ಇಂದಿನಿಂದ ಮಳೆಗಾಲದ ಅಧಿವೇಶನ ಪ್ರಾರಂಭ

Public TV
1 Min Read

ಬೆಂಗಳೂರು: ಇಂದಿನಿಂದ ವಿಧಾನಮಂಡಲ ಅಧಿವೇಶನ ಪ್ರಾರಂಭವಾಗಲಿದೆ. ಸರ್ಕಾರ ವರ್ಸಸ್ ವಿಪಕ್ಷಗಳ ನಡುವೆ ಮಹಾಕದನಕ್ಕೆ ಅಧಿವೇಶನ ವೇದಿಕೆಯಾಗುವ ಸಾಧ್ಯತೆ ಇದೆ.

ಇಂದಿನಿಂದ ಆಗಸ್ಟ್ 22 ರವರೆಗೂ ಅಧಿವೇಶನ ನಡೆಯಲಿದೆ. ವಿಪಕ್ಷಗಳಿಗೆ ಸರ್ಕಾರವನ್ನ ಕಟ್ಟಿ ಹಾಕಲು ಸಾಲು ಸಾಲು ಅಸ್ತ್ರಗಳಿವೆ. ಸರ್ಕಾರದ ವೈಫಲ್ಯಗಳನ್ನ ಬಿಚ್ಚಿಟ್ಟು ಸರ್ಕಾರವನ್ನ ಎಕ್ಸ್‌ಪೋಸ್ ಮಾಡಲು ವಿಪಕ್ಷಗಳ ಸಿದ್ಧತೆ ನಡೆಸಿವೆ. ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ V/s ಆರ್‌.ಅಶೋಕ್‌ ಮಧ್ಯೆ ಟ್ವೀಟ್ ವಾರ್‌ – ವೈಯಕ್ತಿಕ ಮಟ್ಟಕ್ಕೆ ತಿರುಗಿದ ಫೈಟ್‌

ಭಾನುವಾರ ಬಿಜೆಪಿ-ಜೆಡಿಎಸ್ ಪ್ರಮುಖ ನಾಯಕರಿಂದ ಸದನದಲ್ಲಿ ಹೋರಾಟದ ಬಗ್ಗೆ ಚರ್ಚೆಯ ವಿಷಯಗಳ ಪ್ರಸ್ತಾಪವಾಗಿದೆ. ಸರ್ಕಾರದ ವಿರುದ್ಧ ಒಟ್ಟಾಗಿ ಹೋರಾಟ ನಡೆಸಲು ಎರಡು ಪಕ್ಷಗಳಿಂದ ಚರ್ಚೆ ನಡೆದಿದೆ ಎನ್ನಲಾಗಿದೆ. ವಿಪಕ್ಷಗಳ ಅಸ್ತ್ರಕ್ಕೆ ಪ್ರತಿ ಅಸ್ತ್ರ ಹೂಡಲು ಸರ್ಕಾರದಿಂದಲೂ ಸಿದ್ಧತೆ ನಡೆದಿದೆ.

ವಿಪಕ್ಷಗಳಿಗೆ ಅಸ್ತ್ರ?
* ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣದಲ್ಲಿ 11 ಅಮಾಯಕ ಜೀವಗಳ ಸಾವು ವಿಷಯ.
* ರಾಜ್ಯದಲ್ಲಿ ರಸಗೊಬ್ಬರದ ಕೊರತೆಯಿಂದ ರೈತರಿಗೆ ಸಮಸ್ಯೆ ವಿಷಯ.
* ಧರ್ಮಸ್ಥಳದ ಕೊಲೆಗಳ ಪ್ರಕರಣ.
* SCSP-TSP ಹಣವನ್ನ ಗ್ಯಾರಂಟಿ ಬಳಕೆ ಮಾಡಿಕೊಂಡಿರೋ ವಿಷಯ ಪ್ರಸ್ತಾಪ.
* ವಿಪಕ್ಷಗಳ ಶಾಸಕರಿಗೆ ಅನುದಾನ ಕೊಡದೇ ಕೇವಲ ಆಡಳಿತ ಪಕ್ಷದ ಶಾಸಕರಿಗೆ ಮಾತ್ರ ಅನುದಾನ ಕೊಟ್ಟಿರೋ ವಿಚಾರ.
* ಮೈಸೂರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ ಪತ್ತೆ, ಮಂಗಳೂರು ದ್ವೇಷದ ಕೊಲೆ ಸೇರಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರೋ ವಿಚಾರ.
* ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿಯ ಕಿತ್ತಾಟದ ವಿಷಯ.
* ರಾಹುಲ್ ಗಾಂಧಿಯ ಮತಗಳ್ಳತನ ಆರೋಪಕ್ಕೆ ಸಚಿವ ರಾಜಣ್ಣ, ಇಬ್ರಾಹಿಂ ಮಾತುಗಳನ್ನ ಪ್ರಸ್ತಾಪ ಮಾಡಿ ಸರ್ಕಾರವನ್ನ ಕಟ್ಟಿ ಹಾಕೋ ಪ್ಲ್ಯಾನ್.

Share This Article