ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠಾಪನೆ- ಹುಬ್ಬಳ್ಳಿಯ ಕರಸೇವಕರ ಸಂಭ್ರಮ

Public TV
1 Min Read

ಹುಬ್ಬಳ್ಳಿ: ಅಯೋಧ್ಯೆಯ (Ayodhya) ರಾಮಮಂದಿರದಲ್ಲಿ (RamMandir) ಪ್ರಾಣಪ್ರತಿಷ್ಠೆ (Prana Pratishtha) ಸಮೀಪಿಸುತ್ತಿದ್ದಂತೆ ದೇಶದೆಲ್ಲೆಡೆ ಕೋಟ್ಯಂತರ ಹಿಂದೂಗಳ ಮನೆ-ಮನದಲ್ಲಿ ಸಂಭ್ರಮ ಮನೆಮಾಡಿದೆ. ಈ 500 ವರ್ಷಗಳ ಕನಸು ನನಸಾಗುವ ಹೊತ್ತಿನಲ್ಲಿ, ಈ ಹಿಂದೆ ಮಂದಿರಕ್ಕಾಗಿ ಹೋರಾಟ ನಡೆಸಿದ್ದ ಹುಬ್ಬಳ್ಳಿಯ ಕರಸೇವಕರು (Karasevak) ಸಂಭ್ರಮ ಆಚರಿಸಿದ್ದಾರೆ.

ಇಡೀ ದೇಶವೇ ಶ್ರೀರಾಮಮಯವಾಗಿದೆ. ನೂರಾರು ಕೋಟಿ ಹಿಂದೂಗಳ ಶತಮಾನಗಳ ಕನಸು ಸಾಕಾರಗೊಳುವ ಸಮಯ ಸಮೀಪಿಸುತ್ತಿದೆ. ಈ ಮಂದಿರ ಲಕ್ಷಾಂತರ ಮಂದಿ ಕರಸೇವಕರ ತ್ಯಾಗ ಹಾಗೂ ಹೋರಾಟದ ಫಲವಾಗಿದೆ. ಅದರಲ್ಲಿ ರಾಮಮಂದಿರಕ್ಕೆ ಅಡಿಪಾಯ ಹಾಕಲು ಅಂದು ತೆರಳಿದ್ದ ಹುಬ್ಬಳ್ಳಿಯ ಕರಸೇವಕರ ಪಾತ್ರವೂ ಪ್ರಮುಖವಾಗಿದೆ. ಇದನ್ನೂ ಓದಿ: ಬಾಲರಾಮನಿಗೆ ಅರ್ಪಿಸಲು ಹಲ್ವಾ ತಯಾರಿಸುವ ಕಡಾಯಿ ರೆಡಿ- ಏನಿದರ ವಿಶೇಷ?

ಹುಬ್ಬಳ್ಳಿ ಗುರುಸಿದ್ದಪ್ಪ ಎಂಬ ಕರಸೇವಕರು ತಮ್ಮ 27ನೇ ವಯಸ್ಸಿನಲ್ಲಿ ಅಯೋಧ್ಯೆಗೆ ತೆರಳಿ ಈ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಇದೀಗ ಕರಸೇವೆ ಮಾಡಿ ತಾವು ಜೀವಂತವಾಗಿರುವಾಗಲೇ ಮಂದಿರ ನಿರ್ಮಾಣವಾಗುವುದನ್ನು ಕಣ್ತುಂಬಿಕೊಳ್ಳಲು ತಮ್ಮ ಇಳಿವಯಸ್ಸಿನಲ್ಲಿ ಕಾದು ಕುಳಿತಿದ್ದಾರೆ.

ರೇಣುಕಾ ನಗರದ ಪ್ರಸನ್ನವೆಂಕಟ ಕಟ್ಟಿಯವರು ಸಹ ಒಬ್ಬರು. ಅವರು ಯುವಕರಾಗಿದ್ದಾಗ ಬಾಗಲಕೋಟೆಯಿಂದ ಅಯೋಧ್ಯೆಗೆ ತೆರಳಿದ್ದರು. ಅಲ್ಲದೇ ಅಂದು ಹಮ್ಮಿಕೊಂಡಿದ್ದ ರಾಮಪಾದುಕೆ ಅಭಿಯಾನದ ಪ್ರಮುಖ ರೂವಾರಿ ಸಹ ಆಗಿದ್ದರು. ಕಳೆದ ಮೂವತ್ತು ವರ್ಷಗಳ ಹಿಂದೆ ಅಯೋಧ್ಯೆಯಿಂದ ಪೂಜೆ ಮಾಡಿಸಿ ತಂದ ರಾಮನ ಪಾದುಕೆಗೆ ಇಂದಿಗೂ ಅವರು ನಿತ್ಯ ಪೂಜೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಭಕ್ತರು ಚಳಿಯಿಂದ ರಕ್ಷಿಸಿಕೊಳ್ಳಲು ಅಯೋಧ್ಯೆಯಲ್ಲಿ ಮಾಡಲಾಗಿದೆ ವಿಶೇಷ ವ್ಯವಸ್ಥೆ

Share This Article