ದರ್ಗಾದಲ್ಲಿ ಗಳಗಳನೆ ಅತ್ತ ರಮೇಶ್ ಕುಮಾರ್

Public TV
1 Min Read

ಕೋಲಾರ: ಮಾಜಿ ಸ್ಪೀಕರ್ ರಮೇಶ್ ಕುಮಾರ್ (Ramesh Kumar) ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮುಸ್ಲಿಂ ಮುಖಂಡನ ಆರೋಗ್ಯ ವಿಚಾರಿಸುವ ವೇಳೆ ಗಳಗಳನೇ ಕಣ್ಣೀರು ಹಾಕಿರುವ ವೀಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

ಇದೇ ತಿಂಗಳ 18ರಂದು ಕೋಲಾರ (Kolar) ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಅಡ್ಡಗಲ್‌ನಲ್ಲಿ ಈ ಘಟನೆ ನಡೆದಿದೆ. ನಾಮಪತ್ರ ಸಲ್ಲಿಕೆಗೂ ಮುನ್ನ ಕಾಂಗ್ರೆಸ್‌ ಮುಖಂಡ ರಮೇಶ್ ಕುಮಾರ್ ಸ್ವಗ್ರಾಮ ಅಡ್ಡಗಲ್‌ನಲ್ಲಿರುವ ಮಸೀದಿಗೆ (Mosque) ಭೇಟಿ ನೀಡಿದ್ದರು. ಈ ವೇಳೆ ಮುಸ್ಲಿಂ ಮುಖಂಡ ಎದುರಾಗಿದ್ದಾನೆ. ಆತ ಸ್ಟ್ರೋಕ್‌ನಿಂದಾಗಿ ಅಂಗವಿಕಲನಾಗಿರುವುದನ್ನು ರಮೇಶ್‌ ಕುಮಾರ್‌ ಗಮನಿಸಿದ್ದಾರೆ. ಈ ವೇಳೆ ಆತನ ಪರಿಸ್ಥಿತಿಯನ್ನು ನೋಡಿ ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: ಅವರದ್ದು ಬರೀ ಕುಟುಂಬ ರಾಜಕಾರಣ, ಯಾರು ಪ್ರಶ್ನೆ ಮಾಡಬಾರದು ಅಂದರೆ ಹೇಗೆ: ಎಚ್‌ಡಿಕೆ ವಿರುದ್ಧ ಸುಮಲತಾ ಕಿಡಿ

ರಮೇಶ್ ಕುಮಾರ್ ಕಣ್ಣೀರಿನ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಚುನಾವಣೆ ಹೊತ್ತಿನಲ್ಲಿ ಕಣ್ಣೀರು ಹಾಕಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅನೇಕ ರೀತಿಯಲ್ಲಿ ಟೀಕೆ ಕೇಳಿಬರುತ್ತಿದೆ. ಮೊಸಳೆ ಕಣ್ಣೀರು, ಕಪ್ಪೆ ರಾಯನ ಕಣ್ಣೀರು ಎಂದು ಕಾಮೆಂಟ್‌ ಮಾಡಿರುವ ನೆಟ್ಟಿಗರು ರಮೇಶ್ ಕುಮಾರ್ ಕುರಿತು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯಗೆ ಪುಕ್ಕಲುತನ ಕಾಡ್ತಿರೋದ್ರಿಂದ 18 ವರ್ಷ ತುಂಬದ ಮೊಮ್ಮಗ ಜೊತೆ ಪ್ರಚಾರಕ್ಕೆ ಬರ್ತಿದ್ದಾರೆ – ಸಿಂಹ ಕಿಡಿ

Share This Article