ಎಚ್‌ಡಿಕೆ, ಬಿಎಸ್‌ವೈ ಸಿಎಂ ಆಗಿ ಸಿದ್ದರಾಮಯ್ಯರ ಮಾತು ಸುಳ್ಳಾಗಿಸಿದ್ರು: ಬೊಮ್ಮಾಯಿ

Public TV
1 Min Read

ಬೆಂಗಳೂರು:  ಎಚ್‌.ಡಿ ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಮತ್ತೆ ಸಿಎಂ ಆಗಿ ಸಿದ್ದರಾಮಯ್ಯರ ಮಾತು ಸುಳ್ಳಾಗಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾಸಭೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ವಿಧಾನಸಭೆಯಲ್ಲಿ ಮಾತನಾಡಿದ ಅವರು, ಪಂಚರಾಜ್ಯ ಚುನಾವಣೆಯಲ್ಲಿ ನಾವು ನಾಲ್ಕು ರಾಜ್ಯಗಳನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಗೆದ್ದಿದ್ದೇವೆ. ಈಗ ಮೋದಿ ಪ್ಯಾನ್ ಇಂಡಿಯಾ ನಾಯಕ. ಸಿದ್ದರಾಮಯ್ಯ ನಮ್ಮಪ್ಪನಾಣೆ ಕುಮಾರಸ್ವಾಮಿ, ಬಿಎಸ್‍ವೈ ಸಿಎಂ ಆಗಲ್ಲ ಎಂದಿದ್ರು. ಆದ್ರೆ ಇಬ್ಬರೂ ಮುಖ್ಯಮಂತ್ರಿಗಳಾದ್ರು. ಮತ್ತೆ ನಾವೇ ಅಧಿಕಾರಕ್ಕೆ ಬರ್ತೇವೆ ಅಂದಿದ್ರು. ಆದರೆ ಅಧಿಕಾರಕ್ಕೆ ಬರೋಕೆ ಸಾಧ್ಯವಾಯ್ತ? ಪಂಚರಾಜ್ಯ ಚುನಾವಣೆಯಲ್ಲಿ ನಾವು ಐದರಲ್ಲಿ ನಾಲ್ಕು ರಾಜ್ಯಗಳನ್ನು ಗೆದ್ದಿದ್ದೇವೆ. ಆಡಳಿತ ವಿರೋಧಿ ಅಲೆ ಎಲ್ಲ ಕಡೆಯೂ ಇರುತ್ತೆ. ಆದರೆ ಅಧಿಕಾರದಲ್ಲಿದ್ದು ಗೆಲ್ಲೋದೇ ಮುಖ್ಯ. ಪಂಜಾಬ್‍ನಲ್ಲಿ ಇದ್ದೂ ಯಾಕೆ ಸೋತ್ರಿ? ಜನರ ನಾಡಿಮಿಡಿತ ಚುನಾವಣೆಯಲ್ಲಿ ಗೊತ್ತಾಗುತ್ತೆ ಇದನ್ನೇ ನಮ್ಮ ನಾಯಕರು ಹೇಳಿದ್ದು. ನಮ್ಮ ಶ್ರಮದ ಮೇಲೆ ವಿಶ್ವಾಸವಿದೆ. ಮೋದಿಯವರ ನಾಯಕತ್ವಕ್ಕೆ ಒಪ್ಪಿಗೆ ಮುದ್ರೆ ಸಿಕ್ಕಿದೆ ಎಂದರು. ಇದನ್ನೂ ಓದಿ: ವಿಧಾನಸಭೆ ಅಧಿವೇಶನದ ವೇಳೆ ಏಪ್ರಿಲ್ ಜ್ವರದ ಕುತೂಹಲ!

ಮಣಿಪುರ, ಉತ್ತರಖಂಡಕ್ಕೆ ಒಂದಕ್ಕೊಂದು ಸಂಬಂಧವಿಲ್ಲ ಆದರೆ ಎಲ್ಲಾ ಕಡೆ ಜನರ ಒಪ್ಪಿಗೆ ಮುದ್ರೆ ಸಿಕ್ಕಿದೆ. ಇದೀಗ ಕರ್ನಾಟಕಕ್ಕೆ ಮೋದಿ, ಬಿಎಸ್‍ವೈ ಬಲವಿದೆ. ಜನರ ಆಶೀರ್ವಾದವೂ ನಮಗಿದೆ. 2023ಕ್ಕೆ ಇಲ್ಲೂ ಕೂಡ ನಾವು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: Exclusive -ಕರ್ನಾಟಕದಲ್ಲಿ ಅವಧಿಗೂ ಮುನ್ನವೇ ಚುನಾವಣೆ?

ಯಡಿಯೂರಪ್ಪ ಅಧಿಕಾರದಲ್ಲಿರಲಿ ಇಲ್ಲದಿರಲಿ. ಅವರು ಜನರ ಮನಸ್ಸಿನಲ್ಲಿ ಉಳಿದು ಬಿಟ್ಟಿದ್ದಾರೆ. ಯಾವಾಗಲೂ ಅವರು ನಮಗೆಲ್ಲರಿಗೂ ಆದರ್ಶವಾಗಿರುತ್ತಾರೆ. ಸಾಕಷ್ಟು ಬಾರಿ ಸಂಕಷ್ಟದ ಸ್ಥಿತಿಯಲ್ಲೂ ನಾನು ಅವರನ್ನು ನೋಡಿದ್ದೇನೆ. ಮನಸ್ಸಲ್ಲಿ ಏನೇ ನೋವಿದ್ದರು ಸಮಚಿತ್ತದಿಂದ ಇರುತ್ತಾರೆ. ರಾಜಕಾರಣಿಗಳು ಇರೋದೇ ರಾಜಕಾರಣ ಮಾಡೋಕೆ. ಜನ ಎಲ್ಲ ಪಕ್ಷಗಳನ್ನೂ ನೋಡ್ತಿದ್ದಾರೆ. ಸಿದ್ರಾಮಣ್ಣನವರು ಹೋರಾಟದಿಂದಲೇ ಬಂದವರು ನಾನು ಅವರ ಜೊತೆಯೂ ಇದ್ದವನು. ಸಿದ್ರಾಮಣ್ಣಗೆ ಸತ್ಯ ಗೊತ್ತಿದ್ರೂ ಜೋರಾಗಿ ಹೇಳಿದ್ರೆ ಜನ ನಂಬುತ್ತಾರೆ ಅಂದುಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *