ಸಿಎಎ ಪರ ರಾಜ್ಯ ಬಿಜೆಪಿ ನಾಯಕರಿಂದಲೂ ಮನೆ ಮನೆ ಸಂಪರ್ಕ – ಅಭಿಯಾನಕ್ಕೆ ನಾಳೆ ಚಾಲನೆ

Public TV
2 Min Read

ಬೆಂಗಳೂರು: ಭಾನುವಾರ ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ 2019ರ ಪರ ಮತ್ತು ಕಾಯ್ದೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಬಿಜೆಪಿಯಿಂದ ದೇಶಾದ್ಯಂತ ಮನೆ ಮನೆ ಸಂಪರ್ಕ ಅಭಿಯಾನ ಕೈಗೊಳ್ಳಲಾಗುತ್ತಿದೆ. ರಾಜ್ಯದಲ್ಲೂ ಮನೆ ಮನೆ ಸಂಪರ್ಕ ಕಾರ್ಯಕ್ರಮಕ್ಕೆ ನಾಳೆ ಚಾಲನೆ ಸಿಗಲಿದೆ.

ಬೆಂಗಳೂರಿನ ವಸಂತನಗರದಲ್ಲಿ ಮನೆ ಮನೆ ಸಂಪರ್ಕ ಕಾರ್ಯಕ್ರಮಕ್ಕೆ ಸಿಎಂ ಯಡಿಯೂರಪ್ಪ ರಿಂದ ಚಾಲನೆ ಸಿಗಲಿದೆ. ಹಾಗೆಯೇ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಸಚಿವರು, ಸಂಸದರು, ಶಾಸಕರು ಏಕ ಕಾಲದಲ್ಲಿ ಮನೆ ಮನೆ ಸಂಪರ್ಕ ಅಭಿಯಾನಕ್ಕೆ ಚಾಲನೆ ಕೊಡಲಿದ್ದಾರೆ.

ಯಾರ್ಯಾರು ಎಲ್ಲೆಲ್ಲಿ ಚಾಲನೆ?
ಬೆಂಗಳೂರು ಕೇಂದ್ರ – ಬಿ ಎಸ್ ಯಡಿಯೂರಪ್ಪ
ಹುಬ್ಬಳ್ಳಿ – ಧಾರವಾಡ – ಪ್ರಹ್ಲಾದ ಜೋಶಿ
ಬೆಂಗಳೂರು ಉತ್ತರ- ಡಿ ವಿ ಸದಾನಂದ ಗೌಡ
ಬೆಂಗಳೂರು ದಕ್ಷಿಣ – ಸಿ ಎನ್ ಅಶ್ವಥ್ ನಾರಾಯಣ
ಬಳ್ಳಾರಿ – ಲಕ್ಷ್ಮಣ್ ಸವದಿ

ಗದಗ – ಗೋವಿಂದ ಕಾರಜೋಳ
ಧಾರವಾಡ – ಜಗದೀಶ್ ಶೆಟ್ಟರ್
ಶಿವಮೊಗ್ಗ – ಕೆ ಎಸ್ ಈಶ್ವರಪ್ಪ
ತುಮಕೂರು – ಆರ್ ಅಶೋಕ್
ಮೈಸೂರು – ಅರವಿಂದ್ ಲಿಂಬಾವಳಿ

ಚಿಕ್ಕಮಗಳೂರು – ಸಿ ಟಿ ರವಿ
ಬೆಂಗಳೂರು ಕೇಂದ್ರ – ವಿ. ಸೋಮಣ್ಣ
ಚಿತ್ರದುರ್ಗ – ಶಶಿಕಲಾ ಜೊಲ್ಲೆ
ಕೊಪ್ಪಳ – ಸಿ ಸಿ ಪಾಟೀಲ್
ದಕ್ಷಿಣ ಕನ್ನಡ – ಕೋಟಾ ಶ್ರೀನಿವಾಸ ಪೂಜಾರಿ

ಚಿಕ್ಕಬಳ್ಳಾಪುರ – ಶೋಭಾ ಕರಂದ್ಲಾಜೆ
ಹಾವೇರಿ – ಶಿವಕುಮಾರ್ ಉದಾಸಿ
ಬಾಗಲಕೋಟೆ – ಪಿಸಿ ಗದ್ದಿಗೌಡರ್
ವಿಜಯಪುರ – ರಮೇಶ್ ಜಿಗಜಿಣಗಿ
ಬೀದರ್ – ಭಗವಂತ ಖೂಬಾ
ಚಿಕ್ಕೋಡಿ – ಮಹಾಂತೇಶ್ ಕವಟಗಿ ಮಠ

ಹೇಗೆ ನಡೆಯಲಿದೆ ಮನೆ ಮನೆ ಸಂಪರ್ಕ ಅಭಿಯಾನ?
ರಾಜ್ಯದ 58 ಸಾವಿರ ಬೂತ್‍ಗಳಲ್ಲೂ ಅಭಿಯಾನ ಕಾರ್ಯ ನಡೆಸಲಾಗುತ್ತದೆ. ರಾಜ್ಯದ 58 ಸಾವಿರ ಬೂತ್‍ಗಳಲ್ಲಿ ಸುಮಾರು 30 ಲಕ್ಷ ಮನೆಗಳಿದ್ದು, ಆ ಎಲ್ಲ ಮನೆಗಳನ್ನು ಸಂಪರ್ಕ ಮಾಡಲಾಗುತ್ತದೆ. ಸರಿ ಸುಮಾರು ಒಂದು ಕೋಟಿ ಜನರಿಗೆ ಸಿಎಎ ಕುರಿತು ಮಾಹಿತಿ ನೀಡಿ, ಜನಜಾಗೃತಿ ಮಾಡಲಾಗುತ್ತದೆ. ಇದಕ್ಕಾಗಿ ಪ್ರತಿ ಬೂತ್‍ನಲ್ಲಿ 5 ಜನರ ತಂಡ, ಪ್ರತಿ ಶಕ್ತಿ ಕೇಂದ್ರ, ಪ್ರತಿ ಮಂಡಲ, ಪ್ರತಿ ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ತಲಾ 5 ಜನರ ತಂಡ ರಚನೆ ಮಾಡಲಾಗಿದೆ. ಈ ಅಭಿಯಾನದಲ್ಲಿ ಬಿಜೆಪಿ ಪಕ್ಷದ 25 ಸಾವಿರ ಜನ ಕಾರ್ಯಕರ್ತರು ಸಕ್ರಿಯವಾಗಿ ತೊಡಗಿಸಿಕೊಳ್ಳಲಿದ್ದಾರೆ. ಮನೆ ಮನೆ ಸಂಪರ್ಕದ ಜತೆ ಜತೆಗೆ 300 ಮಂಡಲ ಕೇಂದ್ರದಲ್ಲಿ ಜಾಗೃತಿ ಮಾತ್ತು ಮಾಹಿತಿ ಸಭೆ ಮತ್ತು ಸಂವಾದ ಕಾರ್ಯಕ್ರಮ ನಡೆಸಲಾಗುತ್ತದೆ. ರಾಜ್ಯದ 30 ಜಿಲ್ಲೆಗಳಲ್ಲೂ ಜಿಲ್ಲಾಮಟ್ಟದ ರ‍್ಯಾಲಿ ಆಯೋಜಿಸಲಾಗಿದೆ. ಪ್ರತಿ ರ‍್ಯಾಲಿಯಲ್ಲಿ 5 ರಿಂದ 10 ಸಾವಿರ ಜನ ಸೇರಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *