ಕಾರ್ಗಿಲ್ ವಿಜಯೋತ್ಸವ: ವಿಜಯ್ ದಿವಸದ ಬಗ್ಗೆ ನೀವು ತಿಳಿಯಬೇಕಾದ 10 ಪ್ರಮುಖ ವಿಷಯಗಳು

Public TV
3 Min Read

ಪಾಕಿಸ್ತಾನದ ವಿರುದ್ಧ ಕಾರ್ಗಿಲ್ ಯುದ್ಧ ಗೆದ್ದು ಇಂದಿಗೆ 23 ವರ್ಷವಾಗಿದೆ. 1999ರ ಮೇ 3ರಂದು ಅಂದಿನ ಪಾಕ್ ಸೇನಾ ಮುಖ್ಯಸ್ಥ ಪರ್ವೇಜ್ ಮುಷರ್ರಫ್ ಕುತಂತ್ರದಿಂದ ಕಾರ್ಗಿಲ್‍ಗೆ 5000 ಯೋಧರನ್ನು ನುಗ್ಗಿಸಿದ್ದ. ಕುರಿಗಾಹಿಗಳ ಸುಳಿವಿನ ಮೂಲಕ ಮಾಹಿತಿ ಪಡೆದ ಭಾರತದ 20,000 ಯೋಧರು ಮುಗಿಬಿದ್ದು ಕಪಟಿ ಪಾಕಿಸ್ತಾನವನ್ನು ಒದ್ದೋಡಿಸಿದರು. ಈ ಹೋರಾಟದಲ್ಲಿ 700ಕ್ಕೂ ಹೆಚ್ಚು ಯೋಧರು ಹುತಾತ್ಮರಾದರು. ಅವರ ತ್ಯಾಗ ಬಲಿದಾನ ಸ್ಮರಿಸುತ್ತಾ ಜುಲೈ 26ರನ್ನು ಭಾರತ ಕಾರ್ಗಿಲ್ ವಿಜಯ ದಿವಸ್ ಆಚರಿಸುತ್ತಿದೆ. ಸ್ವಾತಂತ್ರ್ಯ ದಿನಾಚರಣೆ 75ನೇ ವರ್ಷದ ಸಂದರ್ಭದಲ್ಲಿ ಈ ವಿಶಿಷ್ಟ ದಿನವನ್ನು ದೇಶದ್ಯಾಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ಕಾರ್ಗಿಲ್ ವಿಜಯೋತ್ಸವದ ಬಗ್ಗೆ ಕುತೂಹಲ ಮೂಡಿಸುವ 10 ವಿಷಯಗಳನ್ನು ಇಲ್ಲಿ ನೀಡಲಾಗಿದೆ.

* ಪಾಕಿಸ್ತಾನವು ತನ್ನ ಪಡೆಗಳನ್ನು ಮತ್ತು ಅರೆಸೈನಿಕ ಪಡೆಗಳನ್ನು ಆಪರೇಷನ್ ಬದ್ರ್ ಅಡಿಯಲ್ಲಿ ಎಲ್‍ಒಸಿಯ(ಗಡಿ ನಿಯಂತ್ರಣ ರೇಖೆ) ಭಾರತದ ಕಾರ್ಗಿಲ್ ಎನ್ನುವ ಸ್ಥಳಕ್ಕೆ ರಹಸ್ಯವಾಗಿ ಕಳುಹಿಸಿತ್ತು. ನಂತರ ಪಾಕಿಸ್ತಾನವು ಈ ಕಾರ್ಗಿಲ್‍ನ 130 ರಿಂದ 200 ಚದರ ಕಿ.ಮೀ ನಡುವಿನ ಪ್ರದೇಶವನ್ನು ಆಕ್ರಮಿಸಿಕೊಂಡಿತ್ತು.

* ಕಾಶ್ಮೀರದಿಂದ ಲಡಾಖ್‍ಗಿದ್ದ ಸಂಪರ್ಕವನ್ನು ಕಡಿತಗೊಳಿಸುವುದು ಹಾಗೂ ಸಿಯಾಚಿನ್ ಕಣಿವೆಯಲ್ಲಿರುವ ಜನರನ್ನು ಹಸಿವಿನಿಂದ ಸಾಯಿಸುವುದು ಪಾಕಿಸ್ತಾನದ ಯೋಜನೆಯಾಗಿತ್ತು. ಅಷ್ಟೇ ಅಲ್ಲದೇ ಭಾರತ ಹಾಗೂ ಪಾಕ್‍ನ ವೈರತ್ವಕ್ಕೆ ಮುಖ್ಯ ಬುನಾದಿ ಆಗಿರುವ ಕಾಶ್ಮೀರ ಸಮಸ್ಯೆಯಲ್ಲಿ ಭಾರತಕ್ಕೆ ಕೆಲವು ಷರತ್ತುಗಳನ್ನು ಒಪ್ಪಿಕೊಳ್ಳುವಂತೆ ಮಾಡುವುದು ಈ ಕುತಂತ್ರದ ಭಾಗವಾಗಿತ್ತು.

* ಕಾರ್ಗಿಲ್ ಬೆಟ್ಟದ ಎತ್ತರದ ಪ್ರದೇಶದಲ್ಲಿ ಪಾಕ್ ಸೈನಿಕರು ಅವಿತಿದ್ದರೆ ಭಾರತದ ಸೈನಿಕರು ಕೆಳಗಡೆ ಇದ್ದರು. ಭಾರತ ಸೈನಿಕರ ಚಲನವಲನಗಳನ್ನು ತಿಳಿದುಕೊಳ್ಳುತ್ತಿದ್ದ ಪಾಕ್ ಸೈನಿಕರು ಸುಲಭವಾಗಿ ದಾಳಿ ಮಾಡುತ್ತಿದ್ದರು. ಪರಿಸ್ಥಿತಿ ಕಠಿಣವಾಗಿದ್ದರೂ ಕಾರ್ಗಿಲ್‍ನ್ನು ರಕ್ಷಿಸಲು ಭಾರತ ವಿಶೇಷ ಪಡೆಗಳೊಂದಿಗೆ ಸುಮಾರು 30,000 ಸೈನಿಕರನ್ನು ಕಾರ್ಗಿಲ್ ದ್ರಾಸ್ ಪ್ರದೇಶಕ್ಕೆ ಕಳುಹಿಸಿತ್ತು. ಅಲ್ಲಿ 527ಕ್ಕೂ ಹೆಚ್ಚು ಸೈನಿಕರು ಅಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂಡರು.

* ಮೇಲಿನಿಂದ ದಾಳಿಯಾಗುತ್ತಿದ್ದರೂ ಎದೆಗುಂದದ ನಮ್ಮ ಸೈನಿಕರು ವಿಶ್ವವೇ ನಿಬ್ಬೆರಾಗುವಂತೆ ಸಾಹಸ ಪ್ರದರ್ಶನ ತೋರಿದ್ದರು.ಬೋಫೋರ್ಸ್ ಗನ್ ಮೂಲಕ ಸೈನಿಕರು ಪಾಕಿಸ್ತಾನದ ಸೇನಾ ಬಂಕರ್‍ಗಳನ್ನೇ ಧ್ವಂಸ ಮಾಡಿದ್ದರು. ಕಾರ್ಗಿಲ್‍ನ ಮೇಲ್ಭಾಗಕ್ಕೆ ಭಾರತೀಯ ವಾಯುಪಡೆ ನುಗ್ಗಿ ಯಶಸ್ವಿಯಾಗಿ ಪಾಕ್ ಸೈನಿಕರನ್ನು ಓಡಿಸಿತ್ತು.

* ಪಾಕಿಸ್ತಾನದ ವಾಯುಪಡೆಯ ನಿವೃತ್ತ ಕಮಾಂಡರ್ ಕೈಸರ್ ತುಫೈಲ್ ಅವರು ಯುದ್ಧದ ಬಳಿ ಪಾಕಿಸ್ತಾನದ ಯೋಜನೆಗಳನ್ನು ಭಾರತೀಯ ವಾಯುಯಾನ ಮತ್ತು ರಕ್ಷಣಾ ನಿಯತಕಾಲಿಕೆಗೆ ಬಹಿರಂಗಪಡಿಸಿದರು.

