ಬೆಂಗಳೂರು: ಡಿಸಿಎಂ ಡಿಕೆಶಿ ವರ್ಸಸ್ ಮುನಿರತ್ನ (DK Shivakumar Vs Munirathna) ನಡುವೆ ಮತ್ತೆ ಮಾತಿನ ಡಿಶುಂ ಡಿಶುಂ ಜೋರಾಗಿದೆ. ರಾಜಕೀಯ ಹಾದಿ ರಂಪ ಬೀದಿ ರಂಪ ಮಾಡಿಕೊಂಡಿದ್ದಾರೆ. ಕರಿ ಟೋಪಿ ಕಲಹ..! ಜಗಳ..ಜಟಾಪಟಿ ಜಿದ್ದಿಗೆ ಜೆ.ಪಿ.ಪಾರ್ಕ್ ಸಾಕ್ಷಿ ಆಯ್ತು. ಎಲ್ಲರೆದುರೇ ಹಗೆತನ ಪ್ರದರ್ಶನ ಆಗಿದ್ದು, ಡಿಕೆಶಿಗೆ ಸ್ಥಳದಲ್ಲೇ ಕೌಂಟರ್ ಕೊಟ್ಟಿದ್ದಾರೆ. ಹಾಗಾದ್ರೆ ಕಾಲು ಕೆರೆದು ಜಗಳ ತೆಗೆದ್ರಾ ಡಿಕೆಶಿ? ಏಯ್ ಕರಿ ಟೋಪಿ ಎಂಎಲ್‌ಎ ಎಂದು ಕರೆದಿದ್ದು ಏಕೆ? ಹಳೇ ದುಷ್ಮನಿಗಳ ನಯಾ ವಾರ್ ಸೀನ್ ಟು ಸೀನ್ ರೋಚಕ ಸ್ಟೋರಿ ಇಲ್ಲಿದೆ ನೋಡಿ.
ಗೇಲಿ.. ಅಪಹಾಸ್ಯ.. ಲೇವಡಿ.. ಕುಚೋದ್ಯ.. ಕಿಚಾಯಿಸಿದ ಡಿಕೆ.. ಕೋಪಗೊಂಡ ಮುನಿರತ್ನ.. ಬಹಿರಂಗ ವೇದಿಕೆಯಲ್ಲೇ ಡಿಕೆಶಿ ವರ್ಸಸ್ ಮುನಿ ಡೈಲಾಗ್ ವಾರ್. ಕುಂದು-ಕೊರತೆ ಆಲಿಸುವ ಸಭೆಯಲ್ಲಿ ಅತಿರಂಜನೆಯ ಪ್ರಹಸನ. ಇವತ್ತು ಬೆಂಗಳೂರಿನ ಜೆಪಿ ಪಾರ್ಕ್ ನಲ್ಲಿ (Bengaluru JP Park) ದೊಡ್ಡ ಹೈಡ್ರಾಮಾವೇ ನಡೆಯಿತು.
ಹಳೆ ದುಷ್ಮನಿ. ಹೊಸ ದಂಗಲ್ ಜೋರಾಗಿತ್ತು. ಬೇಕಂತಲೇ ಕೆಣಕಿದ ಡಿಕೆ. ಸೆಟೆದು ನಿಂತ ಮುನಿರತ್ನ. ಗಣವೇಷದಲ್ಲೇ ಕಾರ್ಯಕ್ರಮಕ್ಕೆ ಬಂದಿದ್ದ ಮುನಿರತ್ನರನ್ನ `ಕರಿಟೋಪಿ ಎಂಎಲ್‌ಎ’ (Kari Topi MLA) ಬಾ ಎಂದು ಡಿಕೆಶಿ ಅಣಕಿಸಿದ್ರು. ಈ ವೇಳೆ ಕೋಪಗೊಂಡು ಮುನಿರತ್ನ ವೇದಿಕೆಗೆ ನುಗ್ಗಿದ್ರು. ಆಗ ಗಲಾಟೆ ಜೋರಾಯ್ತು.
ಯೆಸ್, ಜೆ.ಪಿ ಪಾರ್ಕ್‌ನಲ್ಲಿ ಇವತ್ತು ಡಿಕೆಶಿ ಸಾರ್ವಜನಿಕ ಕುಂದು ಕೊರತೆ ಸಭೆಯಲ್ಲಿ ಭಾಗವಹಿಸಿದ್ರು. ಆದ್ರೆ ಸ್ಥಳೀಯ ಶಾಸಕ, ಸಂಸದರಿಗೆ ಆಹ್ವಾನ ಇಲ್ಲ ಎಂದು ಮುನಿರತ್ನ ಆಕ್ರೋಶ ಹೊರಹಾಕಿದ್ರು. ನಡಿಗೆ ಮುಗಿಸಿ ವೇದಿಕೆ ಕಾರ್ಯಕ್ರಮಕ್ಕೆ ಡಿಕೆಶಿ ಅಗಮಿಸಿದಾಗ ಮುನಿರತ್ನ ಪ್ರೋಟೋಕಾಲ್ ಪ್ರಶ್ನಿಸಿದ್ದಾರೆ. ಆಗ ಮೈಕ್ ಕಿತ್ತುಕೊಂಡು ಮುನಿರತ್ನ ಆಕ್ರೋಶ ಹೊರಹಾಕ್ತಾರೆ. ಆದ್ರೆ ಡಿಕೆಶಿ ಅಮೇಲೆ ಮಾತಾಡೋಣ ಎಂದಷ್ಟೇ ಹೇಳ್ತಾರೆ. ಅಲ್ಲಿ ನಡೆದಿದ್ದೇನು..?
ಮುನಿರತ್ನ: ಒಂದೇ ಒಂದು ನಿಮಿಷ ಮೈಕ್ ಕೊಡಿ
ಡಿಕೆಶಿ: ಕೂತುಕೊಳ್ಳಿ, ಅಮೇಲೆ ಮಾತಾಡೋಣ
ಮುನಿರತ್ನ: ನೀವ್ ಮೈಕ್ ಕೊಡಿ ನಾನ್ ಮಾತಾಡ್ತೀನಿ
ಮುನಿರತ್ನ: ಎಲ್ಲ ಮತದಾರ ದೇವರುಗಳಿಗೆ ನಮಸ್ಕಾರ, ಈ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ಇಲ್ಲ, ಆದರೂ ಬೆಂಗಳೂರಿನ ಓರ್ವ ಪ್ರಜೆಯಾಗಿ ಬಂದಿದ್ದೇನೆ, ನಿಮ್ಮ ಜೊತೆ ನಾನು ಕೂತುಕೊಳ್ತೇನೆ.
ಮುನಿರತ್ನ: ಇದು ಕರ್ನಾಟಕ ರಾಜ್ಯ ಸರ್ಕಾರದ ಕಾರ್ಯಕ್ರಮ.. ಒಬ್ಬ ಶಾಸಕನಿಗೆ ಏನು ಗೌರವ ಕೊಡಬೇಕೋ ಕೊಟ್ಟಿದ್ದಾರೆ. ಅವರು ಆಹ್ವಾನ ಮಾಡಿದ್ದಾರೆ ಅದಕ್ಕೆ ಸಂತೋಷ. ಒಬ್ಬ ಸಂಸದರು ಇಲ್ಲಿ ಇಲ್ಲ. ಶಾಸಕರು ಇಲ್ಲ. ಇದು ಸಾರ್ವಜನಿಕರ ಕುಂದುಕೊರತೆ ಸಭೆನಾ ಅಂತಾ ನನಗೆ ಗೊತ್ತಿಲ್ಲ. ನೀವು ನನಗೆ ಅವಮಾನ ಮಾಡ್ತಿರೋದು ಮೊದಲನೇ ತಪ್ಪು. ಇದು ಸರ್ಕಾರದ ಕಾರ್ಯಕ್ರಮ. ಮುಖ್ಯ ಆಯುಕ್ತರೇ ಈವರೆಗೂ ನನಗೆ ಆಹ್ವಾನ ಕೊಟ್ಟಿಲ್ಲ. ನಿಮಗೆ ಗೊತ್ತಿರಲಿ. ರಾಜಕೀಯನ ಆಮೇಲೆ ಮಾತಾಡ್ರಿ.
