ಕಿಕ್‍ ಪ್ರಿಯರಿಗೆ ಶಾಕ್- ಅಬಕಾರಿಗೆ ಬಿಗ್‌ ಟಾರ್ಗೆಟ್‌: ಹಿಂದಿನ ಬಜೆಟ್‌ನಲ್ಲಿ ಗುರಿ ಎಷ್ಟಿತ್ತು?

By
1 Min Read

ಬೆಂಗಳೂರು: ಮದ್ಯದ ದರ ಏರಿಕೆಯ ಸುಳಿವನ್ನು ಸಿಎಂ ಸಿದ್ದರಾಮಯ್ಯ (CM Siddaramaiah) ಬಜೆಟ್‌ನಲ್ಲಿ (Budget) ನೀಡಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಅಬಕಾರಿ ಇಲಾಖೆಗೆ (Excise Department) ಬರೋಬ್ಬರಿ 38,525 ಕೋಟಿ ರೂ.ಗಳ ತೆರಿಗೆ ಸಂಗ್ರಹದ ಗುರಿಯನ್ನು ನೀಡಲಾಗಿದೆ.

ಬೊಮ್ಮಾಯಿ (Basavaraj Bommai) ಕಳೆದ ವರ್ಷದ ಫೆಬ್ರವರಿಯಲ್ಲಿ ಮಂಡಿಸಿದ 2023-24ರ ಸಾಲಿನ ಬಜೆಟ್‌ನಲ್ಲಿ ಅಬಕಾರಿ ಇಲಾಖೆಗೆ 35,000 ಕೋಟಿ ರೂ. ತೆರಿಗೆ ಸಂಗ್ರಹದ ಗುರಿಯನ್ನು ನೀಡಲಾಗಿತ್ತು. ಇದನ್ನೂ ಓದಿ: ಹೊಸ ವರ್ಷಕ್ಕೆ ಎಣ್ಣೆ ಶಾಕ್ – ಜನವರಿಯಿಂದ ಮದ್ಯದ ಬೆಲೆಯಲ್ಲಿ ಭಾರೀ ಏರಿಕೆ

ಸಿದ್ದರಾಮಯ್ಯ ಕಳೆದ ಜುಲೈನಲ್ಲಿ ಮಂಡಿಸಿದ ಪೂರ್ಣ ಪ್ರಮಾಣದ ಬಜೆಟ್‌ನಲ್ಲಿ 36,000 ಕೋಟಿ ರೂ. ತೆರಿಗೆ ಸಂಗ್ರಹದ ಗುರಿಯನ್ನು ನೀಡಿದ್ದರು. ಈ ಬಜೆಟ್‌ಗೆ ಹೋಲಿಸಿದರೆ 2024-25ರ ಸಾಲಿನ ಹಣಕಾಸು ವರ್ಷದಲ್ಲಿ ಅಬಕಾರಿ ಇಲಾಖೆಗೆ ತೆರಿಗೆ ಸಂಗ್ರಹ ಗುರಿ 2,525 ಕೋಟಿ ರೂ. ಏರಿಕೆಯಾಗಿದೆ.

ಜುಲೈ ಬಜೆಟ್‌ನಲ್ಲಿ ರಾಜ್ಯದ ಅಬಕಾರಿ ತೆರಿಗೆಯಲ್ಲಿ 20%ರಷ್ಟು ಹೆಚ್ಚಳ ಮಾಡಲಾಗಿತ್ತು. ಬಿಯರ್ ಮೇಲಿನ ಅಬಕಾರಿ ತೆರಿಗೆ 10%ರಷ್ಟು ಹೆಚ್ಚಳ ಮಾಡಲಾಗಿತ್ತು. ಈಗ 38,525 ಕೋಟಿ ರೂ. ಸಂಗ್ರಹದ ಬಿಗ್‌ ಟಾರ್ಗೆಟ್‌ ನೀಡಿದ ಪರಿಣಾಮ ಮದ್ಯದ ದರ ಏರಿಕೆಯಾಗುವುದು ಖಚಿತ. ಇದನ್ನೂ ಓದಿ: ಕಿಕ್‍ಪ್ರಿಯರಿಗೆ ಶಾಕ್ ಕೊಟ್ಟ ಸರ್ಕಾರ- 170 ಇದ್ದ ಕಿಂಗ್‍ಫಿಷರ್ ಬೆಲೆ 190 ರೂ.ಗೆ ಏರಿಕೆ

ಬಜೆಟ್‌ನಲ್ಲಿ ಏನಿದೆ?
ಮದ್ಯದ ಘೋಷಿತ ಸ್ಲಾಬ್‌ಗಳನ್ನು ತರ್ಕಬದ್ಧಗೊಳಿಸುವ ಮೂಲಕ ನೆರೆ ರಾಜ್ಯಗಳ ಮದ್ಯದ ಬೆಲೆಗಳಿಗೆ ಅನುಗುಣವಾಗಿ IML ಹಾಗೂ ಬಿಯರ್‌ನ ಸ್ಲಾಬ್‌ಗಳನ್ನು ಪರಿಷ್ಕರಿಸಲಾಗುವುದು.  ಇದನ್ನೂ ಓದಿ: ಬೆಂಗಳೂರು BIECಯಿಂದ ತುಮಕೂರಿಗೆ, ಏರ್‌ಪೋರ್ಟಿಂದ ದೇವನಹಳ್ಳಿಗೆ ಮೆಟ್ರೋ ರೈಲು!

ಇಲಾಖೆಯ ಎಲ್ಲಾ ಸೇವೆಗಳನ್ನು ಡಿಜಿಟಲೀಕರಣಗೊಳಿಸಲಾಗುವುದು. ಇಲಾಖೆಯು ಒದಗಿಸುವ ವಿವಿಧ ಸೇವೆಗಳಿಗೆ ಸಮಯದ ಮಿತಿಯನ್ನು ನಿಗದಿಪಡಿಸಲಾಗುವುದು ಸ್ವಯಂಚಾಲಿತ ಅನುಮೋದನೆಗೂ ಅವಕಾಶ ಕಲ್ಪಿಸಲಾಗುವುದು. 2023-24ನೇ ಸಾಲಿನ ಜನವರಿ ತಿಂಗಳ ಅಂತ್ಯದವರೆಗೆ ಅಬಕಾರಿ ತೆರಿಗೆಯಿಂದ 28,181 ಕೋಟಿ ರೂ.ಗಳು ಸ್ವೀಕೃತವಾಗಿರುತ್ತದೆ.

 

Share This Article