ಸತತವಾಗಿ 12ನೇ ಬಾರಿ ಬಿಗ್ ಬಾಸ್ ಶೋ ರಿಜೆಕ್ಟ್ ಮಾಡಿದ ನಟ

Public TV
2 Min Read

ಮುಂಬೈ: ರಿಯಾಲಿಟಿ ಶೋಗಳಲ್ಲಿ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಳ್ಳುವ ಕಾರ್ಯಕ್ರಮ ಬಿಗ್ ಬಾಸ್. ಹಿಂದಿ, ಕನ್ನಡ, ತೆಲಗು, ತಮಿಳು ಭಾಷೆಗಳಲ್ಲಿ ಬಿಗ್ ಬಾಸ್ ನಡೆದಿವೆ. ಸಲ್ಮಾನ್ ಖಾನ್ ನಿರೂಪಣೆಯಲ್ಲಿ ಮೂಡಿ ಬರುವ ಹಿಂದಿ ಬಿಗ್‍ಬಾಸ್ ಈ ಬಾರಿ ತನ್ನ 12 ಸೀಸನ್ ಆರಂಭವಾಗಲಿದೆ. ಹಲವು ಸೆಲೆಬ್ರಿಟಿಗಳು ಬಿಗ್ ಬಾಸ್ ಮನೆ ಎಂಟ್ರಿ ಪಡೆಯಲು ತುದಿಗಾಲಲ್ಲಿ ನಿಂತಿದ್ದಾರೆ. ಆದ್ರೆ ಹಿಂದಿ ಕಿರುತೆರೆ ನಟ ಕರಣ್‍ವೀರ್ ಬೊಹ್ರಾ ಸತತವಾಗಿ 12ನೇ ಬಾರಿ ಬಂದ ಬಿಗ್ ಬಾಸ್ ಆಫರ್ ರಿಜೆಕ್ಟ್ ಮಾಡಿದ್ದಾರೆ.

ಕೆಲವು ದಿನಗಳ ಹಿಂದೆ ಸಂದರ್ಶನದಲ್ಲಿ ಮಾತನಾಡಿದ್ದ ಕರಣ್‍ವೀರ್, ಹೌದು, ನನಗೆ ಕಳೆದ 12 ಸೀಸನ್ ಗಳಿಂದಲೂ ಬಿಗ್‍ಬಾಸ್ ನಿಂದ ಆಫರ್ ಗಳು ಬರುತ್ತಿವೆ. ಈ ಬಾರಿಯೂ ಬಿಗ್ ಬಾಸ್ ಶೋನಿಂದ ಆಫರ್ ಬಂದಿದೆ. ಆದರೆ ವೈಯಕ್ತಿಕ ಕಾರಣಗಳಿಂದ ನಾನು ಬಿಗ್ ಬಾಸ್ ಮನೆಗೆ ಹೋಗ್ತಿಲ್ಲ ಅಂತಾ ತಿಳಿಸಿದ್ದಾರೆ.

ಕರಣ್‍ವೀರ್ 2000ನೇ ಇಸವಿಯಲ್ಲಿ ತಮ್ಮ ನಟನಾ ವೃತ್ತಿಯನ್ನು ಆರಂಭಿಸಿದ್ದಾರೆ. 18 ವರ್ಷಗಳಿಂದ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ಕರಣ್‍ವೀರ್ ಮನೆಮಾತಾಗಿದ್ದಾರೆ. ಹಿಂದಿಯ ಕ್ಯೂಂಕಿ ಸಾಸ್ ಕಭೀ ಬಹು ಥಿ, ಕಸೌಥಿ ಜಿಂದಗಿ ಕ್ಯಾ, ಖಬೂಲ್ ಹೈ, ನಾಗಿನ್-2 ಸೂಪರ್ ಹಿಟ್ ಧಾರಾವಾಹಿಗಳಲ್ಲಿ ಕರಣ್‍ವೀರ್ ನಟಿಸಿದ್ದಾರೆ. ಇತ್ತ ರಿಯಾಲಿಟಿ ಶೋ ನಿರೂಪಕರಾಗಿಯೂ ಕರಣ್‍ವೀರ್ ಗುರುತಿಸಿಕೊಂಡಿದ್ದಾರೆ.

ಈಗಾಗಲೇ ಹಿಂದಿಯ ಬಿಗ್ ಬಾಸ್ 12ನೇ ಆವೃತ್ತಿಯ ಪ್ರೋಮೋ ಸಹ ರಿಲೀಸ್ ಆಗಿದೆ. ಡಿಸೆಂಬರ್ ಮೊದಲ ಅಥವಾ ಅಂತ್ಯದಲ್ಲಿ ಬಿಗ್‍ಬಾಸ್-12 ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ.

ಇತ್ತ ಕನ್ನಡದ ಬಿಗ್ ಬಾಸ್ ಕನ್ನಡ 6ನೇ ಆವೃತ್ತಿಗಾಗಿ ನಟ ಸುದೀಪ್ ಅವರ ಪ್ರೋಮೋ ಶೂಟ್ ಸದ್ದಿಲ್ಲದೆ ನಡೆದಿದೆ. ಬಿಗ್ ಬಾಸ್ ರಿಯಾಲಿಟಿ ಶೋ ಈಗಾಗಲೇ ಸಾಕಷ್ಟು ಜನಪ್ರಿಯತೆ ಕಂಡುಕೊಂಡಿದೆ. ಅದರಲ್ಲೂ ಕಳೆದ ಸೀಸನ್ ನಲ್ಲಿ ಜನ ಸಾಮಾನ್ಯರಿಗೂ ಅವಕಾಶ ಕೊಟ್ಟಿದ್ದರಿಂದ ಸಾಕಷ್ಟು ಮಂದಿ 6 ಸೀಸನ್ ಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಈಗಾಗಲೇ ಸ್ಪರ್ಧಿಗಳ ಆಯ್ಕೆಯ ಪ್ರಕ್ರಿಯೆ ಆರಂಭವಾಗಿದೆ. ಬಿಗ್ ಬಾಸ್ ಮನೆಯೊಳಗೆ ಹೋಗಲು ಇಚ್ಚಿಸುವವರು ವೂಟ್ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಆಡಿಷನ್ ಕಾರ್ಯ ನಡೆಯುತ್ತಿದೆ. ಈ ವೇಳೆ ಸುದೀಪ್ ಅವರ `ಬಿಗ್ ಬಾಸ್ ಕನ್ನಡ-6′ ನ ಪ್ರೋಮೋ ಶೂಟ್ ಮಾಡಿ ಮುಗಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *