ಮತ್ತೆ ಒಂದಾಯಿತು ‘ಕರ್ಣನ್’ ಜೋಡಿ: ಧನುಷ್ ಚಿತ್ರಕ್ಕೆ ಮಾರಿ ಸೆಲ್ವರಾಜ್ ಡೈರೆಕ್ಟರ್

Public TV
1 Min Read

ರಾಷ್ಟ್ರ ಪ್ರಶಸ್ತಿ ವಿಜೇತ ನಟ ಧನುಷ್ (Dhanush) ಒಂದರ ಮೇಲೊಂದು ಅಪರೂಪದ ಸಿನಿಮಾ ಕೈಗೆತ್ತಿಕೊಳ್ಳುತ್ತಿದ್ದಾರೆ. ವಿಭಿನ್ನ ಪಾತ್ರ, ಹೊಸತನದ ಕಥೆಯ ಜೊತೆಗೆ ಪ್ರತಿಭಾವಂತ ನಿರ್ದೇಶಕರಿಗೆ ಕಾಲ್ ಶೀಟ್ ನೀಡುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ಅವರ ನಟನೆಯ ಚಿತ್ರಗಳು ಬಾಕ್ಸ್ ಆಫೀಸ್ ತುಂಬುತ್ತಿವೆ. ಅಲ್ಲದೇ, ವಿಮರ್ಶೆಕರ ಮೆಚ್ಚುಗೆಯನ್ನೂ ಪಡೆಯುತ್ತಿವೆ.

ಈ ಹಿಂದೆ ಧನುಷ್ ಮತ್ತು ನಿರ್ದೇಶಕ ಮಾರಿ ಸೆಲ್ವರಾಜ್ (Mari Selvaraj) ‘ಕರ್ಣನ್’ (Karnan) ಹೆಸರಿನಲ್ಲಿ ಸಿನಿಮಾ ಮಾಡಿದ್ದರು. ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಅಂದಿನಿಂದಲೇ ಮತ್ತೆ ಈ ಜೋಡಿ ಸಿನಿಮಾ ಮಾಡಬೇಕು ಎನ್ನುವ ಕೂಗು ತಮಿಳು ಚಿತ್ರೋದ್ಯಮದಲ್ಲಿ ಕೇಳಿ ಬಂದಿತ್ತು. ಆದರೆ, ಧನುಷ್ ಬೇರೆ ನಿರ್ದೇಶಕರಿಗೆ ಕಾಲ್ ಶೀಟ್ ನೀಡಿದ್ದರು. ಇದೀಗ ಮತ್ತೆ ಮಾರಿ ಜೊತೆ ಕೆಲಸ ಮಾಡುತ್ತಿರುವುದಾಗಿ ಘೋಷಿಸಿದ್ದಾರೆ. ಇದನ್ನೂ ಓದಿ:ಕಿಚ್ಚ ಸುದೀಪ್‌ಗೆ ಬೆದರಿಕೆ ಪತ್ರ ಪ್ರಕರಣದಲ್ಲಿ ಹೊಸ ತಿರುವು

ಈ ಕುರಿತು ಟ್ವೀಟ್ ಮಾಡಿರುವ ಧನುಷ್, ‘ಹಲವು ಕಾರಣಗಳಿಂದಾಗಿ ಈ ಸಿನಿಮಾ ವಿಶೇಷವಾಗಿದೆ ಮತ್ತು ಪ್ರತಿಷ್ಠೆಯಿಂದ ಕೂಡಿರುತ್ತದೆ. ಓಂ ನಮಃ ಶಿವಾಯ’ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಮಾರಿ ಸೆಲ್ವರಾಜ್ ಜೊತೆ ಇರುವ ಫೋಟೋವನ್ನೂ ಧನುಷ್ ಹಂಚಿಕೊಂಡಿದ್ದಾರೆ. ಇದು ಧನುಷ್ ನಿರ್ಮಾಣದ 15ನೇ ಚಿತ್ರವಾಗಿದ್ದು, ತಮ್ಮದೇ ಬ್ಯಾನರ್ ನಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವುದಾಗಿತೂ ಹಂಚಿಕೊಂಡಿದ್ದಾರೆ.

ಧನುಷ್ ಸಿನಿಮಾಗಳು ಕೇವಲ ಬಾಕ್ಸ್ ಆಫೀಸ್ ಮಾತ್ರ ತುಂಬಿಸುತ್ತಿಲ್ಲ. ಸಮಾಜಕ್ಕೆ ಒಂದೊಳ್ಳೆ ಸಂದೇಶವನ್ನೂ ನೀಡುತ್ತಿವೆ. ಇವರ ಬ್ಯಾನರ್ ನಿಂದ ಬಂದ ಬಹುತೇಕ ಚಿತ್ರಗಳು ಉತ್ತಮ ಕಥೆಯನ್ನೇ ಹೊತ್ತು ತಂದಿವೆ. ಜೊತೆಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನೂ ಪಡೆದಿವೆ.

Share This Article