* ಕಾರ್ಗಿಲ್‍ನ ಅಕ್ರಮವಾಗಿ ಪಾಕಿಸ್ತಾನವು ಹೊಂಚು ಹಾಕಿದ್ದರ ಹಿಂದಿನ ಮಾಸ್ಟರ್‌ ಮೈಂಡ್‌ ಪಾಕಿಸ್ತಾನದ ಆಗಿನ ಆರ್ಮಿ ಜನರಲ್ ಪರ್ವೇಜ್ ಮುಷರಫ್, ಪಾಕಿಸ್ತಾನ್ ಎಕ್ಸ್ ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಮಹ್ಮದ್ ಅಹ್ಮದ್, ಮೇಜರ್ ಜನರಲ್ ಜಾವೇದ್ ಹಸನ್, ಪಾಕಿಸ್ತಾನದ ಸೇನೆಯ ಮೇಜರ್ ಜನರಲ್ ಅಶ್ರಫ್ ರಶೀದ್ ಆಗಿದ್ದರು.

* ಕುತೂಹಲ ವಿಷಯ ಏನೆಂದರೆ ನಾವು ಭಾರತದ ಮೇಲೆ ದಾಳಿ ಮಾಡುತ್ತಿದ್ದೇವೆ ಎಂಬ ವಿಚಾರ ಪಾಕಿಸ್ತಾನದ ಅಂದಿನ ಪ್ರಧಾನಿ ನವಾಜ್ ಷರೀಫ್ ಅವರಿಗೆ ತಿಳಿದಿರಲಿಲ್ಲ.

* 1999ರ ಮೇ 3ರಂದು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿದ್ದ ಪಾಕ್ ಸೇನೆ ಜುಲೈ ಮೊದಲ ವಾರದಲ್ಲಿ ಸೋಲನ್ನು ಒಪ್ಪಿಕೊಂಡಿತು. ಜುಲೈ 26ರಂದು ಆಕ್ರಮಿತ ಭಾರತೀಯ ಪ್ರದೇಶಗಳನ್ನು ತೊರೆಯುವಂತೆ ಪಾಕಿಸ್ತಾನಿ ಪಡೆಗಳಿಗೆ ಸೂಚಿಸುವ ಮೂಲಕ ಯುದ್ಧ ಕೊನೆಗೊಂಡಿತು. ಈ ಯುದ್ಧವಲ್ಲಿ ಭಾರತ ವಿಜಯ ಸಾಧಿಸಿದ್ದು ಇತಿಹಾಸ ಪುಟದಲ್ಲಿ ದಾಖಲಾಗಿದೆ.

* ಕಾರ್ಗಿಲ್ ವಿಜೋತ್ಸವದ ನೆನಪಿಗಾಗಿ ಪ್ರತಿ ವರ್ಷ ಜುಲೈ 26ರಂದು ಪ್ರಧಾನಿ ಆದವರು ಹುತಾತ್ಮ ಯೋಧರಿಗೆ ಗೌರವ ಸಲ್ಲಿಸುತ್ತಾರೆ. ಇದನ್ನೂ ಓದಿ: ಭಾರತೀಯರು, ಸಿಖ್ ದೇಶಬಾಂಧವರು ಆಫ್ಘಾನ್‍ಗೆ ಮರಳಿ: ತಾಲಿಬಾನ್

* ಕಾರ್ಗಿಲ್‍ನ್ನು ರಕ್ಷಿಸಲು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದ ಕ್ಯಾಪ್ಟನ್ ಮನೋಜ್ ಕುಮಾರ್ ಪಾಂಡೆ, ಕ್ಯಾಪ್ಟನ್ ವಿಕ್ರಮ್ ಬಾತ್ರಾ ಮತ್ತು ಕ್ಯಾಪ್ಟನ್ ಕೀಶಿಂಗ್ ಕ್ಲಿಫರ್ಡ್ ನೋಂಗ್ರಮ್ ಅವರಿಗೆ ಮರಣೋತ್ತರವಾಗಿ ಪರಮವೀರ ಚಕ್ರ ಹಾಗೂ ಮಹಾವೀರ ಚಕ್ರವನ್ನು ಭಾರತ ಸರ್ಕಾರ ನೀಡಿ ಹುತಾತ್ಮ ಯೋಧರನ್ನು ಗೌರವಿಸಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *