ಯಶ್ (Yash) ಬಾಲಿವುಡ್‌ನಲ್ಲಿ ರಾಕಿ ಹವಾ ನಿಂತಿಲ್ಲ. ನಿಲ್ಲೋದೂ ಇಲ್ಲ. ಹೊಸ ಸಿನಿಮಾ ಘೋಷಣೆ ಆಗಿಲ್ಲ. ಅಷ್ಟರಲ್ಲಿ ಬಾಲಿವುಡ್ ಸ್ಟಾರಿಣಿಯೊಬ್ಬರು ಯಶ್ ಜೊತೆ ಮಾತ್ರ ನಟಿಸುತ್ತೇನೆ. ಪ್ರಭಾಸ್, ಅಲ್ಲು ನಕೋ ಬಾಬಾ ಎಂದಿದ್ದಾಳೆ. ಅದ್ಯಾಕೆ ಎಲ್ಲರನ್ನೂ ಬಿಟ್ಟು ರಾಕಿ ಹಿಂದೆ ಬಿದ್ದಳಾ ಹೆಣ್ಣು? ಪ್ರಭಾಸ್ ಫ್ಯಾನ್ಸ್ ಕುದ್ದಿದ್ಯಾಕೆ? ಇಲ್ಲಿದೆ ಮಾಹಿತಿ.

ಕರೀನಾ (Kareena Kapoor) ಹೀಗಂದಿದ್ದೇ ಐತಿಹಾಸಿಕ ಸಾಧನೆ ಅಂದುಕೊಳ್ಳಬೇಕಿಲ್ಲ. ಕರೀನಾಗೆ ಮದುವೆಯಾಗಿದೆ. ಮಗು ಕೂಡ ಇದೆ. ರಿಟೈರ್‌ಮೆಂಟ್ ಹೊಸಿಲಲ್ಲಿ ಕೇಕೆ ಹಾಕುತ್ತಿದೆ. ಬಾಲಿವುಡ್ ಪಾಲಿಗೆ ಕರೀನಾ ಈಗ ಆಂಟಿ. ಈ ಕರೀನಾ ಜತೆ ರಾಕಿ ಡ್ಯೂಯೆಟ್ ಹಾಡೋದಾ? ಅಬ್ಬಬ್ಬಾ ಅಂದ್ರೆ ರವೀನಾ ಟಂಡನ್ ಮಾಡಿದ್ರಲ್ಲ.
ಅಂಥ ಕ್ಯಾರೆಕ್ಟರ್‌ಗೆ ಡ್ರೆಸ್ ಹೊಲಿಸಬಹುದು. ಅದು ಬಿಟ್ಟು ಹೀರೋಯಿನ್ ಪಟ್ಟಾನೇ ಬೇಕು. ಯಶ್ ಜೊತೆನೇ ಕುಣಿಬೇಕು. ಅಂತಂದ್ರೆ ಯಶ್ ಫ್ಯಾನ್ಸ್ ಸೈಫ್ ಸಿನಿಮಾನಾ ಬ್ಯಾನ್ ಮಾಡೋದು ಶತಸಿದ್ಧ.

