Karnataka Budget 2026: ಒಂದು ರೂಪಾಯಿ ಬಂದಿದ್ದು ಎಲ್ಲಿಂದ? ಹೋಗಿದ್ದೆಲ್ಲಿಗೆ?

1 Min Read

ಬೆಂಗಳೂರು: 2026-27ನೇ ಸಾಲಿನ ಕರ್ನಾಟಕ ಬಜೆಟ್‌ (Karnataka Budget 2026) ಅನ್ನು ಸಿಎಂ ಸಿದ್ದರಾಮಯ್ಯ (Siddaramaiah) ಇಂದು ಮಂಡಿಸಿದರು. 4.49 ಲಕ್ಷ ಕೋಟಿ ಗಾತ್ರದ ಬಜೆಟ್‌ನ ಒಟ್ಟು ಆದಾಯ ಗಳಿಕೆ ಮತ್ತು ವೆಚ್ಚವನ್ನು ರೂಪಾಯಿ ಲೆಕ್ಕದಲ್ಲಿ ಮಾಡಲಾಗಿದೆ. ರಾಜ್ಯ ಸರ್ಕಾರಕ್ಕೆ ಒಂದು ರೂಪಾಯಿ ಬಂದಿದ್ದು ಹೇಗೆ ಮತ್ತು ಹೋಗಿದ್ದು ಎಲ್ಲಿಗೆ ಎಂಬ ಬಗ್ಗೆ ವಿವರ ಇಲ್ಲಿದೆ.

ಸರ್ಕಾರಕ್ಕೆ ಆದಾಯ ಹೇಗೆ ಬರುತ್ತೆ? (ಪೈಸೆಗಳಲ್ಲಿ)
ರಾಜ್ಯ ತೆರಿಗೆಯೇತರ ರಾಜಸ್ವದಿಂದ- 4 ಪೈಸೆ
ರಾಜ್ಯ ತೆರಿಗೆ ಆದಾಯದಿಂದ- 49 ಪೈಸೆ
ಬಂಡವಾಳ ಜಮೆ ಮತ್ತು ಸಾಲಗಳು- 29 ಪೈಸೆ
ಕೇಂದ್ರದ ತೆರಿಗೆ ಪಾಲಿನಿಂದ- 14 ಪೈಸೆ
ಕೇಂದ್ರ ಸರ್ಕಾರದ ಸಹಾಯಾನುದಾನ- 4 ಪೈಸೆ

ಯಾವ ಭಾಗಕ್ಕೆ ಎಷ್ಟು ಹಂಚಿಕೆ?
ಸಾಲ ಮರುಪಾವತಿ- 20 ಪೈಸೆ
ಇತರ ಸಾಮಾನ್ಯ ಸೇವೆ- 18 ಪೈಸೆ
ಸಮಾಜ ಕಲ್ಯಾಣ- 15 ಪೈಸೆ
ಇತರೆ ಆರ್ಥಿಕ ಸೇವೆ- 14 ಪೈಸೆ
ಕೃಷಿ, ನೀರಾವರಿ, ಗ್ರಾಮೀಣಾಭಿವೃದ್ಧಿ- 13 ಪೈಸೆ
ಶಿಕ್ಷಣ- 10 ಪೈಸೆ
ಆರೋಗ್ಯ- 4 ಪೈಸೆ
ನೀರು ಪೂರೈಕೆ ಮತ್ತು ನೈರ್ಮಲ್ಯ- 3 ಪೈಸೆ
ಇತರೆ ಸಾಮಾಜಿಕ ಸೇವೆಗಳು- 3 ಪೈಸೆ

Share This Article