ಬೆಂಗಳೂರು: ರಾಜ್ಯ ಬಜೆಟ್‌ನಲ್ಲಿ ಸಾರಿಗೆ ಇಲಾಖೆಗೆ ಭಾರೀ ಅನುದಾನ ಹಾಗೂ ಹಲವು ಪ್ರಮುಖ ಯೋಜನೆಗಳನ್ನು ಘೋಷಿಸಲಾಗಿದೆ. ಈ ಬಗ್ಗೆ ಕೆಳಗೆ ಮಾಹಿತಿ ನೀಡಲಾಗಿದೆ.
– ಶಕ್ತಿ ಯೋಜನೆಗೆ 5,300 ಕೋಟಿ ರೂ.
– ಸಾರಿಗೆ ಸಿಬ್ಬಂದಿ ವೇತನ ಬಾಕಿ ಪಾವತಿಗೆ 1,271 ಕೋಟಿ ರೂ.
– 1 ಸಾವಿರ ಡೀಸೆಲ್ ಬಸ್ ಖರೀದಿ
– ಕರ್ನಾಟಕ ಎಲೆಕ್ಟ್ರಿಕ್ ಬಸ್ ಯೋಜನೆಗೆ 2,000 ಕೋಟಿ ರೂ.
– 4 ಸಾವಿರ ವಿದ್ಯುತ್ ಚಾಲಿತ ಬಸ್
– ಬಿಎಂಟಿಸಿಯ 32, ಸಾರಿಗೆ ನಿಗಮಗಳ 62 ಡಿಪೋ ಅಭಿವೃದ್ಧಿ
– ಅಪಘಾತ ಸ್ಥಳ ಗುರುತಿಸಲು ಸಾಫ್ಟ್‌ವೇರ್ ಮತ್ತು ಡ್ಯಾಶ್ ಬೋರ್ಡ್ – 5 ಕೋಟಿ ರೂ.
– ರಾಜ್ಯಸ 25 ಆರ್ ಟಿ ಒ ಕಚೇರಿಗಳಲ್ಲಿ ರೂಫ್ ಟಾಪ್ ಸೋಲಾರ್ ಅಳವಡಿಕೆಗೆ 10 ಕೋಟಿ ರೂ.
– ತುಮಕೂರಿನಲ್ಲಿ ಸೀಜಿಂಗ್ ಯಾರ್ಡ್ ನಿರ್ಮಾಣಕ್ಕೆ 5 ಕೋಟಿ ರೂ.
– ಚಿಕ್ಕಮಗಳೂರು, ತುಮಕೂರಿನಲ್ಲಿ ಸ್ವಯಂಚಾಲಿತ ಪರೀಕ್ಷಾ ಪಥ ನಿರ್ಮಾಣಕ್ಕೆ 12 ಕೋಟಿ ರೂ.
– ರಾಮದುರ್ಗ, ಹೊನ್ನಾಳಿ, ಗದಗದಲ್ಲಿ ನೂತನ ಬಸ್ ನಿಲ್ದಾಣ
– ತರೀಕೆರೆಯಲ್ಲಿ ಬಸ್ ಡಿಪೋ ನಿರ್ಮಾಣ