ಡಿಕೆಶಿ: ನಾವು ಆಮೇಲೆ ಮಾತಾಡೋಣ..
ಮುನಿರತ್ನ: ರೀ ಒಬ್ಬ ಎಂಪಿ ಫೋಟೋ ಇಲ್ಲ. ಒಬ್ಬ ಎಂಎಲ್‌ಎ ಫೋಟೋ ಇಲ್ಲದೆ ಇದು ಒಂದು ಪಬ್ಲಿಕ್ ಕಾರ್ಯಕ್ರಮನಾ… ಇದು ಸಾರ್ವಜನಿಕರ ಕುಂದುಕೊರತೆ ಕಾರ್ಯಕ್ರಮನಾ… ಅಥವಾ ಇದು ಕಾಂಗ್ರೆಸ್ ಕಾರ್ಯಕ್ರಮನಾ.. ಇದು ಹೆಂಗೇ ಸಾರ್ವಜನಿಕರ ಕಾರ್ಯಕ್ರಮ ಆಗುತ್ತೆ?
ಹೀಗೆ ಮುನಿರತ್ನ ವೇದಿಕೆಯ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಡಿಕೆಶಿ ಬೆಂಬಲಿಗರು ಆಕ್ರೋಶ ಹೊರಹಾಕಿದ್ರು. ಆಗ ಮುನಿರತ್ನ ಅಲ್ಲೇ ಕುಳಿತು ಪ್ರತಿಭಟನೆ ನಡೆಸಲು ಮುಂದಾದ್ರು. ಆಗ ಡಿಕೆಶಿ ಬೆಂಬಲಿಗರು ನುಗ್ಗಲು ಯತ್ನಿಸಿದ್ರು. ತಕ್ಷಣ ಪೊಲೀಸರು ಮುನಿರತ್ನರನ್ನ ಹಿಡಿದುಕೊಂಡು ಕಾರ್ಯಕ್ರಮ ಸ್ಥಳದಿಂದ ಹೊರಗೆ ಬರಲು ಯತ್ನಿಸಿದ್ರು. ಆಗ ಒಂದ್ಕಡೆ ಡಿಕೆ ಡಿಕೆ ಘೋಷಣೆ ಮೊಳಗಿದ್ರೆ, ಇನ್ನೊಂದು ಕಡೆ ಆರ್‌ಎಸ್‌ಎಸ್ ವಿರೋಧಿ ಡಿಕೆ ಅಂತಾ ಘೋಷಣೆ ಕೂಗಿದ್ರು. ಆಗ ಪರಿಸ್ಥಿತಿ ಬಿಗಾಡಾಯಿಸಿತು.
ಒಟ್ನಲ್ಲಿ ಡಿಸಿಎಂ, ಎಂಎಲ್‌ಎ ನಡುವಿನ ವೈಯುಕ್ತಿಕ ವಾರ್ ಕರಿಟೋಪಿ ಕೂಗಿನತ್ತ ತಿರುಗಿದ್ದು, ಡಿಸಿಎಂ, ಮುನಿರತ್ನ ಗಲಾಟೆ ಟ್ವಿಸ್ಟ್ ಪಡೆದುಕೊಂಡಿದ್ದು ಸದ್ಯಕ್ಕೆ ಎಂಡ್ ಆಗುವ ಲಕ್ಷಣ ಇಲ್ಲ ಅನ್ಸುತ್ತೆ.