ಸಾಹಸ ಪ್ರದರ್ಶನ ವೇಳೆ ಬೆಂಕಿಗೆ ಬಲಿಯಾದ ಕರಾಟೆ ಮಾಸ್ಟರ್

Public TV
1 Min Read

ಚೆನ್ನೈ: ಸಾಹಸ ಪ್ರದರ್ಶನ ವೇಳೆ ನಡೆದ ಅನಾಹುತದಲ್ಲಿ ಕರಾಟೆ ಮಾಸ್ಟರ್ ಬೆಂಕಿಗೆ ಬಲಿಯಾಗಿರುವ ಘಟನೆ ಪುದುಕೊಟ್ಟೈ ಜಿಲ್ಲೆಯಲ್ಲಿ ನಡೆದಿದೆ.

ಬಾಲಾಜಿ ಮೃತರಾಗಿದ್ದಾರೆ. ಇವರು ಕರಾಟೆ ಮಾಸ್ಟರ್ ಆಗಿದ್ದರು. ಪುದುಕೊಟ್ಟೈನಲ್ಲಿ ತೆರೆದ ಮೈದಾನದಲ್ಲಿ ಬೆಂಕಿಯೊಂದಿಗೆ ಸಾಹಸ ನಡೆಸುತ್ತಿದ್ದರು. ಈ ವೇಳೆ ನಡೆದ ಅವಘಡದಲ್ಲಿ ಸಾವನ್ನಪಿದ್ದಾರೆ. ಇದನ್ನೂ ಓದಿ:  ಕೋಟಿಗಟ್ಟಲೆ ಹಣ ಸಂಭಾವನೆ ಪಡೆಯುತ್ತಾರೆ ಪರಮ ಸುಂದರಿ

ಭಾರೀ ಗಾಳಿಯಿಂದಾಗಿ ಬೆಂಕಿ ವೇಗವಾಗಿ ಹಬ್ಬಿ ಸಾಹಸ ಪ್ರದರ್ಶಿಸುತ್ತಿದ್ದ ಬಾಲಾಜಿ ಮೈಗೆ ತಾಗಿದೆ. ಗಂಭೀರ ಸುಟ್ಟ ಗಾಯಗಳೊಂದಿಗೆ ಬಾಲಾಜಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಚಿಕಿತ್ಸೆಗೆ ಸ್ಪಂದಿಸದ ಅವರು ಇಂದು ನಿಧನರಾಗಿದ್ದಾರೆ. ಪುದುಕೊಟ್ಟೈ ಜಿಲ್ಲೆಯಲ್ಲಿ ನಡೆದ ಈ ಇಡೀ ಘಟನೆಯು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *