್ನಾಟಕ ರಾಜ್ಯದಿಂದ ಶ್ರೀ ಮಾತಾ ವೈಷ್ಣೋದೇವಿ ದೇವಾಲಯಕ್ಕೆ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳಿಗೆ ಸರ್ಕಾರದಿಂದ ತಲಾ 5,000 ರೂ.ಗಳ ಸಹಾಯಧನವನ್ನು ಡಿ.ಬಿ.ಟಿ ಮೂಲಕ ವಿತರಣೆ. ಈ ಉದ್ದೇಶಕ್ಕೆ ಐದು ಕೋಟಿ ರೂ. ಅನುದಾನ ಮೀಸಲು

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯ ಮತ್ತು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯಗಳಿಗೆ ಮೂಲಭೂತ ಸೌಲಭ್ಯ ಹಾಗೂ ಕ್ಷೇತ್ರದ ಸಮಗ್ರ ಅಭಿವೃದ್ಧಿ ಕೈಗೊಳ್ಳಲು ಅಭಿವೃದ್ಧಿ ಪ್ರಾಧಿಕಾರಗಳನ್ನು ರಚನೆ.

1 month agoMarch 6, 2026 12:02 pm

ಗಾಂಧಿ ಸ್ಮಾರಕ ಸ್ತಂಭ

ಮಹಾತ್ಮಾ ಗಾಂಧೀಜಿರವರು ಭೇಟಿ ಕೊಟ್ಟ ರಾಜ್ಯದ ವಿವಿಧ ಸ್ಥಳಗಳಲ್ಲಿ ಅವರ ಸ್ಮರಣಾರ್ಥ ಗಾಂಧಿ ಸ್ಮಾರಕ ಸ್ತಂಭಗಳನ್ನು ನಿರ್ಮಾಣ. ದಿವಂಗತ ಪುಟ್ಟಣ್ಣ ಕಣಗಾಲ್‌ರವರ ನಿವಾಸವನ್ನು ವಸ್ತು ಸಂಗ್ರಹಾಲಯವನ್ನಾಗಿ ರೂಪಿಸಲು ಕ್ರಮ

Contents
1 month agoMarch 6, 2026 11:53 am

2 ಸಾವಿರ ಡೀಸೆಲ್ ಬಸ್ಸು ಖರೀದಿ

2 ಸಾವಿರ ಡೀಸೆಲ್ ಬಸ್ಸುಗಳನ್ನು ನೇರ ಖರೀದಿ ಮೂಲಕ ಒದಗಿಸಲು ಈಗಾಗಲೇ ಕ್ರಮವಹಿಸಲಾಗಿರುತ್ತದೆ. ಇದೂ ಸೇರಿದಂತೆ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಒಟ್ಟಾರೆ 6,596 ಸಂಖ್ಯೆಯ ಬಸ್ಸುಗಳನ್ನು ನಿಗಮಗಳಿಗೆ ಒದಗಿಸಲಾಗಿರುತ್ತದೆ. 2026-27ನೇ ಸಾಲಿನಲ್ಲಿ 1,000 ಡೀಸೆಲ್ ಬಸ್ಸುಗಳನ್ನು ಒದಗಿಸಲಾಗುವುದು.

1 month agoMarch 6, 2026 11:45 am

ಮೀನುಗಾರಿಕೆ ಕಿಟ್‌ ಮೌಲ್ಯ 20 ಸಾವಿರ ರೂ. ಏರಿಕೆ

ಮೀನುಗಾರರಿಗೆ ಉಚಿತವಾಗಿ ನೀಡುವ ಮೀನುಗಾರಿಕೆ ಸಲಕರಣೆ ಕಿಟ್ ಮೌಲ್ಯದ ದರವನ್ನು 10,000 ರೂ.ಗಳಿಂದ 20,000 ರೂ.ಗಳಿಗೆ ಹೆಚ್ಚಿಸಿ ಮೀನುಗಾರಿಕೆ ಚಟುವಟಿಕೆಗಳನ್ನು ಉತ್ತೇಜನ

1 month agoMarch 6, 2026 11:39 am

ಜಿಲ್ಲಾ, ತಾಲೂಕು ಆಸ್ಪತ್ರೆಗಳಿಗೆ ಇಸ್ಕಾನ್‌ ಆಹಾರ

ಇಸ್ಕಾನ್ ಮೂಲಕ ರೋಗಿಗಳಿಗೆ ಆಹಾರ ಪೂರೈಕೆಯ ಯಶಸ್ವಿ ಮಾದರಿಯನ್ನು ರಾಜ್ಯದ ಆಯ್ದ ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಿಗೆ ವಿಸ್ತರಿಸಲಾಗುವುದು.

1 month agoMarch 6, 2026 11:33 am

ಎನ್‌ಸಿಸಿ ಕೇಡೆಟ್‌ಗಳ ಕಾರ್ಯಬಲ ಹೆಚ್ಚಿಸಲು ಕ್ರಮ

ಕರ್ನಾಟಕದಲ್ಲಿ ಎನ್‌ಸಿಸಿ ಯನ್ನು ಉತ್ತೇಜಿಸುವ ಸಲುವಾಗಿ ಪ್ರಸ್ತುತ ಇರುವ 96,000 ಕೆಡೆಟ್‌ಗಳ ಕಾರ್ಯಬಲವನ್ನು ಮುಂದಿನ ಎರಡು ವರ್ಷಗಳಲ್ಲಿ 10,000 ಗಳಷ್ಟು ಹೆಚ್ಚಿಸಲು ಅಗತ್ಯ ಕ್ರಮ

1 month agoMarch 6, 2026 11:26 am

ಇಂಗ್ಲಿಷ್ ಭಾಷಾ ತರಬೇತಿಗಾಗಿ 24 ಕೋಟಿ ರೂ.

ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ದ್ವಿಭಾಷಾ ತರಗತಿಗಳನ್ನು ಜಾರಿಗೊಳಿಸಲು ಪ್ರಾಥಮಿಕ ಶಾಲಾ ಶಿಕ್ಷಕರ ಸಾಮರ್ಥ್ಯ ವೃದ್ಧಿಗಾಗಿ 24 ಕೋಟಿ ರೂ. ವೆಚ್ಚದಲ್ಲಿ ಇಂಗ್ಲಿಷ್ ಭಾಷಾ ತರಬೇತಿ ಕಾರ್ಯಕ್ರಮ

1 month agoMarch 6, 2026 11:23 am

15 ಸಾವಿರ ಬೋಧಕ ಹುದ್ದೆ ನೇಮಕ

ಖಾಲಿ ಇರುವ 15 ಸಾವಿರ ಬೋಧಕ ಹುದ್ದೆಗಳ ಭರ್ತಿ. ಸಾರ್ವಜನಿಕ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಹಂತ ಹಂತವಾಗಿ ಭರ್ತಿ ಮಾಡುವ ಘೋಷಣೆ

1 month agoMarch 6, 2026 11:16 am

ಮಹಿಳಾ ಅತಿಥಿ ಉಪನ್ಯಾಸಕರಿಗೂ 90 ದಿನಗಳ ಮಾತೃತ್ವ ರಜೆ ಘೋಷಣೆ

ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪಾಲಿಟೆಕ್ನಿಕ್ ಹಾಗೂ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಅತಿಥಿ ಉಪನ್ಯಾಸಕರುಗಳಿಗೆ 90 ದಿನಗಳ ಮಾತೃತ್ವ ರಜೆಯ ಸೌಲಭ್ಯವನ್ನು ಮುಂದಿನ ಶೈಕ್ಷಣಿಕ ಸಾಲಿನಿಂದ ಜಾರಿ

1 month agoMarch 6, 2026 11:11 am

ಸಾರಿಗೆ ಇಲಾಖೆಗೆ ಸಿಕ್ಕಿದ್ದೇನು?

ಶಕ್ತಿ ಯೋಜನೆಗೆ 5,300 ಕೋಟಿ ರೂ.

ಸಾರಿಗೆ ಸಿಬ್ಬಂದಿ ವೇತನ ಬಾಕಿ ಪಾವತಿಗೆ 1,271 ಕೋಟಿ ರೂ.

1 ಸಾವಿರ ಡೀಸೆಲ್ ಬಸ್ ಖರೀದಿ

ಕರ್ನಾಟಕ ಎಲೆಕ್ಟ್ರಿಕ್ ಬಸ್ ಯೋಜನೆಗೆ 2,000 ಕೋಟಿ ರೂ.

4 ಸಾವಿರ ವಿದ್ಯುತ್ ಚಾಲಿತ ಬಸ್

ಬಿಎಂಟಿಸಿಯ 32, ಸಾರಿಗೆ ನಿಗಮಗಳ 62 ಡಿಪೋ ಅಭಿವೃದ್ಧಿ

ಅಪಘಾತ ಸ್ಥಳ ಗುರುತಿಸಲು ಸಾಫ್ಟ್‌ವೇರ್ ಮತ್ತು ಡ್ಯಾಶ್ ಬೋರ್ಡ್ – 5 ಕೋಟಿ ರೂ.

ರಾಜ್ಯಸ 25 ಆರ್ ಟಿ ಒ ಕಚೇರಿಗಳಲ್ಲಿ ರೂಫ್ ಟಾಪ್ ಸೋಲಾರ್ ಅಳವಡಿಕೆಗೆ 10 ಕೋಟಿ ರೂ.

ತುಮಕೂರಿನಲ್ಲಿ ಸೀಜಿಂಗ್ ಯಾರ್ಡ್ ನಿರ್ಮಾಣಕ್ಕೆ 5 ಕೋಟಿ‌ ರೂ.

ಚಿಕ್ಕಮಗಳೂರು, ತುಮಕೂರಿನಲ್ಲಿ ಸ್ವಯಂಚಾಲಿತ ಪರೀಕ್ಷಾ ಪಥ ನಿರ್ಮಾಣಕ್ಕೆ 12 ಕೋಟಿ ರೂ.

ರಾಮದುರ್ಗ, ಹೊನ್ನಾಳಿ, ಗದಗದಲ್ಲಿ ನೂತನ ಬಸ್ ನಿಲ್ದಾಣ

ತರೀಕೆರೆಯಲ್ಲಿ ಬಸ್ ಡಿಪೋ ನಿರ್ಮಾಣ

1 month agoMarch 6, 2026 11:07 am

ಹುಬ್ಬಳ್ಳಿ, ಕಲಬುರಗಿಯಲ್ಲಿ ಹಜ್‌ ಭವನ

ಹಜ್ ಯಾತ್ರಿಕರ ಅನುಕೂಲಕ್ಕಾಗಿ ಹುಬ್ಬಳ್ಳಿ ಮತ್ತು ಕಲ್ಬುರ್ಗಿಯಲ್ಲಿ ಹಜ್ ಭವನ ನಿರ್ಮಾಣ ಮಾಡಲಾಗುವುದು

1 month agoMarch 6, 2026 11:05 am

1 ರೂಪಾಯಿ ಬಂದಿದ್ದು ಎಲ್ಲಿ?

ರಾಜ್ಯ ತೆರಿಗೆಯೇತರ ರಾಜಸ್ವದಿಂದ – 4 ಪೈಸೆ
ರಾಜ್ಯ ತೆರಿಗೆ ಆದಾಯದಿಂದ – 49 ಪೈಸೆ.
ಬಂಡವಾಳ ಜಮೆ ಮತ್ತು ಸಾಲಗಳು- 29 ಪೈಸೆ
ಕೇಂದ್ರದ ತೆರಿಗೆ ಪಾಲಿನಿಂದ – 14 ಪೈಸೆ.
ಕೇಂದ್ರ ಸರ್ಕಾರದ ಸಹಾಯಾನುದಾನ – 4 ಪೈಸೆ

1 month agoMarch 6, 2026 11:02 am

1 ರೂಪಾಯಿ ಎಲ್ಲಿ ಹೋಗುತ್ತೆ?

ಸಾಲ ಮರುಪಾವತಿ – 20 ಪೈಸೆ
ಇತರ ಸಾಮಾನ್ಯ ಸೇವೆ – 18 ಪೈಸೆ.
ಸಮಾಜ ಕಲ್ಯಾಣ – 15 ಪೈಸೆ
ಇತರೆ ಆರ್ಥಿಕ ಸೇವೆ – 14 ಪೈಸೆ
ಕೃಷಿ, ನೀರಾವರಿ, ಗ್ರಾಮೀಣಾಭಿವೃದ್ಧಿ- 13 ಪೈಸೆ.
ಶಿಕ್ಷಣ – 10 ಪೈಸೆ
ಆರೋಗ್ಯ – 4 ಪೈಸೆ.
ನೀರು ಪೂರೈಕೆ ಮತ್ತು ನೈರ್ಮಲ್ಯ – 3 ಪೈಸೆ
ಇತರೆ ಸಾಮಾಜಿಕ ಸೇವೆಗಳು – 3 ಪೈಸೆ

1 month agoMarch 6, 2026 11:01 am

16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿಷೇಧ

ಹೆಚ್ಚುತ್ತಿರುವ ಮೊಬೈಲ್ ಬಳಕೆ ಮಕ್ಕಳ ಮೇಲೆ ಪರಿಣಾಮ ಬೀರುತ್ತಿರುವ ಹಿನ್ನಲೆಯಲ್ಲಿ ಹಾಗೂ ಅಡ್ಡಪರಿಣಾಮ ತಡೆಗಟ್ಟುವ ಹಿನ್ನೆಲೆಯಲ್ಲಿ 16 ವಯಸ್ಸಿನ ಮಕ್ಕಳಿಗೆ ಸಾಮಾಜಿಕ ಜಾಲತಾಣದ ಬಳಕೆಯನ್ನು ನಿಷೇಧ. ವಿದ್ಯಾರ್ಥಿಗಳಲ್ಲಿ ಒತ್ತಡ ನಿವಾರಿಸಿ ಮಾನಸಿಕ ಆರೋಗ್ಯವನ್ನು ಸುಧಾರಿಸಲು 204 ಬಿ ಆರ್ ಸಿ ಕೇಂದ್ರಗಳಲ್ಲಿ ಓರ್ವ ಅರ್ಹ ಮಾನಸಿಕ ಆರೋಗ್ಯ ಸಲಹೆಗಾರ ನೇಮಕ ಬಜೆಟ್‌ನಲ್ಲಿ ಘೋಷಣೆ

1 month agoMarch 6, 2026 10:44 am

ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರಿಗಾಗಿ ವೃದ್ಧಾಶ್ರಮ

ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರಿಗಾಗಿ 100 ಸಂಖ್ಯಾ ಬಲದ ಎರಡು ಮಹಿಳಾ ವೃದ್ದಾಶ್ರಮ ಪ್ರಾರಂಭ. ಅಲ್ಪ ಸಂಖ್ಯಾತ ವಿದ್ಯಾರ್ಥಿಗಳಿಗೆ 5000 ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಖರೀದಿಗೆ ತಲಾ 50 ಸಾವಿರ ರೂ. ನೀಡಲು ನಿರ್ಧಾರ

1 month agoMarch 6, 2026 10:38 am

ಗ್ಯಾರಂಟಿ ಯೋಜನೆಗೆ 1,21,598 ಕೋಟಿರೂ.

ಸರ್ಕಾರದ ಗ್ಯಾರಂಟಿ ಯೋಜನೆ ಜಾರಿಯಾದಾಗಿನಿಂದ ಫೆಬ್ರವರಿ 2026 ರ ವರೆಗೆ 1,21,598 ಕೋಟಿ ವ್ಯಯ

1 month agoMarch 6, 2026 10:33 am

56,432 ಹುದ್ದೆಗಳ ಭರ್ತಿಗೆ ಕ್ರಮ

ಯುವಜನತೆ ಪ್ರತಿಭಟನೆಗೆ ಸ್ಪಂದಿಸಿ ಒಟ್ಟು 56,432 ಹುದ್ದೆ ಭರ್ತಿಗೆ ಬಜೆಟ್‌ನಲ್ಲಿ ಪ್ರಸ್ತಾಪ

1 month agoMarch 6, 2026 10:28 am

800 ಕರ್ನಾಟಕ ಪಬ್ಲಿಕ್‌ ಶಾಲೆ ಘೋಷಣೆ

ರಾಜ್ಯದಲ್ಲಿ ಒಟ್ಟು 800 ಕರ್ನಾಟಕ ಪಬ್ಲಿಕ್‌ ಶಾಲೆ ಘೋಷಣೆ ಮಾಡಿದ್ದು ಇದಕ್ಕೆ 2,900 ಕೋಟಿ ರೂ. ಮೀಸಲಿಡಲಾಗಿದೆ

1 month agoMarch 6, 2026 10:22 am

ಬಜೆಟ್‌ ಮಂಡನೆ ಆರಂಭ

ಇದು ಜನರ ನಿರೀಕ್ಷೆಯನ್ನು ನನಸು ಮಾಡುವ ಬಜೆಟ್‌ – ಸರ್ವರಿಗೂ ಅನ್ವಯಿಸುವ ಬಜೆಟ್‌: ಸಿದ್ದರಾಮಯ್ಯ

1 month agoMarch 6, 2026 10:05 am

ಬಸ್ ನಿಲ್ದಾಣಗಳಲ್ಲಿ ಬಜೆಟ್ ವೀಕ್ಷಣೆ

ರಾಜ್ಯದ ಆಯ್ದ 230 ಬಸ್ ನಿಲ್ದಾಣಗಳಲ್ಲಿ ವಾರ್ತಾ& ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದಲ್ಲಿ ಡಿಜಿಟಲ್ ಡಿಸ್ಪ್ಲೇ ಪರದೆಗಳ ಮೂಲಕ ಬಜೆಟ್ ನೇರ‌ಪ್ರಸಾರ. ಬೆಂಗಳೂರಿನ 6 ಕೆಎಸ್‌ಆರ್‌ಟಿಸಿ ನಿಲ್ದಾಣಗಳಲ್ಲಿ ಬಜೆಟ್ ವೀಕ್ಷಣೆಗೆ ತಯಾರಿ

1 month agoMarch 6, 2026 10:01 am

ಸಿಎಂಗೆ ಇರುವ ಸವಾಲುಗಳೇನು?

ಗ್ಯಾರಂಟಿಗಳನ್ನು ಮುಂದುವರೆಸಿಕೊಂಡು ಹೋಗಲು ಅಗತ್ಯ ಅನುದಾನ ನೀಡಬೇಕು
ಗ್ಯಾರಂಟಿಗಳ ಜತೆಗೆ ಅಭಿವೃದ್ಧಿ ಕಾಮಗಾರಿಗಳಿಗೂ ಹಣ ಮೀಸಲಿಡಬೇಕು
ಬಾಕಿ ಕಾಮಗಾರಿಗಳಿಗೆ ಹಣ ಇಡುವ, ಮೂಲಸೌಕರ್ಯ ಅಭಿವೃದ್ಧಿಗೂ ಹೆಚ್ಚಿನ ಒತ್ತು ಕೊಡಬೇಕು
ಸಾಲದ ಪ್ರಮಾಣ ಕುಗ್ಗಿಸಲೇ ಬೇಕಾದ, ವಿತ್ತೀಯ ಶಿಸ್ತು ಕಾಪಾಡಿಕೊಳ್ಳಲು ಹೆಣಗಾಟ

1 month agoMarch 6, 2026 9:56 am

ಕ್ಯಾಬಿನೆಟ್‌ ಒಪ್ಪಿಗೆ

ಸಚಿವ ಸಂಪುಟ ಸಭೆಯಲ್ಲಿ ಬಜೆಟ್‌ಗೆ ಅನುಮೋದನೆ ಪಡೆದ ಸಿಎಂ ಸಿದ್ದರಾಮಯ್ಯ

1 month agoMarch 6, 2026 9:49 am

ರಾಜ್ಯದ ಒಟ್ಟು ಸಾಲ ಎಷ್ಟಿದೆ?

2024-25 ರಲ್ಲಿ- 6,65,095 ಕೋಟಿ ರೂ. 2025-26ರಲ್ಲಿ – 7,64,655 ಕೋಟಿ ರೂ. ಸಾಲ ಮಾಡಿರುವ ಸರ್ಕಾರ

1 month agoMarch 6, 2026 9:47 am

ದಾಖಲೆಯ 17ನೇ ಬಜೆಟ್ ಮಂಡನೆ

2025-26 ರ ಬಜೆಟ್ ಗಾತ್ರ – 4,09,549 ಕೋಟಿ ರೂ. ಈ ಬಾರಿ 4.25 ಲಕ್ಷ ಕೋಟಿ ರೂ. ದಾಟುವ ನಿರೀಕ್ಷೆ

Share This Article