11.30ಕ್ಕೆ ಸರಿಯಾಗಿ ಎಚ್‍ಡಿಕೆಯನ್ನು ಆಯ್ಕೆ ಮಾಡಿದ್ದು ಯಾಕೆ: ರೇವಣ್ಣ ಹೇಳ್ತಾರೆ ಓದಿ

Public TV
1 Min Read

ಬೆಂಗಳೂರು: ಜೆಡಿಎಸ್‍ನ ಎಲ್ಲ ಸದಸ್ಯರು ಹೆಚ್.ಡಿ.ಕುಮಾರಸ್ವಾಮಿ ಅವರನ್ನು ನಮ್ಮ ಪಕ್ಷದ ಶಾಸಕಾಂಗ ಸಭೆಯ ನಾಯಕರನ್ನಾಗಿ ಆಯ್ಕೆ ಮಾಡಿದ್ದೇವೆ ಎಂದು ಹೆಚ್.ಡಿ ರೇವಣ್ಣ ಹೇಳಿದ್ದಾರೆ.

ಶಾಂಗ್ರಿಲಾ ಹೋಟೆಲ್‍ನಲ್ಲಿ ಜೆಡಿಎಸ್ ಶಾಸಕಾಂಗ ಸಭೆ ಬಳಿಕ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡುವ ವೇಳೆ ಎಚ್‍ಡಿ. ರೇವಣ್ಣ ಇಂದು “11.30ಕ್ಕೆ ಸರಿಯಾಗಿ” ಹೆಚ್ ಡಿ ಕುಮಾರಸ್ವಾಮಿ ಅವರನ್ನು ಜೆಡಿಎಸ್ ಪಕ್ಷದ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ ಅಂತ ಹೇಳಿದ್ರು. ಈ ವೇಳೆ ಅದ್ಯಾಕೆ 11.30ಕ್ಕೆ ಆಯ್ಕೆ ಮಾಡಿದ್ದು ಎಂದು ಪತ್ರಕರ್ತರು ಪ್ರಶ್ನಿಸಿದ್ದಕ್ಕೆ ರೇವಣ್ಣ, ಏಯ್.. ಅದೆಲ್ಲಾ ಗೊತ್ತಲ್ಲ ನಿಮಗೆ. ಈವಾಗ ಎಲ್ಲ ಟೈಂ ನೋಡಿಕೊಂಡು ಕುತ್ಕೊತ್ತಾರ ಎಂದು ಹಾಸ್ಯದ ಧಾಟಿಯಲ್ಲಿ ಉತ್ತರ ನೀಡಿದರು.

ಇದಕ್ಕೂ ಮುನ್ನ, ಒಕ್ಕಲಿಗರ ಸಂಘದ ಅಧ್ಯಕ್ಷ ಬೆಟ್ಟೇಗೌಡರ ನಿವಾಸಕ್ಕೆ ರೇವಣ್ಣ ಭೇಟಿ ನೀಡಿದ್ದರು. ಈ ವೇಳೆ ಅವರು, ಯಾವುದೇ ಹೈಜಾಕ್ ಆಗಲಿ ಏನೇ ಆಗಲಿ, ಹೆಚ್.ಡಿ.ಕುಮಾರಸ್ವಾಮಿ ಹೇಳಿದಂತೆ ಸರ್ಕಾರ ರಚನೆಯಾಗುತ್ತದೆ. ಅವರೇ ಸಿಎಂ ಆಗುವುದು ನಿಶ್ಚಿತ ಎಂದರು.

ಈ ಬಾರಿ ನಮ್ಮ ಪಕ್ಷದಿಂದ ಆಯ್ಕೆಯಾದ 38 ಶಾಸಕರು ಎಲ್ಲಿಯೂ ಹೋಗುವುದಿಲ್ಲ. ನಿಷ್ಠೆಯಿಂದ ಪಕ್ಷದ ಜೊತೆಗಿರುತ್ತಾರೆ. ಕುಮಾರಸ್ವಾಮಿ ಸಿಎಂ ಆಗೋದು ನಿಶ್ಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದೇವೇಗೌಡರು ಈಗಾಗಲೇ ಜೆಡಿಎಸ್ ಶಾಸಕರ ಜವಾಬ್ದಾರಿಯನ್ನು ಹೇಗೆ ನಿರ್ವಹಿಸಬೇಕು ಎಂದು ಶ್ರೀಕಂಠೇಗೌಡರಿಗೆ ನಿರ್ದೇಶನ ನೀಡಿದ್ದಾರೆ. ಮದ್ದೂರು ಶಾಸಕ ಡಿ.ಸಿ.ತಮ್ಮಣ್ಣ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ಕೇಳಿಬಂದಿದೆ.

ಮೇ 18ರಂದು ಎಚ್‍ಡಿ ದೇವೇಗೌಡ 85ನೇ ವರ್ಷದ ಹುಟ್ಟುಹಬ್ಬವನ್ನು ಆಚಿರಿಸಕೊಳ್ಳಲಿದ್ದಾರೆ. ಹೀಗಾಗಿ ಚುನಾವಣೆಗೂ ಮುನ್ನ ನಡೆದ ಪ್ರಚಾರ ಕಾರ್ಯಕ್ರಮಗಳಲ್ಲಿ ಮೇ 18 ಶುಕ್ರವಾರದಂದು ನಾನು ಪ್ರಮಾಣವಚನ ಸ್ವೀಕರಿಸುತ್ತೇನೆ. ಮುಂದಿನ ಮುಖ್ಯಮಂತ್ರಿ ನಾನೇ ಎಂದು ಹೇಳಿದ್ದರು.

https://www.youtube.com/watch?v=YO0Wcn5mxCM

Share This Article
Leave a Comment

Leave a Reply

Your email address will not be published. Required fields are marked *